ಜೂನ್ ಮಧ್ಯಭಾಗದಿಂದ ರಾಜ್ಯದ ಆರ್.ಟಿ.ಐ ವೆಬ್ ಸೈಟ್ ನಿಷ್ಕ್ರಿಯವಾಗಿದೆ ಎಂದು ಹಲವಾರು ಆರ್.ಟಿ.ಐ ಕಾರ್ಯಕರ್ತರು ಆರೋಪಿಸಿದ್ದಾರೆ.

ಬೆಂಗಳೂರು: ಜನರಿಗೆ ಮಾಹಿತಿ ಒದಗಿಸಲೆಂದೇ ಮಾಹಿತಿ ಹಕ್ಕು ಜಾರಿಗೆ ಬಂದಿದೆ. ಆದರೆ, ಜನರು ಬಯಸುವ ಮಾಹಿತಿ ನೀಡಲು ಮಾಹಿತಿ ಹಕ್ಕು ಆಯೋಗ ಹಿಂದೇಟು ಹಾಕುತ್ತಿದೆಯೇ ಎಂಬ ಸಂದೇಹ ಬರುವಂತಾಗಿದೆ.

ಕಳೆದ ಒಂದು ತಿಂಗಳಿಂದ ರಾಜ್ಯದ ಮಾಹಿತಿ ಹಕ್ಕು ಅಂತರ್ಜಾಲ ತಾಣ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅರ್ಜಿ ಹಾಕಲು ಬಯಸುವವರು ನಿರಾಶರಾಗಿ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಕೋವಿಡ್ ಸಂದರ್ಭದಲ್ಲಂತೂ ಆದಷ್ಟು ಎಲ್ಲವೂ ಆನ್ ಲೈನ್ ಮೂಲಕವೇ ನಡೆದರೆ ಸುರಕ್ಷಿತ. ಆದರೆ ಇಂತಹ ಸಂದರ್ಭದಲ್ಲೇ ಆರ್.ಟಿ.ಐ ವೆಬ್ ಸೈಟ್ ಜನಸ್ನೇಹಿ ಆಗುವ ಬದಲು ಜನ ವಿರೋಧಿಯಂತೆ ಕೆಲಸ ಮಾಡುತ್ತಿದೆ ಎಂದು ಹಲವಾರು ಆರ್.ಟಿ.ಐ ಕಾರ್ಯಕರ್ತರು ಆರೋಪಿಸಿದ್ದಾರೆ.

ಆರ್.ಟಿ.ಐ ಕರ್ನಾಟಕ ಆನ್ ಲೈನ್ ವೆಬ್ ಸೇಟ್

ಅರ್ಜಿಗೆ ಶುಲ್ಕ ಭರಿಸುವ ಪೇಮೆಂಟ್-ಗೇಟ್ವೇ ಕೆಲಸ ಮಾಡುತ್ತಿಲ್ಲ. ಇದರಿಂದ ಅರ್ಜಿ ಹಾಕುವುದನ್ನೇ ನಿರ್ಬಂಧಿಸಿದಂತಾಗಿದೆ. ಇದು ಆಯೋಗದ ಅಪಾರದರ್ಶಕ ನೀತಿಗೆ ಹಿಡಿದ ಕನ್ನಡಿಯಾಗಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಜನಸಾಮಾನ್ಯರಿಗಿದ್ದ ಒಂದು ಅವಕಾಶವೂ ಮುಚ್ಚಿದಂತಾಗಿದೆ ಎನ್ನುತ್ತಾರೆ ಮಾಹಿತಿ ಹಕ್ಕು ಕಾರ್ಯಕರ್ತ ಅಜಯ್ ಮರ್ಚಂಟ್.

ವಕೀಲ ಮತ್ತು ಆರ್.ಟಿ.ಐ ಕಾರ್ಯಕರ್ತ ಎಸ್. ಉಮಾಪತಿಯವರ ಪ್ರಕಾರ, ಆರಂಭವಾದಾಗಿನಿಂದ ಈ ವೆಬ್ ಸೈಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವು ಪ್ರಮುಖ ಇಲಾಖೆಗಳ ಲಿಂಕ್ ಕೂಡ ಇದರಲ್ಲಿ ಲಭ್ಯವಾಗುವುದಿಲ್ಲ.

ಆರ್.ಟಿ.ಐ ಆಯೋಗದ ಮೂಲದ ಪ್ರಕಾರ, ತಾಂತ್ರಿಕ ಸಮಸ್ಯೆಯಾಗಿದೆ. ಸರಿಪಡಿಸಲು ಇ-ಆಡಳಿತ ವಿಭಾಗಕ್ಕೆ ಹೇಳಿದ್ದೇವೆ. ಆದರೆ ಅವರು ವಿಳಂಬ ಮಾಡುತ್ತಿದ್ದಾರೆ. ಅದು ಉದ್ದೇಶಪೂರ್ವಕ ಇದ್ದರೂ ಇರಬಹುದು. ಕೋವಿಡ್ ಸಂದರ್ಭದಲ್ಲೇ ವೆಬ್ ಸೈಟ್ ಇಲ್ಲವೆಂದರೆ ಅದು ಮಾಹಿತಿ ಹಕ್ಕನ್ನೇ ಕೊಲ್ಲುವ ಕೆಲಸ ಅಲ್ಲವೇ?

Leave a Reply

Your email address will not be published. Required fields are marked *

You May Also Like

ಶಿಕ್ಷಕರ ಅಗತ್ಯ ಸೇವೆ ಈಗ ಆನಲೈನ್ ವ್ಯಾಪ್ತಿಯಲ್ಲಿ: ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ ಲೇಪಿಸಿದ ಶಿಕ್ಷಣ ಸಚಿವರು,ಅಧಿಕಾರಿಗಳು

ಉತ್ತರಪ್ರಭ ಸುದ್ದಿಆಲಮಟ್ಟಿ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಶಿಕ್ಷಕರ ಅಗತ್ಯ 17 ಸೇವೆಗಳನ್ನು ಆನ್…

ಕೋವಿಡ್ ಚಿಕಿತ್ಸೆಗೆ ₹5 ಲಕ್ಷದವರೆಗೆ ಸಾಲ: ಸಾರ್ವಜನಿಕ ವಲಯದ ಬ್ಯಾಂಕುಗಳು ಘೋಷಣೆ

ಕೋವಿಡ್ ಎರಡನೇ ಅಲೆ ದೇಶಾದ್ಯಂತ ಹೆಚ್ಚು ವ್ಯಾಪಿಸಿ ಸಂದಿಗ್ಧ ಪರಿಸ್ಥಿತಿ ಉಂಟು ಮಾಡಿದ್ದು, ಇದರಿಂದ ಅಸುರಕ್ಷಿತ ಸಾಲ ನೀಡುಲು ನಿರ್ಧಾರ ಮಾಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕುಗಳ ಸಂಘ (ಐಬಿಎ) ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿವೆ

ಹಾವೇರಿಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್

ಸವಣೂರಿಗೆ ಬಂದಿದ್ದ ಮೂವರು ಮೂವರಲ್ಲಿ ಇಬ್ಬರಿಗೆ ಕೊರೋನಾ ಸೊಂಕು ಧೃಡವಾದಂತಾಗಿದೆ. ಇನ್ನೊಂದು ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ

ರಾಜ್ಯದಲ್ಲಿಂದು 34 ಹೊಸ ಕೊರೋನಾ ಕೇಸ್ ಪತ್ತೆ

ದುವರೆಗೆ ರಾಜ್ಯದಲ್ಲಿ ಒಟ್ಟಾರೆ 959 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಂದು ಸಂಜೆ 5 ರ ಮಾಹಿತಿಯಂತೆ ಒಟ್ಟಾರೆ 33 ಜನ ಸಾವನ್ನಪ್ಪಿದ್ದು, 451 ಜನ ಗುಣಮುಖರಾಗಿ ಹಿಂತಿರುಗಿದ್ದಾರೆ.