ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನದ ಹೂಡಿಕೆಯು ನಷ್ಟವನ್ನು ತಪ್ಪಿಸುತ್ತದೆ. ಆದರೆ ಚಿನ್ನದ ಹೂಡಿಕೆ ಇತರ ಕೆಲವು ಹೂಡಿಕೆಗಳಿಗಿಂದ ಕಡಿಮೆ ಆದಾಯ ತಂದು ಕೊಡುತ್ತದೆ.

ಮುಂಬೈ: ದೇಶದ ಆರ್ಥಿಕತೆ ಹಿನ್ನಡೆ ಅನುಭವಿಸುವ ಸಮಯದಲ್ಲಿ ಚಿನ್ನದ ಮೇಲಿನ ಹೂಡಿಕೆ ಅಥವಾ ಚಿನ್ನ ಖರೀದಿ ಪ್ರಮಾಣ ಹೆಚ್ಚುತ್ತಿದೆ. ಭಾರತದಲ್ಲಿ ಪರಂಪರಾಗತವಾಗಿ ಚಿನ್ನದ ಮೇಲೆ ಆಕರ್ಷಣೆ ಹೆಚ್ಚು ಮತ್ತು ಅದರ ಮೌಲ್ಯ ಇಳಿಯಲಾರದು ಎಂಬ ನಂಬಿಕೆಯಿದೆ.

ಭಾರತೀಯರ ಪಾಲಿಗೆ ಸಾರ್ವಕಾಲಿಕ ಹಾಗೂ ಸುರಕ್ಷಿತ ಹೂಡಿಕೆ ಎಂದರೆ ಚಿನ್ನ ಎಂಬ ಮಾತು ಒಂದು ನಂಬಿಕೆಯಾಗಿದೆ. ಉಳಿದ ಯಾವುದೇ ರೀತಿಯ ಹೂಡಿಕೆಗಳು ಕೈಕೊಟ್ಟರೂ ಚಿನ್ನ ಮಾತ್ರ ಎಲ್ಲರನ್ನೂ ಕೈ ಹಿಡಿಯುತ್ತದೆ ಎಂಬ ನಂಬಿಕೆ ದೇಶದ ಜನರದ್ದು. ಹೀಗಾಗಿ ಪ್ರತಿಯೊಬ್ಬರೂ ಚಿನ್ನವನ್ನು ಕೂಡಿಟ್ಟುಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಸದ್ಯ ಇದಕ್ಕೆ ಉತ್ತರವೂ ಸಿಕ್ಕಿದೆ.

2019ರ ಜುಲೈನಿಂದ ಇಲ್ಲಿಯವರೆಗೆ 10 ಗ್ರಾಮ್‌ ಚಿನ್ನದ ಬೆಲೆಯಲ್ಲಿ ಶೇ. 40ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 10 ಗ್ರಾಮ್‌ಗೆ ಇದ್ದ ಬೆಲೆ ರೂ. 39,000 ರಷ್ಟಿತ್ತು. ಈ ವರ್ಷ ಇದರ ಬೆಲೆ ರೂ. 49 ಸಾವಿರದಷ್ಟಾಗಿದೆ. ಈ ಬೆಲೆ ಸದ್ಯ ಏರಿಕೆ ಕಾಣುತ್ತಿದೆ. ಇದುವರೆಗೆ ಚಿನ್ನದ ಕಡೆ ತಲೆ ಹಾಕದಿದ್ದವರೂ, ನಷ್ಟದ ಪ್ರಮಾಣ ಕಡಿಮೆಯಿರುವ ಚಿನ್ನದತ್ತ ಮುಖ ಮಾಡುತ್ತಿದ್ದಾರೆ ಎಂದು ತಜ್ಞರು ಹೇಳುತ್ತಿದ್ದಾರೆ.

ಚಿನ್ನಕ್ಕೆ ಆದ್ಯತೆ ಏಕೆ?

ಇಲ್ಲಿ ಒಂದು ಉದಾಹರಣೆ ಹೇಳಬಹುದು. ನೋಟು ಅಮಾನ್ಯೀಕರಣ (ಡಿಮಾನಟೈಸೇಸನ್) ಸಂದರ್ಭದಲ್ಲಿ ನಗದು ಶೇಖರಿಸಿದವರಿಗಿಂತ ಚಿನ್ನದ ರೂಪದಲ್ಲಿ ಸಂಪತ್ತು ಶೇಖರಿಸಿದವರು ನಿರಾಳರಾಗಿದ್ದರು. ಅಮೆರಿಕಾದ ಡಾಲರ್ ಅಶಕ್ತವಾಗುತ್ತಿರುವುದರಿಂದ ಇದರ ಪರಿಣಾಮ ಶೇರು ಮಾರುಕಟ್ಟೆಗಳ ಮೇಲೂ ಆಗಬಹುದು. ಆಗ ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ದೊಡ್ಡ ಲಾಭ ಸಿಗದಿದ್ದರೂ ನಷ್ಟವಂತೂ ಸಂಭವಿಸುವುದಿಲ್ಲ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ, ವಿಶ್ವದ ಮೊದಲ ಐದು ಹೂಡಿಕೆ ಆದ್ಯತೆಗಳಲ್ಲಿ ಚಿನ್ನವೂ ಒಂದು. ಐದು ಹೂಡಿಕೆ ಆದ್ಯತೆಗಳೆಂದರೆ, ಉಳಿತಾಯ ಖಾತೆ, ಜೀವವಿಮೆ, ಸ್ಟಾಕ್ ಮತ್ತು ಶೇರುಗಳು,ಬಂಗಾರದ ನಾಣ್ಯ ಮತ್ತು ಬಂಗಾರದ ಆಭರಣ. ಹೂಡಿಕೆಗಳ ಪೈಕಿ 2016ರಲ್ಲಿ ಚಿನ್ನದ ಮೇಲೆ ಶೇ. 26ರಷ್ಟು ಹೂಡಿಕೆ ಆಗಿದ್ದರೆ , ಆ ಪ್ರಮಾಣ 2019ರ ಅಂತ್ಯದಲ್ಲಿ ಶೇ. 33ಕ್ಕೆ ಏರಿತ್ತು.

ಎಲ್ಲರಿಗೂ ಉಪಯೋಗವೇ?

ಚಿನ್ನದ ಮೇಲಿನ ಹೂಡಿಕೆ ಎಲ್ಲರಿಗೂ ಹೊಂದುವುದಿಲ್ಲ. ಇತರ ಹೂಡಿಕೆಗಳ ಬಗ್ಗೆ ಜ್ಞಾನ ಇಲ್ಲದವರು ಅಥವಾ ಅಂತಹ ಅವಕಾಶ ಸ್ಥಳೀಯವಾಗಿ ಲಭ್ಯ ಇರದವರಿಗೆ ಚಿನ್ನದ ಹೂಡಿಕೆ/ಖರೀದಿಯೇ ಸೂಕ್ತ. ಚಿನ್ನ ಸುಲಭವಾಗಿ ಮಾರಾಟಕ್ಕೆ ಸಿಗುವುದು ಕೂಡ ಇದಕ್ಕೆ ಕಾರಣ. ಆದರೆ ಸಣ್ಣ ಅವಧಿಯ ಹೂಡಿಕೆ ಅಷ್ಟು ಲಾಭಕರವಲ್ಲ. ಪೇಪರ್ ಗೋಲ್ಡ್ ಚಿನ್ನದ ಮೇಲೆಯೇ ಹೂಡಿಕೆ ಮಾಡುವುದಾದರೆ, ಪೇಪರ್ ಗೋಲ್ಡ್ ಆಯ್ಕೆ ಮಾಡಿಕೊಳ್ಳಬಹುದು. ಚಿನ್ನದ ಮೌಲ್ಯ ಆಧರಿತ ಸಾಕಷ್ಟು ಮ್ಯುಚುವಲ್ ಫಂಡ್ ಹೂಡಿಕೆ ಇವೆ. ಭಾರತ ಸರ್ಕಾರದ ಚಿನ್ನದ ಬಾಂಡ್ ಖರೀದಿ ಲಾಭಕರವೂ ಹೌದು, ಸುರಕ್ಷಿತವೂ ಹೌದು. ಇದರ ಮೇಲೆ ತೆರಿಗೆ ಬೀಳುವುದಿಲ್ಲ ಮತ್ತು ಪ್ರತಿ ವರ್ಷ ಹೆಚ್ಚುವರಿ ಶೇ. 2.5 ಬಡ್ಡಿಯೂ ದೊರೆಯುತ್ತದೆ. ಇಂತಹ ಹೂಡಿಕೆ ಮಾಡಿದಾಗ ಕನಿಷ್ಠ 8 ವರ್ಷದವರೆಗಿನ ಹೂಡಿಕೆ ಲಾಭಕರ.

Leave a Reply

Your email address will not be published. Required fields are marked *

You May Also Like

ಕಾಫಿಗೂ ಕೊರೊನಾ ಕಾಟ, ಬೆಳೆಗಾರರ ಸಂಕಷ್ಟ..!

ಲಾಕ್ ಡೌನ್ ಹಿನ್ನೆಲೆ ಕಾರ್ಮಿಕ ಕುಟುಂಬಗಳ ಪರಿಸ್ಥಿತಿ ಹೇಳತೀರದಾಗಿದೆ. ಕಾಫಿ ಉದ್ಯಮವನ್ನೆ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿವೆ. ಇನ್ನು ಕಾಫಿ ಉತ್ಪಾದನಾ ಉದ್ಯಮದ ಮೇಲೂ ಲಾಕ್ ಡೌನ್ ಪರಿಣಾಮ ಬೀರಿದೆ. ಇದರಿಂದ ಕಾಫಿ ಕೈಗಾರಿಕೆಗಳು ಸಂಕಷ್ಟ ೆದುರಿಸುವಂತಾಗಿದೆ.

16ನೇ ವಯಸ್ಸಿಗೆ ಟಿಕ್ ಟಾಕ್ ಸ್ಟಾರ್ ಈ ನಿರ್ಧಾರ ಕೈಗೊಂಡಿದ್ದೇಕೆ?

ನವದೆಹಲಿ : ಟಿಕ್ಟಾಲಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಹಲವು ಅನುಮಾನಗಳಿಗೆ ದಾರಿ…

ಲಾಕ್ ಡೌನ್ ಅವಧಿ ಮುಗಿಯುವವರೆಗೂ ವಿಮಾನ-ರೈಲು ಸೇವೆ ರದ್ದು

ನವದೆಹಲಿ : ಲಾಕ್ ಡೌನ್ ಮೇ. 17ರ ವರೆಗೆ ಮುಂದುವರೆದ ಹಿನ್ನೆಲೆಯಲ್ಲಿ ಲಾಕ್ ಡೌನ್ ತೆರುವುಗೊಳ್ಳುವವರೆಗೂ…

ಮುಂಬೈನ 800 ಚದರ ಅಡಿ ಜಾಗಕ್ಕೆ ತಿಂಗಳಿಗೆ 1 ರೂಪಾಯಿ!: ಪತ್ನಿಗೆ ಲೀಸ್ ಕೊಟ್ಟ ಬ್ಯಾಂಕ್ ಚೇರ್ಮನ್

ಖಾಸಗಿ ಬ್ಯಾಂಕಿನ ಮುಖ್ಯಸ್ಥರೊಬ್ಬರು ತಮ್ಮ ಪತ್ನಿಯ ಎನ್.ಜಿ.ಒ.ಗೆ ತಮ್ಮ ಬ್ಯಾಂಕಿನ ಪಕ್ಕದ ಜಾಗವನ್ನು ಬಳಸಿಕೊಳ್ಳಲು ನೀಡಿದ್ದ ವಿಷಯ ಈಗ ಬೆಳಕಿಗೆ ಬಂದಿದೆ. ತಿಂಗಳಿಗೆ ನಾಮಕಾವಸ್ಥೆ ಒಂದೇ ಒಂದು ರೂಪಾಯಿ ಬಾಡಿಗೆಯಷ್ಟೇ ಎಂದು ಎನ್.ಡಿ.ಟಿ.ವಿ ವರದಿ ಮಾಡಿದೆ. ಯೆಸ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್ ಗಳು ದಿವಾಳಿ ಹೊಂದಿದ್ದರ ಹಿಂದೆ ಬ್ಯಾಂಕ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರ ಸ್ವಾರ್ಥವಿತ್ತು ಎನ್ನುವುದನ್ನು ನೋಡಿದ್ದೇವೆ.