ಬೆಂಗಳೂರು: ಕೊರೊನಾ ಸೋಂಕಿತರ ಮನೆಯ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಈ ಹಿಂದೆ ಇದರ ಪ್ರಮಾಣ ತುಸು ಹೆಚ್ಚಾಗಿತ್ತು. ಆದರೆ, ಈ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ವರದಿ ಪಡೆಯಲಾಗುತ್ತಿದ್ದು, ಬಿಬಿಎಂಪಿಯು ಕಂಟೈನ್ಮೆಂಟ್‌ ವಲಯಗಳಲ್ಲಿ ಸೀಲ್ ಡೌನ್ ಗಾಗಿ ರೂ. 20 ರಿಂದ ರೂ. 25 ಕೋಟಿಯಷ್ಟು ಖರ್ಚುಗಳಾಗಿರಬಹುದು ಎಂದು ಅಂದಾಜಿಸಿದೆ. ಬಿಬಿಎಂಪಿಯಲ್ಲಿ ನಡೆದ ಕೌನ್ಸಿಲ್‌ ಸಭೆಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಸೋಂಕಿತರ ಮನೆಯ ಸುತ್ತ ಸೀಲ್‌ಡೌನ್‌ ಮಾಡುವುದಕ್ಕಾಗಿ ಅಗತ್ಯವಿದ್ದ ಬ್ಯಾರಿಕೇಡ್‌, ತಗಡಿನ ಶೀಟುಗಳು, ಮರದ ಕಂಬಗಳ ಖರೀದಿಗಾಗಿ ಕೆಲವು ಎಂಜನೀಯರ್ ಗಳು ಮನಬಂದಂತೆ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜರಾಜೇಶ್ವರಿ ನಗರದ ವಲಯವೊಂದರಲ್ಲಿಯೇ ಜೂನ್‌ ಪ್ರಾರಂಭದಿಂದ ಜು.15ರವರೆಗೆ ಸೀಲ್‌ಡೌನ್‌ಗಾಗಿ ಬರೋಬ್ಬರಿ ರೂ.1.50 ಕೋಟಿ ಖರ್ಚು ಮಾಡಲಾಗಿದೆ. ಕೆಲವು ವಲಯಗಳಲ್ಲಿ ಒಬ್ಬ ಸೋಂಕಿತರ ಮನೆಗಾಗಿ ಖರೀದಿಸಿದ್ದ ವಸ್ತುಗಳನ್ನು ಬೇರೆಡೆಯೂ ಬಳಸಿಕೊಳ್ಳಲಾಗಿದೆ.

ಪಾಲಿಕೆಯ ಎಂಟು ವಲಯಗಳ ಎಂಜಿನಿಯರ್‌ಗಳೊಂದಿಗೆ ಸಭೆ ನಡೆಸಿ, ಕಂಟೈನ್ಮೆಂಟ್‌ ವಲಯಗಳಲ್ಲಿ ಸೀಲ್‌ಡೌನ್‌ಗಾಗಿ ಖರ್ಚು ಮಾಡಿರುವ ಮೊತ್ತ, ಅದಕ್ಕೆ ಅನುಮೋದನೆ ಕೊಟ್ಟವರು ಯಾರು ಎಂಬುವುದರ ವರದಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ನಗರದಲ್ಲಿ 12 ಸಾವಿರ ಕಂಟೈನ್ಮೆಂಟ್‌ ವಲಯಗಳಿದ್ದು, ಸೀಲ್‌ಡೌನ್‌ಗೆ ಇಲ್ಲಿಯವರೆಗೆ ಗರಿಷ್ಠ ರೂ.25 ಕೋಟಿಯವರೆಗೂ ಖರ್ಚಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಅಥವಾ ಹೋಮ್‌ ಐಸೊಲೇಷನ್‌ಗೆ ಒಳಪಡಿಸಲು ಲಂಚ ಪಡೆಯುತ್ತಿರುವ ದೂರುಗಳು ಕೂಡ ಕೇಳಿ ಬರುತ್ತಿವೆ. ಹಣ ಪಡೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.

Leave a Reply

Your email address will not be published.

You May Also Like

ಸಿಇಟಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ : ಸಂಪೂರ್ಣ ಮಾಹಿತಿ

ವೃತ್ತಿಪರ ಕೋರ್ಸ್ಗಳ ಆಯ್ಕೆಗಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳಾಪಟ್ಟಿ ಪ್ರಕಟವಾಗಿದೆ.

ಗ್ರಾಮಗಳ ಅಭಿವೃದ್ಧಿಗೆ ಮೊದಲ ಆದ್ಯತೆ: ಶಾಸಕ ರಾಮಣ್ಣ

ಮತಕ್ಷೇತ್ರದ ವ್ಯಾಪ್ತಿಯ ಹಳ್ಳಿಗಳಿಗೆ ಸುಗಮ ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ನೀಡುವುದರ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ: ಗದಗನಲ್ಲಿ ಜನ ಜಾಗೃತಿ ರಥಕ್ಕೆ ಚಾಲನೆ

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸಂಘ ಇವರ ಸಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಜನಜಾಗೃತಿ ರಥಕ್ಕೆ ಜಿಲ್ಲಾಡಳಿತ ಭವನದಲ್ಲಿಂದು ಚಾಲನೆ ನೀಡಲಾಯಿತು.

ಹಾಲಕೆರೆ ಅಭಿನವ ಅನ್ನದಾನ ಶ್ರೀ ಗಳು ಲಿಂಗೈಕ್ಯ

ಲಿಂಗೈಕ್ಯ ಶ್ರೀ ಗಳ ಅಗಲಿಕೆ ರೋಣ ಕ್ಷೇತ್ರದ ಶಾಸಕ ಕಳಕಪ್ಪ ಜಿ,ಬಂಡಿ ಹಾಗೂ ಮಾಜಿ ಶಾಸಕ ಜಿ,ಎಸ್,ಪಾಟೀಲ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದರು.