ನವದೆಹಲಿ : ಕೊರೊನಾವೈರಸ್, ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ನಿರ್ಧಾರ ತಾಳುವಂತೆ ಮಾಡಿತು ಎಂದು ಭಾರತದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಹಾಮಾರಿ ಬಾರದಿದ್ದರೆ ಧೋನಿ, ಧೋನಿ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿದ್ದರು ಎಂದು ಚಾಹಲ್ ಹೇಳಿದ್ದಾರೆ. ಭಾರತ ತಂಡಕ್ಕೆ ಎಲ್ಲ ರೀತಿಯ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಏಕೈಕ ನಾಯಕ ಎಂಎಸ್ ಧೋನಿ ಕಳೆದ ಶನಿವಾರ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಅಲ್ಲದೇ, ಅವರೊಂದಿಗೆ ಅವರ ಆತ್ಮೀಯ ಸ್ನೇಹಿತ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸಿದ್ದಾರೆ. 

ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್‌ನಲ್ಲಿ ಧೋನಿ ಆಡಲಿದ್ದರು. ಆದರೆ, ಮಹಾಮಾರಿಯ ಅಟ್ಟಹಾಸದಿಂದಾಗಿ ಈ ಟೂರ್ನಿ 2022ಕ್ಕೆ ಮುಂದೂಡಲ್ಪಟ್ಟಿತು. ಹೀಗಾಗಿ ಧೋನಿ ನಿವೃತ್ತಿ ಘೋಷಿಸಿದ್ದಾರೆ. ಇಲ್ಲದಿದ್ದರೆ ಧೋನಿ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿದ್ದರು ಎಂಬ ಗಾಳಿಸುದ್ದಿ ಕ್ರಿಕೆಟ್ ವಲಯದಲ್ಲಿ ಓಡಾಡುತ್ತಿದೆ. ಇದೇ ಮಾತನ್ನು ಚಾಹಲ್ ಕೂಡ ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಕನ್ನಡಿಗನಿಗೆ ಒಲಿದು ಬರಲಿದೆಯೇ ಧೋನಿ ಸ್ಥಾನ!

ಮಹೇಂದ್ರಸಿಂಗ್ ಧೋನಿ ಅವರು ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಭಾರತೀಯ ತಂಡದ ವಿಕೇಟ್ ಕೀಪಿಂಗ್ ಬಗ್ಗೆ ಚರ್ಚೆಗಳು ಶುರುವಾಗಿದೆ. ಇದಕ್ಕೆ ಹತ್ತಾರು ಹೆಸರುಗಳು ಮುನ್ನೆಲೆಗೆ ಬಂದು ಚರ್ಚೆಗೆ ಕಾರಣವಾಗುತ್ತಿವೆ.

ಕ್ರೀಡೆಗಳಿಂದ ಆರೋಗ್ಯಕರ ಭಾವನೆ

ಉತ್ತರಪ್ರಭ ಸುದ್ದಿನಿಡಗುಂದಿ: ಹಲ ಬಗೆಯ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವದರಿಂದ ನಮ್ಮ ಆರೋಗ್ಯ ರಕ್ಷಣೆ ಮಾಡಲು ಸಾಧ್ಯ…

ಇಂದು ಬಿಸಿಸಿಐ ಸಭೆ: ಐಪಿಎಲ್ ಮತ್ತೆ ಮೈದಾನಕ್ಕೆ?

ಕೋರೊನಾ ಬಿಕ್ಕಟ್ಟಿನ ಕಾರಣಕ್ಕೆ ಕ್ರಿಕೆಟ್ ಮಲಗಿದೆ. ತಿಂಗಳುಗಳ ನಂತರ ಇಂದು ಬಿಸಿಸಿಐ ಮಹತ್ವದ ಸಭೆ ನಡೆಸುತ್ತಿದ್ದು,…

ಸಿನಿಮಾದಲ್ಲಿ ಮೂಡಿ ಬರಲಿದೆ ಮುರಳೀಧರನ್ ಜೀವನ!

ವಿಶ್ವ ಬ್ಯಾಟಿಂಗ್ ದಿಗ್ಗಜರ ನಿದ್ದೆಗೆಡಿಸಿದ್ದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ನಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.