ನವದೆಹಲಿ: ಕೇಂದ್ರ ಸರ್ಕಾರವು 59 App ಗಳನ್ನು ನಿಷೇಧಿಸಿ‌ ಮದ್ಯಂತರ ಆದೇಶ ಹೊರಡಿಸಿದೆ. 59 App ಗಳಲ್ಲಿ ಟಿಕ್ ಟಾಕ್ ಕೂಡ ಒಂದು. ಹೀಗಾಗಿ ಇದಕ್ಕೆ ಸಂಬಂಧಿಸಿದ ದಾಖಲಾತಿಯೊಂದಿಗೆ ಉತ್ತರ ನೀಡಲು ಟಿಕ್ ಟಾಕ್ ಸಂಸ್ಥೆ ಸಿದ್ಧವಿದ್ದು, ಸಂಬಂಧಿಸಿದ ಇಲಾಖೆಗೆ ಸ್ಪಷ್ಟಿಕರಣ ನೀಡಲಿದ್ದೇವೆ ಎಂದು ಟಿಕ್ ಟಾಕ್ ಇಂಡಿಯಾ ಮುಖ್ಯಸ್ಥ ನಿಖಿಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಟಿಕ್ ಟಾಕ್ ಸಂಸ್ಥೆಯು ಮಾಹಿತಿಯನ್ನು ಗೌಪ್ಯವಾಗಿ ಮತ್ತು ಸುರಕ್ಷತೆಯ ಎಲ್ಲ ಕ್ರಮಗಳನ್ನು ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಬರುವಂತಹ ಎಲ್ಲ ರೀತಿಯ ಕಾನೂನು ಅಳವಡಿಸಿಕೊಂಡು ಸುರಕ್ಷತೆಯನ್ನು ಹೊಂದಿದೆ. ಬೇರೆ ದೇಶದ ಜೊತೆ ಅದರಲ್ಲೂ ವಿಶೇಷವಾಗಿ ಚೀನಾ ಸರ್ಕಾರದೊಂದಿಗೆ ಗ್ರಾಹಕರ ಮಾಹಿತಿ ಹಂಚಿಕೊಂಡಿಲ್ಲ. ನಮಗೆ ಭಾರತದ ಗ್ರಾಹಕರ ಸುರಕ್ಷತೆ ಮತ್ತು ಏಕತೆ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಟಿಕ್ ಟಾಕ್ ಸಂಸ್ಥೆಯೂ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ಭಾರತದಲ್ಲಿ 14 ಭಾರತೀಯ ಭಾಷೆಗಳಲ್ಲಿ ಸಾವಿರಾರು ಮಿಲಿಯನ್ ಗ್ರಾಹಕರನ್ನು ಟಿಕ್ ಟಾಕ್ ಹೊಂದಿದ್ದು, ಅದರಲ್ಲಿ ಕಲಾವಿದರು, ಸಾಹಿತಿಗಳು, ಶಿಕ್ಷಣ ತಜ್ಞರು, ಹೀಗೆ ಹಲವಾರು ಜೀವನೋಪಾಯಕ್ಕಾಗಿ ಟಿಕ್ ಟಾಕ್ ಆಪ್ ನಂಬಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಬ್ರೇಕಪ್ ಮಾಡಿಕೊಂಡ ಯುವತಿಗೆ ಹುಡುಗ ಮಾಡಿದ ನೀಚ ಕೆಲಸ ಎಂಥದ್ದು ಗೊತ್ತಾ?

ಜೈಪುರ : 6 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಯುವತಿ ಕೈ ಕೊಟ್ಟಿದ್ದಾಳೆ ಎಂಬ ಕಾರಣಕ್ಕೆ ಯುವಕನೊಬ್ಬ ಇಡೀ ಸಮಾಜವೇ ತಲೆ ತಗ್ಗಿಸುವಂತಹ ನೀಚ ಕೃತ್ಯಕ್ಕೆ ಕೈ ಹಾಕಿರುವ ಘಟನೆ ನಡೆದಿದೆ.

ದಿನದಿಂದ ದಿನಕ್ಕೆ ದೇಶದಲ್ಲಿ ಹೆಚ್ಚಾಗುತ್ತಿದೆ ಆತಂಕ!

ಬೆಂಗಳೂರು: ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಹಲವು ದೇಶಗಳಲ್ಲಂತೂ ಇದರ ನಾಗಾಲೋಟ…

ಮನೆಯಲ್ಲಿಯೇ ಯಶ್ : ಜ್ಯೂನೀಯರ್ ರಾಧಿಕಾ ಫುಲ್ ಖುಷ್..!

ಲಾಕ್​ಡೌನ್​ನಿಂದಾಗಿ ಯಶ್​ ಮನೆಯಲ್ಲಿಯೇ ಉಳಿಯುವಂತಾಗಿದ್ದು, ಮಕ್ಕಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ಜೂನಿಯರ್‌ ರಾಧಿಕಾ ಫುಲ್ ಖುಷಿಯಾಗಿದ್ದಾರೆ.

ರಾಜ್ಯದಲ್ಲಿಂದು 378 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 378 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5213 ಕ್ಕೆ ಏರಿಕೆಯಾದಂತಾಗಿದೆ.