ಬೆಂಗಳೂರು : ಪ್ರಸಕ್ತ ಸಾಲಿನ ಐಪಿಎಲ್ ಕದನದಲ್ಲಿ ಬೆಂಗಳೂರು ತಂಡವು  ಇಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. 

ಇಲ್ಲಿಯವರೆಗೆ ವಿರಾಟ್ ಕೊಹ್ಲಿ ಪಡೆ 8 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ರಾಜಸ್ಥಾನ್ ರಾಯಲ್ಸ್ ಆಡಿದ 8 ಪಂದ್ಯಗಳಲ್ಲಿ 3 ಗೆಲುವನ್ನಷ್ಟೇ ಕಂಡಿದ್ದು 5 ಸೋಲು ಅನುಭವಿಸಿದೆ.

ಈ ಕದನ ಇಂದು ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದ್ದು, ದುಬೈ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ, ಬಹುತೇಕ ತಂಡಗಳು ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಸದ್ಯ ಇಲ್ಲಿಯ ಪಿಚ್ ನಿಧಾನಗತಿಯಲ್ಲಿ ವರ್ತಿಸುತ್ತಿದ್ದು ಸ್ಪಿನ್ನರ್‌ ಗಳಿಗೆ ಹೆಚ್ಚಿನ ನೆರವು ನೀಡುತ್ತಿದೆ.

ಅಲ್ಲದೇ, ಬ್ಯಾಟ್ಸಮನ್ ಗಳಿಗೂ ಪಿಚ್ ಲಾಭ ನೀಡುತ್ತಿದೆ. ಎರಡೂ ತಂಡಗಳಿಗೆ ಈ ಪಂದ್ಯ ಗೆಲ್ಲುವ ಒತ್ತಡ ನೀಡಿದೆ. ಆರ್ ಸಿಬಿ ತಂಡದಲ್ಲಿ ದೇವದತ್ ಪಡಿಕ್ಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ಗುರ್ಕೀರತ್ ಸಿಂಗ್ ಮನ್, ಶಿವಂ ದುಬ್, ವಾಷಿಂಗ್ಟನ್ ಸುಂದರ್, ಇಸುರು ಉದಾನಾ, ನವದೀಪ್ ಸೈನಿ, ಕ್ರಿಸ್ ಮೋರಿಸ್, ಯುಜುವೇಂದ್ರ ಆಡುವ ಸಾಧ್ಯತೆ ಇದೆ.

ರಾಜಸ್ಥಾನ ತಂಡದಲ್ಲಿ ಜೋಸ್ ಬಟ್ಲರ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್ / ರಾಬಿನ್ ಉತ್ತಪ್ಪ, ಸಂಜು ಸ್ಯಾಮ್ಸನ್, ಸ್ಟೀವ್ ಸ್ಮಿತ್ (ನಾಯಕ), ರಿಯಾನ್ ಪರಾಗ್, ಮಹಿಪಾಲ್ ಲೋಮರ್, ಟಾಮ್ ಕರ್ರನ್, ರಾಹುಲ್ ತೆವಾಟಿಯಾ, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕಟ್ / ವರುಣ್ ಆರನ್ ಆಡುವ ಸಾಧ್ಯತೆ ಇದೆ. 

Leave a Reply

Your email address will not be published. Required fields are marked *

You May Also Like

ಕೆ. ಎಚ್. ಪಾಟೀಲ ಫುಟಬಾಲ್ ಲೀಗ್-2022 ಉದ್ಘಾಟನೆ

ಉತ್ತರಪ್ರಭ ಸುದ್ದಿ ಗದಗ: ಕರ್ನಾಟಕ ಸ್ಫೋರ್ಟ್ಸ್ ಆ್ಯಂಡ್ ಎಜ್ಯುಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ಕೆ.…

ಧೋನಿಗಿಂದು ಜನ್ಮದಿನ: ವಯಸ್ಸು ನಲವತ್ತು, ಹಂಗೇ ಇದೆ ಗೆಲ್ಲುವ ತಾಕತ್ತು

ನವದೆಹಲಿ: ಮ್ಯಾಚ್ ವಿನ್ನರ್ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 40ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.…

ಚೆನ್ನೈ ತಂಡದ ಕೆಲವರು ಸರ್ಕಾರಿ ನೌಕರಿ ಸಿಕ್ಕಂತೆ ಮಾಡುತ್ತಿದ್ದಾರೆ – ಸೆಹ್ವಾಗ್!

ಮುಂಬಯಿ : ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕ್ರಿಕೆಟ್ ನಲ್ಲಿ ಧೋನಿ ಸ್ಥಾನದಲ್ಲಿ ಧೋನಿ ಮಾತ್ರ ಇದ್ದಾರೆ…ಬೇರೆ ಯಾರೂ ಇಲ್ಲ ಎಂದ ರಾಹುಲ್!

ನಾಲ್ಕು ಬಾರಿ ಚಾಂಪಿಯನ್ ಆಗಿರುವ ಮುಂಬಯಿ ಇಂಡಿಯನ್ಸ್ ತಂಡದ ವಿರುದ್ಧ ಎರಡು ಸೂಪರ್ ಓವರ್ ಆಡಿ ಭರ್ಜರಿಯಾಗಿ ಗೆದ್ದು ಬೀಗಿರುವ ಖುಷಿಯಲ್ಲಿರುವ ಪ್ರೀತಿಯ ಹುಡುಗರು, ಈಗ ಆತ್ಮವಿಶ್ವಾಸದಲ್ಲಿದ್ದಾರೆ.