ಖಾಸಗಿ ಲ್ಯಾಬ್ ಒಂದು ದೇಶಾದ್ಯಂತ ವಿವಿಧ ಭಾಗಗಳಲ್ಲಿ ನಡೆಸಿದ ಪ್ರತಿಕಾಯ ಪರೀಕ್ಷೆ (ಆಂಟಿಬಾಡಿ ಟೆಸ್ಟ್)ಗಳ ಫಲಿತಾಂಶ ಬಿಡುಗಡೆ ಮಾಡಿದ್ದು, ದೇಶದ 18 ಕೋಟಿ ಜನರಲ್ಲಿ ಕೋವಿಡ್ ನಿರೋಧಕ ಶಕ್ತಿಯಿದೆ ಎಂದು ತಿಳಿಸಿದೆ.


ನವದೆಹಲಿ: ಖಾಸಗಿ ಲ್ಯಾಬ್ ಥೈರೋಕೇರ್ ಟೆಕ್ನಾಲಜೀಸ್ ನಡೆಸಿದ ಆಂಟಿಬಾಡಿ ಟೆಸ್ಟ್ ಗಳ ಫಲಿತಾಂಶಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ‘ದಿ ಕ್ವಿಂಟ್’ ಪೋರ್ಟಲ್, ದೇಶದ ಶೇ. 15 ಅಂದರೆ 18 ಕೋಟಿ ಜನರಲ್ಲಿ ಕೋವಿಡ್ ಎದುರಿಸುವ ರೋಗ ನಿರೋಧಕ ಶಕ್ತಿ ಇದೆ ಎಂದು ಮಂಗಳವಾರ ತಿಳಿಸಿದೆ.
ಥೈರೋಕೇರ್ 600 ಪಿನ್ ಕೋಡ್ ಪ್ರದೇಶದಲ್ಲಿ 6 ಸಾವಿರಕ್ಕೂ ಹೆಚ್ಚು ಆಂಟಿಬಾಡಿ ಟೆಸ್ಟ್ ನಡೆಸಿ, ಫಲಿತಾಂಶಗಳ ಆಧಾರದಲ್ಲಿ ಈ ಫಲಿತಾಂಶ ಪ್ರಕಟಿಸಿದೆ.


ಈ ಕುರಿತು ಮಾತನಾಡಿರುವ ಥೈರೋಕೇರ್ ಕಂಪನಿಯ ಅಧ್ಯಕ್ಷ ಡಾ. ಎ. ವೇಲುಮುನಿ, ‘ನಮ್ಮದು ಅತ್ಯಂತ ವ್ಯವಸ್ಥಿತ, ಸುಸಂಬದ್ಧ ಆಂಟಿಬಾಡಿ ಸಮೀಕ್ಷೆಯಾಗಿದೆ. ಹಾಗೆ ನೋಡಿದರೆ ಐಸಿಎಂಆರ್ ನಡೆಸಿದ 2ನೆ ಸಮೀಕ್ಷೆಯ ಫಲಿತಾಂಶಗಳಿಗೆ ನಮ್ಮ ಹಲವಷ್ಟು ಅಂಶಗಳು ತಾಳೆಯಾಗುತ್ತಿವೆ’ ಎಂದು ತಿಳಿಸಿದ್ದಾರೆ.
ಈ ಕುರಿತಾಗಿ, ಸರ್ಕಾರಿ ಸಂಶೋಧನೆ ಸಂಸ್ಥೆಗಳು ಏನು ಹೇಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

You May Also Like

ದೇಶದಲ್ಲಿ 59 ಲಕ್ಷದ ಗಡಿ ದಾಟಿದ ಮಹಾಮಾರಿ!

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 85,362 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ದೇಶದಲ್ಲಿ 59 ಲಕ್ಷದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ಮೂರನೇ ಲಾಕ್ ಡೌನ್ ಅಂತ್ಯ – ನಾಲ್ಕರಲ್ಲಿ ಏನಿರತ್ತೆ? ಏನಿರಲ್ಲ?

ನವದೆಹಲಿ: ನಾಳೆ ಮೂರನೇ ಹಂತದ ಲಾಕ್ ಡೌನ್ ಗೆ ಕೊನೆಯ ದಿನ. ಹೀಗಾಗಿ ನಾಲ್ಕನೇ ಹಂತದ…

ಯುದ್ಧಕ್ಕೆ ನೀವು ತಯಾರಿದ್ದರೆ ನಾವೂ ಸಿದ್ಧ!!

ನವದೆಹಲಿ : ಯುದ್ಧಕ್ಕೆ ಸಿದ್ಧವಾಗಿ ನಿಂತಿರುವ ಚೀನಾಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಯುದ್ಧಕ್ಕೆ ನೀವು ತಯಾರಿ ನಡೆಸಿದ್ದರೆ, ನಾವೂ ಸಿದ್ಧ ಎಂಬ ಮಾತನ್ನು ಭಾರತ ಹೇಳಿದೆ.

ಉತ್ತರಾಖಂಡ ಪ್ರವಾಹ: ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ

ಹಿಮಪಾತದಿಂದಾಗಿ ಉತ್ತರಾಖಂಡದ ಚಮೋಲಿಯಲ್ಲಿ ಉಂಟಾದ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.