ಬೆಂಗಳೂರು: ಕೊರೊನಾ ಸೋಂಕಿತರ ಮನೆಯ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಈ ಹಿಂದೆ ಇದರ ಪ್ರಮಾಣ ತುಸು ಹೆಚ್ಚಾಗಿತ್ತು. ಆದರೆ, ಈ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ವರದಿ ಪಡೆಯಲಾಗುತ್ತಿದ್ದು, ಬಿಬಿಎಂಪಿಯು ಕಂಟೈನ್ಮೆಂಟ್‌ ವಲಯಗಳಲ್ಲಿ ಸೀಲ್ ಡೌನ್ ಗಾಗಿ ರೂ. 20 ರಿಂದ ರೂ. 25 ಕೋಟಿಯಷ್ಟು ಖರ್ಚುಗಳಾಗಿರಬಹುದು ಎಂದು ಅಂದಾಜಿಸಿದೆ. ಬಿಬಿಎಂಪಿಯಲ್ಲಿ ನಡೆದ ಕೌನ್ಸಿಲ್‌ ಸಭೆಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಸೋಂಕಿತರ ಮನೆಯ ಸುತ್ತ ಸೀಲ್‌ಡೌನ್‌ ಮಾಡುವುದಕ್ಕಾಗಿ ಅಗತ್ಯವಿದ್ದ ಬ್ಯಾರಿಕೇಡ್‌, ತಗಡಿನ ಶೀಟುಗಳು, ಮರದ ಕಂಬಗಳ ಖರೀದಿಗಾಗಿ ಕೆಲವು ಎಂಜನೀಯರ್ ಗಳು ಮನಬಂದಂತೆ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜರಾಜೇಶ್ವರಿ ನಗರದ ವಲಯವೊಂದರಲ್ಲಿಯೇ ಜೂನ್‌ ಪ್ರಾರಂಭದಿಂದ ಜು.15ರವರೆಗೆ ಸೀಲ್‌ಡೌನ್‌ಗಾಗಿ ಬರೋಬ್ಬರಿ ರೂ.1.50 ಕೋಟಿ ಖರ್ಚು ಮಾಡಲಾಗಿದೆ. ಕೆಲವು ವಲಯಗಳಲ್ಲಿ ಒಬ್ಬ ಸೋಂಕಿತರ ಮನೆಗಾಗಿ ಖರೀದಿಸಿದ್ದ ವಸ್ತುಗಳನ್ನು ಬೇರೆಡೆಯೂ ಬಳಸಿಕೊಳ್ಳಲಾಗಿದೆ.

ಪಾಲಿಕೆಯ ಎಂಟು ವಲಯಗಳ ಎಂಜಿನಿಯರ್‌ಗಳೊಂದಿಗೆ ಸಭೆ ನಡೆಸಿ, ಕಂಟೈನ್ಮೆಂಟ್‌ ವಲಯಗಳಲ್ಲಿ ಸೀಲ್‌ಡೌನ್‌ಗಾಗಿ ಖರ್ಚು ಮಾಡಿರುವ ಮೊತ್ತ, ಅದಕ್ಕೆ ಅನುಮೋದನೆ ಕೊಟ್ಟವರು ಯಾರು ಎಂಬುವುದರ ವರದಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ನಗರದಲ್ಲಿ 12 ಸಾವಿರ ಕಂಟೈನ್ಮೆಂಟ್‌ ವಲಯಗಳಿದ್ದು, ಸೀಲ್‌ಡೌನ್‌ಗೆ ಇಲ್ಲಿಯವರೆಗೆ ಗರಿಷ್ಠ ರೂ.25 ಕೋಟಿಯವರೆಗೂ ಖರ್ಚಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಅಥವಾ ಹೋಮ್‌ ಐಸೊಲೇಷನ್‌ಗೆ ಒಳಪಡಿಸಲು ಲಂಚ ಪಡೆಯುತ್ತಿರುವ ದೂರುಗಳು ಕೂಡ ಕೇಳಿ ಬರುತ್ತಿವೆ. ಹಣ ಪಡೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಆದ್ರಳ್ಳಿ ವಡ್ಡರಪಾಳ್ಯ ಸಮಸ್ಯೆ ವಾರದೊಳಗೆ ಪರಿಹರಿಸದಿದ್ರೆ ಹೋರಾಟ: ರವಿಕಾಂತ ಅಂಗಡಿ

ದಶಕದಿಂದ ಸಾಕಷ್ಟು ಸಮಸ್ಯೆ ಅನುಭವಿಸುತ್ತಿರುವ ಆದ್ರಳ್ಳಿಯ ವಡ್ಡರಪಾಳ್ಯ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಡಳಿತ ವರ್ಗ ಮುಂದಾಗಬೇಕು.

ಕೋವಿಡ್: ಬಿಗಡಾಯಿಸುತ್ತಿದೆ ಬೆಂಗಳೂರು :25 ದಿನದಲ್ಲಿ 38,213 ಪಾಸಿಟಿವ್, 765 ಸಾವು

ಜುಲೈ 1 ರಿಂದ ಜುಲೈ 25ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಪಾಸಿಟಿವ್ ಸಂಖ್ಯೆ 8 ಪಟ್ಟು ಹೆಚ್ಚಿದ್ದು, ಔಷಧಿ, ವೈದ್ಯರು ಮತ್ತು ಇತರ ಸಿಬ್ಬಂದಿಯ ಕೊರತೆಯಿದೆ.

ಕೊರೊನಾ: ಒಂದೇ ದಿನ 2,003 ಸಾವು, 10,974 ಹೊಸ ಪ್ರಕರಣ

ಕಳೆದ 24 ಗಂಟೆಗಳಲ್ಲಿ ಕೊರೊನಾ ರೋಗಕ್ಕೆ 2,003 ನಾಗರಿಕರು ಬಲಿಯಾಗಿದ್ದು, ಇದೇ ಅವಧಿಯಲ್ಲಿ ಹೊಸದಾಗಿ 10,974 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಗಜೇಂದ್ರಗಡದಲ್ಲಿ ಮುಷ್ಕರ: ಪೊಲೀಸ್-ಪ್ರತಿಭಟನಾಕಾರರ ಮದ್ಯೆ ಮಾತಿನ ಚಕಮಕಿ

ರೈತ, ಕಾರ್ಮಿಕ, ವಿದ್ಯುತ್, ಎಪಿಎಂಸಿ ಕಾಯ್ದೆ, ಬೆಲೆ ನಿಯಂತ್ರಣ ಕಾಯ್ದೆ, ಭೂ ಸುಧಾರಣೆ ಕಾಯ್ದೆ ಸೇರಿದಂತೆ ಜನ ವಿರೋದಿ ನೀತಿ ಖಂಡಿಸಿ ರಾಷ್ಟ್ರವ್ಯಾಪಿ, ಕಾರ್ಮಿಕ, ರೈತ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿರುವ ಮುಷ್ಕರದ ಅಂಗವಾಗಿ ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.