ಬೆಂಗಳೂರು, ಮೈಸೂರು, ರಾಮನಗರಕ್ಕೆ ಸೊನ್ನೆ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಈ ಸಂದರ್ಭದಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಸಂತೈಸುವ ಭಾಗವಾಗಿ 24 ಶಾಸಕರಿಗೆ ನಿಗಮ-ಮಂಡಳಿ ಗಿಫ್ಟ್ ನೀಡಲಾಗಿದೆ.

ಬೆಂಗಳೂರು: ಯಾವುದೇ ಮುನ್ಸೂಚನೆ ಇಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪ 24 ನಿಗಮ-ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಚಕಿತಗೊಳಿಸಿದ್ದಾರೆ.

ಸಂಪುಟ ಪುನರ್ ರಚನೆಗೆ ಮುಖ್ಯಮಂತ್ರಿ ಸಜ್ಜಾಗಿದ್ದಾರೆಯೇ ಎಂಬ ಅನುಮಾನವೂ ಕಾಡತೊಡಗಿದೆ. ಪುನರ್ ರಚನೆಗೂ ಮುನ್ನ ಸಂಭಾವ್ಯ ಭಿನ್ನಮತ ತಡೆಯಲು ಸಿಎಂ ಈ ಯತ್ನ ಮಾಡಿರಬಹುದೇ ಎಂಬ ಮಾತುಗಳು ಕೇಳಿ ಬಂದಿವೆ.

 ಈ ನೇಮಕದಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪಾಲು ಸಿಕ್ಕಿರುವುದನ್ನು ನೋಡಿದರೆ, ಬಿ.ಎಲ್ ಸಂತೋಷ್ ಮತ್ತು ನಳೀನ್ ಕುಮಾರ ಕಟೀಲು ಅವರ ಗುಂಪಿಗೆ ಹಿನ್ನಡೆಯಾದಂತೆ ಕಾಣುತ್ತಿದೆ. 24 ಶಾಸಕರಲ್ಲಿ 13 ಜನ ಉತ್ತರ ಕರ್ನಾಟಕಕ್ಕೆ ಸೇರಿದವರಾಗಿದ್ದು, ಹೆಚ್ಚೂ ಕಡಿಮೆ ಸಿಎಂ ಬೆಂಬಲಿಗರೇ ಇದ್ದಾರೆ. ಈ 13ರಲ್ಲಿ 7 ಶಾಸಕರು ಹೈದರಾಬಾದ ಕರ್ನಾಟಕಕ್ಕೆ, ಉಳಿದ ಆರು ಶಾಸಕರು ಮುಂಬೈ ಕರ್ನಾಟಕಕ್ಕೆ ಸೇರಿದ್ದಾರೆ.

ಬೆಂಗಳೂರು, ಮೈಸೂರು, ರಾಮನಗರ ಜಿಲ್ಲೆಗಳ ಶಾಸಕರಿಗೆ ಒಂದು ನಿಗಮವನ್ನೂ ನೀಡಿಲ್ಲ. ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರಿದ್ದರೂ ಅವರನ್ನು ಪರಿಗಣಿಸಿಲ್ಲ.

ಕರಾವಳಿಗೆ ಬಂದರೆ ಅಲ್ಲಿ ಉಡುಪಿ ಜಿಲ್ಲೆಯ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ದಕ್ಷಿಣ ಕರ್ನಾಟಕದ ತುಮಕೂರು, ಚಿಕ್ಕಮಗಳೂರು, ಹಾಸನ, ಚಾಮರಾಜ ನಗರ ಜಿಲ್ಲೆಗಳಿಗೆ ತಲಾ ಒಂದು ಸ್ಥಾನ, ಶಿವಮೊಗ್ಗ ಜಿಲ್ಲೆಯ ಒಬ್ಬರು ಶಾಸಕರಿಗೆ ಅಧ್ಯಕ್ಷಗಿರಿ ನೀಡಲಾಗಿದೆ.

ಜಾತಿವಾರು ನೋಡಿದರೆ ಲಿಂಗಾಯತ ಶಾಸಕರಿಗೆ ಹೆಚ್ಚು ಸ್ಥಾನ ಸಿಕ್ಕಿವೆ. ಮಧ್ಯ ಕರ್ನಾಟಕದ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ತಲಾ ಎರಡು ಸ್ಥಾನ ನೀಡಲಾಗಿದೆ.

ಹಿಂದೆ ಸಚಿವಗಿರಿ ಪಡೆದಿದ್ದ ಸಿದ್ದು ಸವದಿ, ಕಳಕಪ್ಪ ಬಂಡಿ, ಶಂಕರ ಮುನೇನಕೊಪ್ಪ, ಶಿವನಗೌಡ ನಾಯಕ ಮುಂತಾದ ಕೆಲವರು ಈಗ ನಿಗಮ ಮಂಡಳಿಗೆ ತೃಪ್ತಿಪಡಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಸರ್ಕಾರ ರಚಿಸಲು ನೆರವು ನೀಡಿ, ಉಪ ಚುನಾವಣೆಯಲ್ಲಿ ಗೆದ್ದು ಬಂದ ‘ಹೊರಗಿನವರಿಗೆ’ ಸಚಿವಗಿರಿ; ನೀಡಲೇಬೇಕಾದ ಒತ್ತಡವಿದ್ದ ಕಾರಣ ಮೂಲ ಬಿಜೆಪಿ ಶಾಸಕರು ತ್ಯಾಗ ಮಾಡಲೇಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ಓರ್ವ ಉಗ್ರನನ್ನು ಬಲಿ ಪಡೆದ ಸೇನೆ

ಜಮ್ಮು ಮತ್ತು ಕಾಶ್ಮೀರದ ಅವಂತಿಪೊರಾದಲ್ಲಿ ಓರ್ವ ಉಗ್ರನನ್ನು ಭಾರತೀಯ ಸೇನೆ ಬಲಿ ಪಡೆದಿದೆ. ಶರ್ಷಾಲಿ ಖ್ರೂ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಮಾಹಿತಿಯ ಮೇರೆಗೆ ಸೇನಾಪಡೆ ಕಾರ್ಯಾಚರಣೆ ನಡೆಸಿತ್ತು..

ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಪುತ್ರನ ಮದುವೆ : ಕೋವಿಡ್ ನಿಯಮಕ್ಕೆ ಡೋಂಟ್ ಕೇರ್..!!

ಹರಪನಹಳ್ಳಿ: ಕೊರೊನಾ ಹಿನ್ನೆಲೆ ಲಾಕ್ ಡೌನ್ ಸಡಿಲಿಸಿದರೂ ಸಾಕಷ್ಟು ಕಟ್ಟುನಿಟ್ಟಿನ ನಿಯಮ ಸರ್ಕಾರ ಸೂಚಿಸಿದೆ. ಆದರೆ…

ರಾಜ್ಯದಲ್ಲಿ 127 ಕೊರೋನಾ ಸೋಂಕಿತರು ಪತ್ತೆ: ಕರ್ನಾಟಕಕ್ಕೆ ಕೊರೋನಾ ಸಂಕಟ

ರಾಜ್ಯದಲ್ಲಿಂದು ಕೊರೋನಾ ಸೋಂಕಿತ 127 ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆಯಾಗಿದೆ.