18 ಕೋಟಿ ಭಾರತೀಯರಿಗೆ ಕೋವಿಡ್ ನಿರೋಧಕ ಶಕ್ತಿ : ಥೈರೊಕೇರ್ ಸಮೀಕ್ಷೆ ಇವರಿಗೆ ಸೋಂಕು ತಗುಲಿದರೂ ಏನೂ ಆಗಂಗಿಲ್ಲ!


ಖಾಸಗಿ ಲ್ಯಾಬ್ ಒಂದು ದೇಶಾದ್ಯಂತ ವಿವಿಧ ಭಾಗಗಳಲ್ಲಿ ನಡೆಸಿದ ಪ್ರತಿಕಾಯ ಪರೀಕ್ಷೆ (ಆಂಟಿಬಾಡಿ ಟೆಸ್ಟ್)ಗಳ ಫಲಿತಾಂಶ ಬಿಡುಗಡೆ ಮಾಡಿದ್ದು, ದೇಶದ 18 ಕೋಟಿ ಜನರಲ್ಲಿ ಕೋವಿಡ್ ನಿರೋಧಕ ಶಕ್ತಿಯಿದೆ ಎಂದು ತಿಳಿಸಿದೆ.


ನವದೆಹಲಿ: ಖಾಸಗಿ ಲ್ಯಾಬ್ ಥೈರೋಕೇರ್ ಟೆಕ್ನಾಲಜೀಸ್ ನಡೆಸಿದ ಆಂಟಿಬಾಡಿ ಟೆಸ್ಟ್ ಗಳ ಫಲಿತಾಂಶಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ‘ದಿ ಕ್ವಿಂಟ್’ ಪೋರ್ಟಲ್, ದೇಶದ ಶೇ. 15 ಅಂದರೆ 18 ಕೋಟಿ ಜನರಲ್ಲಿ ಕೋವಿಡ್ ಎದುರಿಸುವ ರೋಗ ನಿರೋಧಕ ಶಕ್ತಿ ಇದೆ ಎಂದು ಮಂಗಳವಾರ ತಿಳಿಸಿದೆ.
ಥೈರೋಕೇರ್ 600 ಪಿನ್ ಕೋಡ್ ಪ್ರದೇಶದಲ್ಲಿ 6 ಸಾವಿರಕ್ಕೂ ಹೆಚ್ಚು ಆಂಟಿಬಾಡಿ ಟೆಸ್ಟ್ ನಡೆಸಿ, ಫಲಿತಾಂಶಗಳ ಆಧಾರದಲ್ಲಿ ಈ ಫಲಿತಾಂಶ ಪ್ರಕಟಿಸಿದೆ.


ಈ ಕುರಿತು ಮಾತನಾಡಿರುವ ಥೈರೋಕೇರ್ ಕಂಪನಿಯ ಅಧ್ಯಕ್ಷ ಡಾ. ಎ. ವೇಲುಮುನಿ, ‘ನಮ್ಮದು ಅತ್ಯಂತ ವ್ಯವಸ್ಥಿತ, ಸುಸಂಬದ್ಧ ಆಂಟಿಬಾಡಿ ಸಮೀಕ್ಷೆಯಾಗಿದೆ. ಹಾಗೆ ನೋಡಿದರೆ ಐಸಿಎಂಆರ್ ನಡೆಸಿದ 2ನೆ ಸಮೀಕ್ಷೆಯ ಫಲಿತಾಂಶಗಳಿಗೆ ನಮ್ಮ ಹಲವಷ್ಟು ಅಂಶಗಳು ತಾಳೆಯಾಗುತ್ತಿವೆ’ ಎಂದು ತಿಳಿಸಿದ್ದಾರೆ.
ಈ ಕುರಿತಾಗಿ, ಸರ್ಕಾರಿ ಸಂಶೋಧನೆ ಸಂಸ್ಥೆಗಳು ಏನು ಹೇಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version