ತೆಲಂಗಾಣ: ಶ್ರೀಶೈಲಂ ಪವರ್‌ ಸ್ಟೇಷನ್‌ನಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 10 ಜನರನ್ನು ರಕ್ಷಿಸಲಾಗಿದೆ. ಅಲ್ಲದೇ, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಸದ್ಯ 6 ಜನ ಶ್ರೀಶೈಲಂನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನ ಒಳಗೆ ಸಿಲುಕಿ ಹಾಕಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ತೆಲಂಗಾಣದ ನಾಗರ ಕರ್ನೂಲ್ ಜಿಲ್ಲೆಯಲ್ಲಿರುವ ಶ್ರೀಶೈಲಂ ಡ್ಯಾಂ ಕೆನೆಲ್ ನಲ್ಲಿ ಬೆಳಿಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ಇದರಿಂದಾಗಿ ಐವರು ಎಂಜನೀಯರ್ ಗಳು, ಇಬ್ಬರು ತಂತ್ರಜ್ಞರು ಸೇರಿದಂತೆ ಒಟ್ಟು 9 ಜನ ಬೆಂಕಿಯಲ್ಲಿ ಸಿಲುಕಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಪ್ಯಾನೆಲ್ ಬೋರ್ಡ್ ಗೆ ಬೆಂಕಿ ತಗುಲಿ, ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಈ ದುರಂತದ ವೇಳೆ ಕೆನೆಲ್ ನಲ್ಲಿದ್ದ 10 ಜನ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ಒಟ್ಟು 19 ಜನ ಒಳಗಿದ್ದರು. ಈ ಪೈಕಿ 10 ಜನರ ರಕ್ಷಣೆಯಾಗಿದ್ದು, 9 ಜನರಿಗಾಗಿ ಶೋಧ ನಡೆದಿದೆ. ಶ್ರೀಶೈಲಂ ಪವರ್ ಸ್ಟೇಷನ್ ನಲ್ಲಿ 6 ಯೂನಿಟ್ ಗಳಿಗೂ ಬೆಂಕಿ ಹರಡುತ್ತಿದ್ದು, ಎಲ್ಲೆಡೆ ಹೊಗೆ ತುಂಬಿಕೊಂಡಿದೆ.

Leave a Reply

Your email address will not be published. Required fields are marked *

You May Also Like

ತಮಿಳುನಾಡಿನಲ್ಲಿ ಉಚಿತ ಕೊರೊನಾ ಲಸಿಕೆ ವಿತರಣೆ – ಸಿಎಂ ಘೋಷಣೆ!

ತಿರುಚ್ಚಿ : ತಮಿಳುನಾಡಿನ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ.

30ಕೆ.ಜಿ ಗೋಲ್ಡ್ ಹಿಂದಿನ ಈ ‘ಸ್ವಪ್ನ’ಸುಂದರಿ ಯಾರು?

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ದೇಶಕ್ಕೆ ಸಾಗಿಸಲ್ಪಟ್ಟ 30 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು…

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿ, ರುಂಡವನ್ನೇ ಕತ್ತರಿಸಿ ಪ್ರಿಯಕರನಿಗೆ ಅರ್ಪಿಸಿದ!

ಹೈದರಾಬಾದ್ : ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿ, ಅವಳ ರುಂಡವನ್ನೇ ಕತ್ತರಿಸಿ ಪ್ರಿಯಕರನ ಮನೆಯ ಮುಂದೆ ಇಟ್ಟ ಘಟನೆ ನಡೆದಿದೆ.

ಬಿರೇನ್ ಸಿಂಗ್ ಮಣಿಪುರ ಸಿಎಂ ಆಗಿ ಅವಿರೋಧವಾಗಿ ಆಯ್ಕೆ

ಉತ್ತರಪ್ರಭ ಸುದ್ದಿಮಣಿಪುರ: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಣಿಪುರದ ಹಂಗಾಮಿ ಸಿಎಂ ಎನ್ ಬಿರೇನ್ ಸಿಂಗ್…