ಇತ್ತಿಚೆಗಷ್ಟೆ ಪದ್ಮಶ್ರೀ ಪ್ರಶಸ್ತಿ ಪಡೆದ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ವಿರುದ್ಧ ನಟಿ ಕಂಗನಾ ರಾಣಾವತ್ ಹಲವು ಆರೋಪ ಮಾಡಿದ್ದಾರೆ. ಹೀಗಾಗಿ ಕರಣ್ ಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ನವದೆಹಲಿ: ನಿರ್ಮಾಪಕ ಕರಣ್ ಜೋಹರ್ ನೀಡಿದ್ದ ಪದ್ಮಶ್ರೀ ಪ್ರಶಸ್ತಿ ಹಿಂಪಡೆಯಬೇಕು ಎಂದು ನಟಿ ಕಂಗನಾ ರಾಣಾವತ್ ಮನವಿ ಮಾಡಿದ್ದಾರೆ.

ನೇರವಾಗಿಯೇ ಮಾತನಾಡುವ ವ್ಯಕ್ತಿತ್ವ ಇರುವ ಅವರು ಈ ಬಾರಿ ಕರಣ್ ಜೋಹರ್ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: ಸೂಪರ್ ಸ್ಟಾರ್ ಚಿತ್ರ ತಂಡದ ಗಿಫ್ಟ್ ಏನು ಗೊತ್ತಾ?

ಕರಣ್‌ ಜೋಹರ್‌ ಅವರಿಗೆ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ಅಂತರಾಷ್ಟ್ರೀಯ ವೇದಿಕೆಯಲ್ಲಿಯೇ ಸಿನಿಮಾ ರಂಗ ತೊರೆಯುವಂತೆ ನನಗೆ ಬೆದರಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ವಿರುದ್ಧ ಪಿತೂರಿ ನಡೆಸಿ ಅವರ ವೃತ್ತಿ ಜೀವನವನ್ನು ನಾಶಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಉರಿ ಹೋರಾಟದ ಸಮಯದಲ್ಲಿ ಪಾಕಿಸ್ತಾನ ಪರವಾಗಿದ್ದ ಕರಣ್‌ ಈಗ ರಾಷ್ಟ್ರ ವಿರೋಧಿ ಸಿನಿಮಾ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ನೆಟ್‌ ಫ್ಲಿಕ್ಸ್ ನಲ್ಲಿ ತೆರೆ ಕಂಡಿರುವ ಗುಂಜನ್‌ ಸಕ್ಸೆನಾ ಸಿನಿಮಾವನ್ನು ಕರಣ್‌ ಜೋಹರ್‌ ಅವರ ಧರ್ಮ ಪ್ರೊಡಕ್ಷನ್‌ ನಿರ್ಮಿಸಿದೆ. ಈ ಚಿತ್ರದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.

ಕರಣ್‌ ಜೋಹರ್‌ ಮತ್ತು ಕಂಗನಾ ರಣಾವತ್‌ ಅವರಿಗೆ ಈ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ರಾಷ್ಟ್ರಪತಿ ರಮಾನಾಥ್‌ ಕೋವಿಂದ್‌ ಪುರಸ್ಕರಿಸಿದ್ದರು.

ಇದನ್ನು ಓದಿ: ನಮ್ಮ ಜೀವನದ ಕಣಕಣದಲ್ಲಿಯೂ ದೇಶಭಕ್ತಿ ಜಾಗೃತವಾಗಿರಬೇಕು: ನಟ ದರ್ಶನ್

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಗೆ ಕೊರೊನಾ ಗ್ರಹಣ : ಇಂದು 19 ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 19 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 199…

ಶಿರಹಟ್ಟಿ ಕಟ್ಟಿಗೆ ಅಡ್ಡೆ ಪ್ರಕರಣ: ಅರಣ್ಯ ಇಲಾಖೆ ಕಣ್ಣಿದ್ದು ಕುರುಡಾಯಿತೆ?

ಗದಗ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ನಡೆಯುತ್ತಿರುವ ಸಾ-ಮಿಲ್ಗಳಿಗೆ ಯಾವುದೇ ಪರವಾನಿಗೆ ಇಲ್ಲದೆ ರಾಜಾರೋಷವಾಗಿ ಕಟ್ಟಿಗೆ ವ್ಯಾಪಾರ…

ಬೆಳಗಾವಿಯಲ್ಲಿ 2 ಸಾವಿರ ಕಿ.ಮೀ ಪ್ರವಾಸ ಮಾಡಿದ್ದ ಶ್ವಾನಕ್ಕೂ ಕ್ವಾರಂಟೈನ್..!

ಬೆಳಗಾವಿ: ಬರೋಬ್ಬರಿ 2 ಸಾವಿರ ಕಿ.ಮೀ ಪ್ರವಾಸ ಮಾಡಿದ್ದ ಶ್ವಾನವೊಂದು ಕ್ವಾರಂಟೈನ್ ಆಗಿರುವ ಘಟನೆ ನಡೆದಿದೆ.…

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯಕ್ಕೆ ಎಷ್ಟನೇ ಸ್ಥಾನ ಗೊತ್ತಾ..?

ನಿನ್ನೆ ಮಧ್ಯಾಹ್ನದವರೆಗೂ ಕರ್ನಾಟಕ ರಾಜ್ಯವು 12ನೇ ಸ್ಥಾನದಲ್ಲಿತ್ತು, ಆದರೆ, ಪ್ರತಿ ದಿನ ರಾಜ್ಯದಲ್ಲಿ 200ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿರುವುದರಿಂದಾಗಿ ಒಂದು ಸ್ಥಾನ ಮೇಲೆ ಏರಿದೆ.