ದುಬೈ: 2020ರ ಆರನೇ ಐಪಿಎಲ್ ಪಂದ್ಯದದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಶತಕದ ಅಬ್ಬರಕ್ಕೆ ಆರ್.ಸಿ.ಬಿ. ತತ್ತರಿಸಿತು. ಅವರ ಶತಕದ ಬಲದಿಂದಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 97 ರನ್ ಗಳಿಂದ ಗೆದ್ದು ಬೀಗಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು ಭರ್ಜರಿ 206ರನ್ ಕಲೆಹಾಕಿತು. ನಾಯಕ ರಾಹುಲ್, ಮಯಾಂಕ್ ಅಗರವಾಲ್ ಓಪನಿಂಗ್ ಜೋಡಿ ಉತ್ತಮ ಆರಂಭ ಒದಗಿಸಿತು.

ರಾಹುಲ್ 132 (69 ಎಸೆತ, 14 ಬೌಂಡರಿ, 7 ಸಿಕ್ಸರ್) ಶತಕ ಬಾರಿಸಿದರು. ಮಯಾಂಕ್ 26, ನಿಕೋಲಸ್ ಪೂರನ್ 17 ರನ್ ಗಳಿಸಿದರು. ಶಿವಂ ದುಬೆ 33ಕ್ಕೆ 2 ವಿಕೆಟ್, ಯಜುವೇಂದ್ರ ಚಾಹಲ್ 25ಕ್ಕೆ1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ ಕೈಚೆಲ್ಲಿದ ಎರಡು ಕ್ಯಾಚ್ ಗಳು ಆರ್.ಸಿ.ಬಿ. ತಂಡಕ್ಕೆ ದುಬಾರಿಯಾಗಿ ಪರಿಣಮಿಸಿದವು.

ಕೆ.ಎಲ್.ರಾಹುಲ್ ಶತಕದ ಮೂಲಕ ಮಾಡಿದ ಕೆಲವು ದಾಖಲೆಗಳು

ಈ ಆವೃತ್ತಿಯಲ್ಲಿ ಮೊದಲು ಶತಕ ಸಿಡಿಸಿದ ಆಟಗಾರ

ಐಪಿಎಲ್ ನಲ್ಲಿ 2,000 ರನ್ ಗಳನ್ನು ವೇಗವಾಗಿ ಗಳಿಸಿದ ಆಟಗಾರ

ಸಚಿನ್ ತೆಂಡುಲ್ಕರ್ ಅವರ 8 ವರ್ಷಗಳ ದಾಖಲೆ ಅಳಿಸಿದ ರಾಹುಲ್

ಸಚಿನ್ ತೆಂಡುಲ್ಕರ್ 63 ಇನ್ನಿಂಗ್ಸ್ ಗಳಲ್ಲಿ 2,000 ರನ್ ಗಳಿಸಿದ್ದರೆ, ರಾಹುಲ್ 60 ಇನ್ನಿಂಗ್ಸ್ ಗಳಲ್ಲೇ 2,000 ರನ್ ಗಳಿಸುವ ಮೂಲಕ ದಾಖಲೆ ಬರೆದರು.

ಪಂಜಾಬ್ ನೀಡಿದ ಸವಾಲಿನ ಮೊತ್ತವನ್ನು ಹಿಮ್ಮೆಟ್ಟಿಸುವಲ್ಲಿ ಸೋತ ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 109 ರನ್ ಗಳಿಸುವಲ್ಲಿ ಆಲ್ ಔಟ್ ಆಯಿತು. ತಂಡ 17 ಓವರ್ ಗಳಿಗೆ ಆಟ ಮುಗಿಸಿತು.

ವಾಷಿಂಗ್ಟನ್ ಸುಂದರ್ 30, ಎಬಿಡಿವಿಲಿಯರ್ಸ್ 28, ಆರನ್ ಫಿಂಚ್ 20 ರನ್ ಗಳಿಸಿದರು. ಮುರುಗನ್ ಅಶ್ವಿನ್ 21ಕ್ಕೆ 3, ರವಿ ಬಿಷ್ನೋಯ್ 32ಕ್ಕೆ 3 ಮತ್ತು ಷೆಲ್ಡನ್ ಕಾಟ್ರೆಲ್ 17ಕ್ಕೆ 2 ವಿಕೆಟ್ ಪಡೆದರು.

132 ರನ್ ಗಳಿಸುವ ಮೂಲಕ ಭಾರತೀಯ ಐಪಿಎಲ್ ಗರಿಷ್ಠ ಸ್ಕೋರ್ ದಾಖಲಿಸಿದ ದಾಖಲೆಯನ್ನು ಕೆ.ಎಲ್.ರಾಹುಲ್ ನಿರ್ಮಿಸಿದರು. ಪಂದ್ಯಪುರುಷ ಪ್ರಶಸ್ತಿಗೂ ಭಾಜನರಾದರು.

Leave a Reply

Your email address will not be published. Required fields are marked *

You May Also Like

ಗಂಗೂಲಿ ಬಗ್ಗೆ ಪಾರ್ಥಿವ್ ಪಟೇಲ್ ಹೇಳಿದ್ದೇನು?

ಮುಂಬಯಿ : ಕ್ರಿಕೆಟ್ ಇತಿಹಾಸದಲ್ಲಿ ಎಂ.ಎಸ್. ಧೋನಿಗಿಂತಲೂ ಸೌರವ್ ಗಂಗೂಲಿಯವರು ಬಹಳ ಪರಿಣಾಮಕಾರಿ ನಾಯಕ ಎಂದು ಭಾರತದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ.

ಇಂದಿನ ಪಂದ್ಯದಲ್ಲಿ ಆರ್ ಸಿಬಿ, ರಾಜಸ್ಥಾನವನ್ನು ಮಣಿಸಲಿದೆಯೇ?

ಬೆಂಗಳೂರು : ಪ್ರಸಕ್ತ ಸಾಲಿನ ಐಪಿಎಲ್ ಕದನದಲ್ಲಿ ಬೆಂಗಳೂರು ತಂಡವು ಇಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಚಿಕ್ಕ ವಯಸ್ಸಿನಲ್ಲಿಯೇ ಐಪಿಎಲ್ ನಲ್ಲಿ ಅಬ್ಬರಿಸಿದ ವೀರರು ಇವರು!

ದುಬೈ : ಐಪಿಎಲ್ ನ 6ನೇ ಪಂದ್ಯದ ಸಮಯದಲ್ಲಿ ಭಾರತದ ಯುವ ಆಟಗಾರ ಪೃಥ್ವಿ ಶಾ…

ಕೆ. ಎಚ್. ಪಾಟೀಲ ಫುಟಬಾಲ್ ಲೀಗ್-2022 ಉದ್ಘಾಟನೆ

ಉತ್ತರಪ್ರಭ ಸುದ್ದಿ ಗದಗ: ಕರ್ನಾಟಕ ಸ್ಫೋರ್ಟ್ಸ್ ಆ್ಯಂಡ್ ಎಜ್ಯುಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ಕೆ.…