ಚೆನ್ನೈ : ಮೊಬೈಲ್ ಬಳಸುವ ಬಗ್ಗೆ ಬುದ್ಧಿವಾದ ಹೇಳಿದ್ದಕ್ಕೆ 16 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಈ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ. ಈ ಬಾಲಕ ಯಾವಾಗಲೂ ಮೊಬೈಲ್ ನಲ್ಲಿಯೇ ಮುಳುಗಿರುತ್ತಿದ್ದ. ಹೀಗಾಗಿ ಪಾಲಕರು ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಲಾಕ್‍ ಡೌನ್ ಸಂದರ್ಭದಲ್ಲಿ ಈ ಬಾಲಕ ಗೇಮ್ ಆಡುವುದರೊಂದಿಗೆ ಸಮಯ ಕಳೆಯುತ್ತಿದ್ದ. ಹೀಗಾಗಿ ಆತ ಗೇಮ್ ವ್ಯಸನಿಯಾಗಿದ್ದ. ಪೋಷಕರು ಎಷ್ಟೇ ಬುದ್ದಿಯ ಮಾತುಗಳನ್ನು ಹೇಳಿದರೂ ಮೊಬೈಲ್ ನಲ್ಲಿಯೇ ಕಾಲ ಕಳೆಯುತ್ತಿದ್ದ. ಹೀಗಾಗಿ ಪಾಲಕರು ಮೊಬೈಲ್ ಕಸಿದುಕೊಂಡಿದ್ದರು. ಇದರಿಂದಾಗಿ ಬಾಲಕ ಕೋಪಗೊಂಡಿದ್ದ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಮರಳಿ ಮನೆಗೆ ಬಂದಿದ್ದ ಪಾಲಕರು, ಬಾಲಕನ ಮೃತದೇಹ ಕಂಡು ಆಘಾತಗೊಂಡಿದ್ದಾರೆ. ಆ ನಂತರ ಪುದೂರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಪ್ರಧಾನಿ ಮೋದಿ ವಿರುದ್ಧ ಟ್ವೀಟ್ : ಸೋನಿಯಾ ಗಾಂಧಿ ವಿರುದ್ಧ ಎಎಫ್.ಐ.ಆರ್..!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟರ್ ನಲ್ಲಿ ಇಲ್ಲಸಲ್ಲದ ಅವಹೇಳನಕಾರಿ ಟ್ವೀಟ್ ಮಾಡಿರುವ ಆರೋಪ…

ಬ್ರೇಕಪ್ ಮಾಡಿಕೊಂಡ ಯುವತಿಗೆ ಹುಡುಗ ಮಾಡಿದ ನೀಚ ಕೆಲಸ ಎಂಥದ್ದು ಗೊತ್ತಾ?

ಜೈಪುರ : 6 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಯುವತಿ ಕೈ ಕೊಟ್ಟಿದ್ದಾಳೆ ಎಂಬ ಕಾರಣಕ್ಕೆ ಯುವಕನೊಬ್ಬ ಇಡೀ ಸಮಾಜವೇ ತಲೆ ತಗ್ಗಿಸುವಂತಹ ನೀಚ ಕೃತ್ಯಕ್ಕೆ ಕೈ ಹಾಕಿರುವ ಘಟನೆ ನಡೆದಿದೆ.

ರೈತ ಸತ್ತಿರುವುದನ್ನು ಕಂಡರೂ ಭಾಷಣ ಮುಂದುವರೆಸಿದ ಬಿಜೆಪಿ ನಾಯಕರು!

ಖಾಂಡ್ವಾ : ಭಾಷಣ ಕೇಳಲು ಬಂದ ರೈತರೊಬ್ಬರು ಹೃದಯಾಘಾತದಿಂದ ಕಣ್ಣೆದುರೇ ಸಾವನ್ನಪ್ಪಿದ್ದರೂ ಬಿಜೆಪಿ ನಾಯಕರು ಭಾಷಣ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಟಿಕ್ ಟಾಕ್ ಸೇರಿ 59 App ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

ದೆಹಲಿ: ದೇಶದ ಸಮಗ್ರತೆ, ಏಕತೆ ಹಾಗೂ ದೇಶದ ರಕ್ಷಣೆಯ ಹಿತದೃಷ್ಟಿಯಿಂದ ರಾಜ್ಯಗಳ ಭದ್ರತೆಯ ಜೊತೆಗೆ ಸಾರ್ವಜನಿಕರ…