ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ನಿಮ್ಮ ಅರ್ಹತೆ ಸಾಬೀತು ಮಾಡಿ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಅಲ್ಲಿವರೆಗೂ ಯಾವುದೇ ಪದವಿ ಪಡೆಯುವಂತಿಲ್ಲ ಎಂದಿತ್ತು ಕೂಡ.

ಗದಗ: ಎಚ್. ವಿಶ್ವನಾಥ್ ಅವರನ್ನು ಎಂ.ಎಲ್.ಸಿ.ಯಾಗಿ ನಾಮ ನಿರ್ದೇಶನ ಮಾಡುವ ಮೂಲಕ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ ಎಂಬ ಅನುಮಾನ ಜನಸಾಮಾನ್ಯರನ್ನು ಕಾಡುತ್ತಿದೆ.

ಸುಪ್ರೀಂಕೋರ್ಟ್

ಈ ಪ್ರಶ್ನೆ ಅವರನ್ನು ಸಾಹಿತ್ಯ ಕೋಟಾದಲ್ಲಿ ನೇಮಿಸಿದ್ದಕ್ಕೆ ಅಲ್ಲ, ಅವರು ಒಂದ್ ನಾಕು ಪುಸ್ತಕ ಗೀಚಿದ್ದನ್ನೇ ತೋರಿಸಿ ಸರ್ಕಾರ ಸಮರ್ಥಿಸಿಕೊಳ್ಳಬಹುದು. ಹಿಂದೆಯೂ ಹೀಗೆಯೇ ಮೇಲ್ಮನೆ ನಿರಾಶ್ರಿತರ ತಾಣವಾಗಿದೆ.

ಈಗ ಅದು ಬಿಡಿ, ಪ್ರಶ್ನೆ ಇರುವುದು ವಿಶ್ವನಾಥ್ ಅವರ ಅನರ್ಹತೆಯ ಟ್ಯಾಗ್ ಅಥವಾ ಕಳಂಕ ತೊಡೆದು ಹೋಯಿತೆ? ಸು್ಪ್ರೀಂಕೋರ್ಟ್ ಆದೇಶವನ್ನೇ ಉಲ್ಲಂಘಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಈ ದುಸ್ಸಾಹಸಕ್ಕೆ ಕೈ ಹಾಕಿದರೆ?

ನವೆಂಬರ್ 13ರ ಆದೇಶ

ಸಂವಿಧಾನದ 10 ನೆ ಶೆಡ್ಯೂಲ್ ಪ್ರಕಾರ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅಂದಿನ ಸ್ಪೀಕರ್ ರಮೇಶಕುಮಾರ್ ಶಾಸಕರನ್ನು ಅವರ ಶಾಸಕತ್ವದಿಂದ ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟಿಗೆ ಹೋಗಿದ್ದರು.

ಎರಡೂ ಕಡೆಯ ವಾದ ವಿವಾದ ಆಲಿಸಿದ ಸುಪ್ರೀಂಕೋರ್ಟ್ ಪೀಠ, ಸ್ಪೀಕರ್ ಕ್ರಮವನ್ನು ಎತ್ತಿ ಹಿಡಿದಿತ್ತು.  ಆದೇಶವನ್ನು ಬರೆದಿದ್ದ ನ್ಯಾಯಮೂರ್ತಿ ಎನ್.ವಿ ರಮಣ ಅವರು, ಈ ಪ್ರಕರಣದಲ್ಲಿ ಸ್ಪೀಕರ್ ತೆಗೆದುಕೊಂಡ ನಿರ್ಣಯ ಸರಿಯಾಗಿದೆ. ಆದರೆ ಈ ಅನರ್ಹ ಶಾಸಕರು ತೆರವು ಮಾಡಿದ ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಅಲ್ಲಿ ತಮ್ಮ ಅನರ್ಹತೆ ಕಳಂಕವನ್ನು ಪಣಕ್ಕಿಟ್ಟು ಹೋರಾಡಬಹುದು ಎಂದು ಆದೇಶಿಸಿದ್ದರು.

ಹಾಗೆಯೇ, ಸಂವಿಧಾನದ 75 (1 ಬಿ ), 164(1 ಬಿ) ಮತ್ತು 36(1 ಬಿ) ಪರಿಚ್ಛೇದಗಳನ್ನು ಉಲ್ಲೇಖಿಸಿದ್ದ ಸುಪ್ರೀಂಕೋರ್ಟ್ ಪುನ: ಅದನ್ನೇ ಒತ್ತಿ ಹೇಳಿತ್ತು:

“In the light of the existing constitutional mandate, the Speaker is not empowered to disqualify any member till the end of the term. However, a member disqualified under the Tenth Schedule shall be subjected to sanctions provided under Articles 75(1B), 164(1B) and 361B of Constitution, which provides for a bar from being appointed as a Minister or from holding any remunerative political post from the date of disqualification till the date on which the term of his office would expire or if he is re-elected to the legislature, whichever is earlier,” the court held.

ಇಲ್ಲಿನ 2 ವಿಷಯ ಗಮನಿಸಿ:

1.          ಅವರ ಅವಧಿ ಮುಗಿಯುವವರೆಗೂ ರಾಜಕೀಯ ಲಾಭಕರ ಹುದ್ದೆ ಕೊಡಬಾರದು.

2.        ಅವರು ಪುನರಾಯ್ಕೆ ಆಗುವವರೆಗೂ ರಾಜಕೀಯ ಲಾಭಕರ ಹುದ್ದೆ ಕೊಡಬಾರದು.

ಇವೆರಡರಲ್ಲಿ ಮೊದಲು ಯಾವುದು ಆಗುತ್ತದೋ ಅದು ಅನ್ವಯ ಆಗುತ್ತದೆ.

ಇಲ್ಲಿ re-elected ಪದದ ಸುತ್ತ ಹೋಗೋಣ. ಹುಣಸೂರು ಮತ್ತು ಹೊಸಕೋಟೆ ಉಪ ಚುನಾವಣೆಗಳಲ್ಲಿ ಎಂಟಿಬಿ ನಾಗರಾಜ್ ಮತ್ತು ಎಚ್. ವಿಶ್ವನಾಥ್ ಸೋತರು. ಅಂದರೆ ಅವರ ‘ಅನರ್ಹತೆ’ ಟ್ಯಾಗ್ ಹಾಗೇ ಇತ್ತು.

ಆದರೆ ಎಂಟಿಬಿ ನಾಗರಾಜ್ ಅವರು ಎಂಎಲ್ಸಿ ಚುನಾವಣೆಗೆ ‘ಸ್ಪರ್ಧಿಸಿ’ ಆಯ್ಕೆಯಾದರು ಎಂದು ಸಬೂಬು ಕೊಡಬಹುದು.

 ಆದರೆ, ವಿಶ್ವನಾಥ್ ನಾಮ ನಿರ್ದೇಶನಗೊಂಡಿದ್ದಾರೆ. ಇಲ್ಲಿ ಸುಪ್ರೀಂ ಹೇಳಿದ re-elect ಎಂಬ ಪದಕ್ಕೆ ಅರ್ಥ ಇದೆಯೇ? ಅವರು 2018ರಲ್ಲಿ ಗೆದ್ದಿದರಲ್ಲ, ಆ ಅವಧಿಯೂ ಮುಗಿದಿಲ್ಲ. ಅಂದ ಮೇಲೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಆದಂತೆಯೇ ಅಲ್ಲವೇ?

Leave a Reply

Your email address will not be published. Required fields are marked *

You May Also Like

ಬೈಕ್ ಖರೀದಿ : ಸಹಾಯಧನಕ್ಕೆ ಅರ್ಜಿ ಆಹ್ವಾನ

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃಧ್ದಿ ನಿಗಮದಿಂದ ಬೈಕ್ ಖರೀದಿ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಿದೆ.

ವಿರಾಟ್ ಕೊಹ್ಲಿ ಅನುಷ್ಕಾಗೆ ವಿಚ್ಛೇದನ ಕೊಡಬೇಕು ಎಂದವರಾರು? ಏಕೆ?

ಮುಂಬಯಿ: ಬಾಲಿವುಡ್ ಮತ್ತು ಕ್ರಿಕೆಟ್ ನಂಟು ತೀರಾ ಹಳೆಯದು. ಅದಕ್ಕೆ ಇತ್ತೀಚೆಗೆ ಮತ್ತೊಂದು ಕೊಂಡಿ ಬೆಸೆದವರು…

ಆದರಹಳ್ಳಿಗೆ ಹಾದಿ ಯಾವುದು..? ದೇವಿಹಾಳಕ್ಕೆ ಹೋಗುವ ದಾರಿ ಎಲ್ಲಿ?

ರಸ್ತೆಗಳು ನಿರ್ಮಾಣ ಮಾಡಿದ ಮೇಲೆ ನಿರ್ಮಿಸಿದ ರಸ್ತೆಗಳ ಮೇಲೆ ಇಷ್ಟೆ ಸಾಮಾರ್ಥ್ಯದ ವಾಹನಗಳು ಓಡಾಡಬೇಕು ಎನ್ನುವ ನಿಯಮವಿದೆ. ಆದರೆ ಅದ್ಯಾವ ನಿಉಮವನ್ನು ಪಾಲಿಸದೇ ಇರುವ ಕಾರಣಕ್ಕೆ ರಸ್ತೆಯೊಂದು ಹಳ್ಳ ಹಿಡಿದಿದೆ.

ರಾಜ್ಯದ ಬೊಕ್ಕಸಕ್ಕೆ ಭಾರಿ ಹೊಡೆತ!

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗಾಗಿ ಇನ್ನೂ ಲಾಕ್ ಡೌನ್ ಮುಂದುವರೆದಿದೆ. ಲಾಕ್ ಡೌನ್ ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ನಷ್ಟವಾಗಿದೆ.