ಸದ್ಯ ಜನಪ್ರಿಯವಾಗಿರುವ ಅಲಾದ್ದೀನ್ ಫ್ಯಾಂಟಸಿ ಟಿವಿ ಶೋನಲ್ಲಿ ಪಾತ್ರ ಮಾಡುತ್ತಿರುವ ಈ ಹುಡುಗಿ ಶೂಟಿಂಗ್ ಮತ್ತು ಸ್ಟಡಿ ನಡುವೆ ಬ್ಯಾಲೆನ್ಸ್ ಮಾಡುತ್ತ ಗೆಲ್ಲುತ್ತಿದ್ದಾಳೆ.

ಮುಂಬೈ: ಈಕೆ ಶೂಟಿಂಗ್ ಮುಗಿಸಿ ಪರೀಕ್ಷೆ ಬರೆದಳು, ಕೆಲವೊಮ್ಮೆ ಪೇಪರ್ ಬರೆದಾದ ಕೂಡಲೇ ಶೂಟಿಂಗ್ ಸ್ಪಾಟಿಗೆ ಓಡಿ ಅಭಿನಯಿಸಿದಳು. ಕಳೆದ 10 ವರ್ಷದಿಂದ ಹೀಗೆ ಶೂಟಿಂಗ್ ಮತ್ತು ಸ್ಟಡಿ ನಡುವೆ ಬ್ಯಾಲನ್ಸ್ ಮಾಡಿಕೊಂಡು ಗೆಲ್ಲುತ್ತಿರುವ ಈ ಹುಡುಗಿಯ ಹೆಸರು ಅವನೀತ್ ಕೌರ್. ಟಿವಿ ಪಾತ್ರ ಸುಲ್ತಾನಾ ಯಾಸ್ಮಿನ್ ಹೆಸರಿನಿಂದಲೇ ಹೆಚ್ಚು ಫೇಮಸ್ ಆಗಿರುವ ಯುವತಿ ಈಕೆ.

ಇತ್ತೀಚೆಗೆ ಪ್ರಕಟಗೊಂಡ ಸಿಬಿಎಸ್ಸಿ 12ನೆ ತರಗತಿ ಪರೀಕ್ಷೆಯಲ್ಲಿ ಶೇ. 74 ಸ್ಕೋರ್ ಮಾಡಿರುವ ಈಕೆ, ‘ಇಷ್ಟೊಂದು ಅಂಕ ನಿರೀಕ್ಷಿಸಿರಲಿಲ್ಲ’ ಎಂದಿದ್ದಾಳೆ. ಈಗ ‘ಅಲಾದ್ದೀನ್: ನಾಮ್ ತೋ ಸುನಾ ಹೋಗಾ’ ಎಂಬ ಟಿವಿ ಫ್ಯಾಂಟಸಿ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾಳೆ. ಕಳೆದ 10 ವರ್ಷದಿಂದ ೀಕೆ ಶಾಲೆ, ಸ್ಟಡಿ ಮತ್ತು ಶೂಟಿಂಗ್ ನಡುವೆ ಹೊಂದಾಣಿಕೆ ಮಾಡಿಕೊಂಡು ಎರಡೂ ಕಡೆ ಯಶಸ್ಸು ಕಾಣುತ್ತಿದ್ದಾಳೆ.

ಮೊದಲಿಗೆ ಈಕೆ ಬಾಲೆಯಾಗಿದ್ದಾಗ ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್-ಲಿಟಲ್ ಮಾಸ್ಟರ್’ ಸ್ಪರ್ಧೆ ಗೆಲ್ಲುವ ಮೂಲಕ ಬಣ್ಣದ ಜಗತ್ತಿಗೆ ಧುಮುಕಿದಳು. ಆಗಿಂದಲೂ ಡ್ಯಾನ್ಸ್ ಮತ್ತು ಟಿವಿ ಶೋಗಳಲ್ಲಿ ಭಾಗವಹಿಸುತ್ತಲೇ ಶಿಕ್ಷಣದಲ್ಲೂ ಸೈ ಎನಿಸಿಕೊಂಡಿದ್ದಾಳೆ.

Leave a Reply

Your email address will not be published. Required fields are marked *

You May Also Like

ಮನೆ ಚಲನಚಿತ್ರಕ್ಕೆ ‘ಯು’ ಸರ್ಟಿಫಿಕೇಟ್

ಗಾಯತ್ರಿ ಕ್ರಿಯೇಷನ್ಸ್ ಬೆಂಗಳೂರ ಹಾಗೂ ಸಂಯುಕ್ತ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಕಲಾತ್ಮಕ ಕನ್ನಡ ಚಿತ್ರ ‘ಮನೆ’ಗೆ ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ದೊರೆತಿದೆ.

SFI ಹೋರಾಟ ಯಶಸ್ವಿ: ಬಿಎಡ್., ಪರೀಕ್ಷೆ ರದ್ದುಗೊಳಿಸಿದ ವಿವಿ

ಇಲ್ಲಿನ ವಿಶ್ವ ವಿದ್ಯಾಲಯ ವ್ಯಾಪ್ತಿಯ ಬಿಇಡಿ., ವಿದ್ಯಾರ್ಥಿಗಳ ಎರಡನೇ ಸೆಮಿಸ್ಟರ್ ಪರಿಕ್ಷೇಗಳನ್ನು ರದ್ದುಗೊಳಿಸಿ ಮುಂದಿನ ಸೆಮಿಸ್ಟರ್ ಗೆ ತೇರ್ಗಡೆ ಮಾಡಬೇಕು ಎಂದು ಒತ್ತಾಯಿಸಿ SFI ನಿಂದ ತುಮಕೂರು ವಿಶ್ವವಿದ್ಯಾಲಯದ ಮುಂದೆ ಪ್ರತಿಭಟನೆ ನಡೆಯಿತು.

ನಿರ್ದೇಶನದತ್ತ ಕೈ ಹಾಕಿದ ಮಾಣಿಕ್ಯ ನಟಿ ವರಲಕ್ಷ್ಮೀ!

ಬೆಂಗಳೂರು : ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾಗಿದ್ದ ಮಾಣಿಕ್ಯ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ವರಲಕ್ಷ್ಮೀ ಈಗ ನಿರ್ದೇಶಕರಾಗಿ ಅವತಾರ ಎತ್ತಿದ್ದಾರೆ.

ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ ಎಂದ ಉಭಯ ದೇಶಗಳು!

ನವದೆಹಲಿ: ಲಡಾಖ್ ಪ್ರದೇಶದ ಗಾಲ್ವಾನ್‌ ಕಣಿವೆಯಲ್ಲಿ ಪೂರ್ವ ನಿಯೋಜಿತರಾಗಿ ಚೀನಾ ಸೈನಿಕರು ನಮ್ಮ ಸೈನಿಕರ ಮೇಲೆ…