ಬೆಂಗಳೂರ: ಗಾಯತ್ರಿ ಕ್ರಿಯೇಷನ್ಸ್ ಬೆಂಗಳೂರ ಹಾಗೂ ಸಂಯುಕ್ತ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಕಲಾತ್ಮಕ ಕನ್ನಡ ಚಿತ್ರ ‘ಮನೆ’ಗೆ ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ದೊರೆತಿದೆ.

ಉತ್ತರ ಕರ್ನಾಟಕದ ಹುಬ್ಬಳ್ಳಿ, ಶಿರಗುಪ್ಪಿ, ನಲವಡಿ ಗ್ರಾಮಗಳ ಸುತ್ತಮುತ್ತ ಹತ್ತುದಿನಗಳ ಕಾಲ ಸತತ ಚಿತ್ರೀಕರಣ ನಡೆಸಲಾದ ಕಲಾತ್ಮಕ ಚಿತ್ರ ಕೌಟುಂಬಿಕ ಕಥಾ ಹಂದರವನ್ನು ಹೊಂದಿದೆ. ಸಿದ್ದಪ್ಪ ಒಬ್ಬ ಕೂಲಿ ಕಾರ್ಮಿಕ ಆತನಿಗೆ ತನ್ನದೇ ಆದ ಸ್ವಂತ ಮನೆ ಕಟ್ಟಬೇಕೆಂಬ ಹಂಬಲ. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಹೇಗೆ ಮನೆ ನಿರ್ಮಾಣ ಮಾಡುತ್ತಾನೆ. ಮಗ ಸೊಸೆಯರಿಗಾಗಿ ಸಿದ್ದಪ್ಪ ಭಾಗ್ಯಮ್ಮರು ತೆಗೆದುಕೊಳ್ಳುವ ತೀರ್ಮಾನ, ಊರ ಗೌಡರು ಸಿದ್ದಪ್ಪನಿಗೆ ಮಾಡುವ ಸಹಾಯ ಕುತೂಹಲ ಮೂಡಿಸುತ್ತದೆ. ಇದೀಗ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು’ ಸರ್ಟಿಫಿಕೇಟ್ ನೀಡಿದ್ದು ತಂಡಕ್ಕೆ ಖುಷಿ ತಂದಿದೆ. ಪ್ರಮೀಳ ಸುಬ್ರಹ್ಮಣ್ಯ ಅವರನ್ನು ಹೊರತು ಪಡಿಸಿ ಸಂಪೂರ್ಣ ಉತ್ತರ ಕರ್ನಾಟಕದ ಕಲಾವಿದರನ್ನೇ ಚಿತ್ರದಲ್ಲಿ ಬಳಸಿಕೊಳ್ಳಲಾದ ಈ ಚಿತ್ರದಲ್ಲಿ ಕಲಾವಿದರೆಲ್ಲ ಸಹಜತೆಯಿಂದ ಉತ್ತಮವಾಗಿ ಅಭಿನಯಿಸಿದ್ದು, ಸಂಭಾಷಣೆಯಲ್ಲಿ ಭಾಷೆಯ ಹಿಡಿತ, ಹಾಡುಗಳು ಚೆನ್ನಾಗಿವೆ. ಛಾಯಾಗ್ರಹಣ ಕೂಡ ಉತ್ತಮವಾಗಿದ್ದು ಮನೆ ಚಿತ್ರವನ್ನು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಿಸಲು ತಯಾರಿ ನಡಿಸಿದ್ದೇವೆ ಎಂದು ಜಂಟಿ ನಿರ್ದೇಶಕರಾದ ಪೂರ್ಣಶ್ರೀ ಆರ್. ಮತ್ತು ರಶ್ಮೀ ಎಸ್. ತಿಳಿಸಿದ್ದಾರೆ.

ತಾರಾಗಣದಲ್ಲಿ ರೇಣುಕುಮಾರ ಸಂಸ್ಥಾನಮಠ, ಪ್ರಮೀಳ ಸುಬ್ರಹ್ಮಣ್ಯ, ಸಾಗರ್ ಕೆ.ಎಚ್, ಅಕ್ಷತಾ ವಿಲಾಸ್, ಮಂಜುನಾಥ ಪಾಟೀಲ, ವಿದ್ಯಾ ಪ್ರಭು ಗಂಜಿಹಾಳ, ಅವಿನಾಶ ಪಿಜಿ ಮೊದಲಾದವರು ಅಭಿನಯಿಸಿದ್ದಾರೆ. ಸಂಗೀತ ಶಿವಸತ್ಯ, ಛಾಯಾಗ್ರಹಣ ವಿನಾಯಕ ರೇವಡಿ, ಚಿತ್ರಕಥೆ, ಸಂಕಲನ ಟಿ.ಮುತ್ತುರಾಜು, ಕಥೆ ಮತ್ತು ನಿರ್ಮಾಪಕರು ಟಿ.ಎಸ್.ಕುಮಾರ, ಸಾಹಿತ್ಯ ಸಹನಿರ್ದೇಶನ ಸತೀಶ್ ಜೋಶಿ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವಿರೇಶ ಹಂಡಗಿ, ನಿರ್ದೇಶನವನ್ನು ಈ ಹಿಂದೆ ಕಬ್ಬಾಳಮ್ಮ ಮಹಿಮೆ ಪೌರಾಣಿಕ ಸಿನೇಮಾ ನಿರ್ದೇಶನ ಮಾಡಿದ್ದ ಜಂಟಿ ನಿರ್ದೇಶಕಿಯರಾದ ಪೂರ್ಣಶ್ರೀ ಆರ್. ಮತ್ತು ರಶ್ಮೀ ಎಸ್. ನಿರ್ದೇಶನ ಮಾಡಿದ್ದಾರೆ.