ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಹುಲಿವಾನ್ ಗಂಗಾಧರಯ್ಯ (70) ನಿಧನ ಹೊಂದಿದ್ದಾರೆ. ನಿನ್ನೆ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮದುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ರಾತ್ರಿ 11 ಗಂಟೆಯ ಹೊತ್ತಿಗೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.

ಗಂಗಾಧರಯ್ಯ 118ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಗೂ 1500ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದರು. ಇತ್ತೀಚಿನವರೆಗೂ ಕೂಡ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಶಬ್ದವೇದಿ, ಕುರಿಗಳು ಸರ್ ಕುರಿಗಳು, ನೀರ್ ದೋಸೆ, ಅಪ್ಪು, ಕ್ವಾಟ್ಲೆ ಸತೀಶ, ಕರ್ವ, ಪಾಪಿಗಳ ಲೋಕದಲ್ಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟ ಹುಲಿವಾನ್ ಗಂಗಾಧರಯ್ಯ ನಟಿಸಿದ್ದರು.

Leave a Reply

Your email address will not be published. Required fields are marked *

You May Also Like

ಅಭಿಮಾನಿಗಳಲ್ಲಿ ಗೋಲ್ಡನ್ ಸ್ಟಾರ್ ಮನವಿ ಮಾಡಿದ್ದೇನು?

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಜು. 2ರಂದು ಗೋಲ್ಡನ್…

ಹೊಸ ಆಯಾಮದ ಕಥೆಯನ್ನು ಹೇಳಲು ಹೊರಟ ಅಂಬರೀಶ್

ಚಂದನವದಲ್ಲಿ ಹೊಸಬರ ಸಿನಿಮಾಗಳು ಸಾಕಷ್ಟು ನಿರೀಕ್ಷೆ ಮೂಡಿಸುತ್ತಿವೆ. ಇದರ ಜೊತೆಗೆ, ಸಿನಿಮಾಗಳಲ್ಲಿ ಹೊಸಹೊಸ ಪ್ರಯೋಗಗಳನ್ನು ನಡೆಸುವ ನಿರ್ದೇಶಕರಿಗೆ ಕನ್ನಡ ಚಿತ್ರರಂಗ ಕಾಲಕಾಲಕ್ಕೆ ವೇದಿಕೆ ಒದಗಿಸುತ್ತಿದೆ.

ಇನ್ನೊಂದು ಜನ್ಮವಿದ್ದರೆ ಶಿವಣ್ಣ ಅಣ್ಣನಾಗಲಿ ಎಂದ ಜಗ್ಗೇಶ್

ನನಗೆ ಇನ್ನೊಂದು ಜನ್ಮ ಇದ್ದರೆ ಶಿವಣ್ಣನೆ ನನಗೆ ಅಣ್ಣನಾಗಿ ಬರಲಿ.. ನನ್ನ ಬದುಕಲ್ಲಿ ನಾನು ಕಂಡ ಶ್ರೇಷ್ಠಮನುಜ..ರಾಜಣ್ಣ ಅವರ ಕರೆಯುತ್ತಿದ್ದದ್ದು ದೊಡ್ಡ ನೋಟಿನ ಸಾಹುಕಾರ ಎಂದು!