ಪ್ರತಿಯೊಬ್ಬರಿಗೂ ಒಂದು ಮುಖ ಇರುತ್ತದೆ. ಆದರೆ ಆ ಮುಖದೊಳಗೆ ಒಂದು ಭಾವ ಇರುತ್ತದೆ. ಆದರೆ ಇಲ್ಲಿರುವುದು ಕೂಡ ಅದೇ ಮುಖ ಆದರೆ ಅದೇ ಮುಖದಲ್ಲಿ ಏಳು ಪಾತ್ರಗಳಿಗೆ ಜೀವ ತುಂಬುವ ಕಾರ್ಯ ನಡೆದಿದೆ. ಇದೇನಿದು ಅದೇ ಮುಖ ಅಂತಾರೆ. ಅದೇ ಮುಖಕ್ಕೆ ಏಳು ಪಾತ್ರಗಳಿಗೆ ಜೀವ ಅಂತಾರೆ. ಹೀಗೆ ಇಂತಹ ಅದೆಷ್ಟೋ ಕುತೂಹಲಗಳು ಮನದಲ್ಲಿ ಮೂಡುವುದು ಸಹಜ. ಆದರೆ ಇದೀಗ ಅದೇ ಮುಖವನ್ನು ಸದ್ದಿಲ್ಲದೆ ಮಾಡಲು ಮುಂದಾಗುವ ಮೂಲಕ ನಿರ್ದೇಶಕ ಸಂದೇಶ್ ಮತ್ತೆ ಸುದ್ದಿಯಲ್ಲಿದ್ದಾರೆ.

ವರನಟ ಡಾ. ರಾಜ್ ಕುಮಾರ್ ಅಭಿನಯದ ಅದೇ ಕಣ್ಣು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಅಣ್ಣಾವ್ರ ನಟನೆಗೆ ಜನರು ಫಿದಾ ಆಗಿದ್ದರು. ಚಿತ್ರವೂ ಹಿಟ್ ಆಗಿತ್ತು. ಸಸ್ಪೆನ್ಸ್ ಹೊಂದಿದ್ದ ಈ ಚಲನಚಿತ್ರ ಇಂದಿಗೂ ಜನಮಾನಸದಲ್ಲಿ ಹಾಗೆಯೇ ಉಳಿದಿದೆ. ಈ ವಿಚಾರ ಯಾಕೆ ಅಂತೀರಾ. ಈಗ ”ಅದೇ ಮುಖ” ಎಂಬ ಸಿನಿಮಾದ ಟೈಟಲ್. ಗಾಂಧಿನಗರದಲ್ಲಿ ಈ ಚಿತ್ರ ಹೇಗಿರಬಹುದು ಎಂಬ ಕುತೂಹಲ ಗರಿಗೆದರುವಂತೆ ಮಾಡಿದೆ.

ನಟ ಸಂದೇಶ್ ಶೆಟ್ಟಿ ಆಜ್ರಿ

ಹೊಸತನ ಹುಡುಕಾಟದ ನಿರ್ದೇಶಕ ಹಾಗೂ ಉದಯೋನ್ಮುಖ ನಟ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶಿಸಿ, ನಟಿಸುತ್ತಿರುವ ಅದೇ ಮುಖ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದೂ ಸಿನಿಮಾದ ಟೈಟಲ್ ನಿಂದ. ಆಶ್ಚರ್ಯವಾದರೂ ಇದು ಸತ್ಯ. ಸಿನಿಮಾ ಸೆಟ್ ಏರುವ ಮುನ್ನವೇ ಸಾಕಷ್ಟು ಸದ್ದು ಮಾಡಿದ ಚಿತ್ರದ ಟೈಟಲ್ ”ಅದೇ ಮುಖ”.

ಪ್ರತಿಯೊಬ್ಬ ಮನುಷ್ಯನಿಗೆ ತನ್ನದೇ ಆದ ಮುಖ ಇರುತ್ತದೆ. ಹಾಗೆಂದು ಮಾತ್ರಕ್ಕೆ ಈ ಚಿತ್ರದಲ್ಲಿ ಒಂದು ಮುಖದ ಸುತ್ತ ಕಥೆ ಹೆಣೆದಿಲ್ಲ. ಅದೇ ಮುಖ ಎನ್ನುವುದು ಕೇವಲ ಒಂದು ಪಾತ್ರವಲ್ಲ. ಬರೋಬ್ಬರಿ ಏಳು ಪಾತ್ರ. ಒಂದಕ್ಕಿಂತ ಮತ್ತೊಂದು ಭಿನ್ನ, ವಿಶಿಷ್ಟ. ಕ್ಷಣ ಕ್ಷಣಕ್ಕೂ ಸಸ್ಪೆನ್ಸ್ ಹೆಚ್ಚಿಸುತ್ತಲೇ ಹೋಗುವಂತ ಚಿತ್ರವಾಗುವ ಎಲ್ಲಾ ಸಾಧ್ಯತೆ ಇದೆ. ಓರ್ವ ಕಲಾವಿದ ಏಳು ವಿಚಿತ್ರ ಪಾತ್ರಗಳಲ್ಲಿ ನಟಿಸುವ ಮೂಲಕ ಗಿನ್ನಿಸ್ ರೆಕಾರ್ಡ್ ಗೆ ತೆಗೆದುಕೊಂಡು ಹೋಗಬೇಕೆಂಬ ಹಂಬಲವೂ ಇದೆ. ಇದಕ್ಕೆಲ್ಲಾ ಮೂಲ ಕಾರಣ ಚಿತ್ರದ ನಿರ್ದೇಶಕ ಕಂ ನಟ ಸಂದೇಶ್ ಶೆಟ್ಟಿ ಆಜ್ರಿ.

ನಿರ್ದೇಶಕ ಸಂದೇಶ್

ಆಲ್ ದಿ ಬೆಸ್ಟ್ ಸಂದೇಶ ಚಿತ್ರರಂಗದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ತುಡಿತ ಹೊಂದಿರುವ ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಒಬ್ಬ ಕ್ರೀಯಾಶೀಲ ವ್ಯಕ್ತಿತ್ವದವರು. ಬದುಕಿನಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದವರು. ಪ್ರತಿಯೊಂದು ಕಾರ್ಯದಲ್ಲಿ ನಿಷ್ಟೆ ಹಾಗು ವೃತ್ತಿಪರತೆಯನ್ನು ಮೈಗೂಡಿಸಿಕೊಂಡವರು. ಯಾವುದೇ ಕಾರ್ಯದಲ್ಲಾಗಲಿ ತನಗಿಂತಲೂ ತನ್ನನ್ನು ನಂಬಿದವರ ಬಗ್ಗೆ ಅಪಾರ ಕಾಳಜಿಯುಳ್ಳ ಸಂದೇಶ್, ಸಮಾಜದ ಒಳಿತಿನ ಬಗೆಗೆ ಹೆಚ್ಚು ಮಹತ್ವ ನೀಡುತ್ತಾರೆ. ಈಗಾಗಲೇ ಕತ್ತಲಕೋಣೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸದಾ ಹೊಸತನದ ಬಗ್ಗೆ ತುಡಿತ ಹೊಂದಿರುವ ಸಂದೇಶ ಈಗ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ನಿಷ್ಕಲ್ಮಶ ಮನಸ್ಸಿನ ಯುವ ಉತ್ಸಾಹಿ ನಿರ್ದೇಶಕ ಸಂದೇಶ್ ಗೆ ಆಲ್ ದಿ ಬೆಸ್ಟ್.

ಭಾವ ಸತ್ತಾಗ ಭಾವನೆ ಹುಟ್ಟಿತು ಎಂಬ ವಿಶಿಷ್ಟ ಟ್ಯಾಗ್ ಲೈನ್ ಹೊಂದಿರುವ ಅದೇ ಮುಖ ಚಿತ್ರ ಹಲವು ನಿರೀಕ್ಷೆಗಳನ್ನಂತೂ ಮೂಡಿಸಿದೆ. ಕಥೆಯ ಬಗೆಗೆ ಮೂಲ ಕಲ್ಪನೆ ತಲೆಯಲ್ಲಿ ಬರುತ್ತಿದ್ದಂತೆ ಚಿತ್ರ ಬರೆಯಲು ಶುರು ಮಾಡಿದ್ದಾರೆ ಸಂದೇಶ್ ಶೆಟ್ಟಿ. ಇದಕ್ಕಾಗಿ ಸಾಕಷ್ಟು ತಲೆಕೆಡಿಸಿಕೊಂಡು ಸಾಕಷ್ಟು ಸಮಯ ತೆಗೆದುಕೊಂಡು ಕಥೆ ತಯಾರಿಸುವ ಕಾರ್ಯ ನಡೆಸಿದ್ದಾರೆ. ಈಗ ಸಿನಿಮಾ ಸೆಟ್ಟೇರಿದ್ದು, ಚಿತ್ರೀಕರಣವೂ ಸದ್ಯದಲ್ಲಿಯೇ ಆರಂಭವಾಗಲಿದೆ. ತಸ್ಮಯ್ ಪ್ರೊಡಕ್ಷನ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಸಂದೇಶ್ ಶೆಟ್ಟಿ ಕಥೆ ಹೇಳುತ್ತಿದ್ದಂತೆ ಹಿಂದೂ ಮುಂದೂ ನೋಡದೇ ಗ್ರೀನ್ ಸಿಗ್ನಲ್ ತೋರಿಸಿದ್ದಾರೆ ನಿರ್ಮಾಪಕರು,

ಧರ್ಮಸಿಂಧು, ಆಧ್ಯಾತ್ಮಿಕ ಚಿಂತಕ ರಾಘವೇಂದ್ರ ಉಳ್ಳೂರ ಅವರು ಸಂಕ್ರಾಂತಿ ಹಬ್ಬದ ದಿನವೇ ಅದೇ ಮುಖ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಖ್ಯಾತ ಚಲನಚಿತ್ರ ನಟ ಕಂ ನಿರ್ಮಾಪಕ ದಿವಂ ಕುಂದರ್ ಕ್ಲಾಪ್ ಮಾಡಿದರು. ಉದ್ಯಮಿ, ನ್ಯಾಯವಾದಿ ವಿಜಯ್ ಶೆಟ್ಟಿ, ಕರುಣ್ ಕುಂದರ್, ಅಶ್ವಥ್, ಸುನೀಲ್, ಸುನೀಲ್ ಬೈಂದೂರು, ಪ್ರವೀಣ್ ಯಕ್ಷಿಮಠ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

You May Also Like

ನಟಿ ನಿತ್ಯಾ ಮೆನನ್ಳ ಒಂದು ಲಿಪ್-ಲಾಕ್ ಉಪ್ಪಾ:ಒಂದ್ ಕಿಸ್ ಹೊಡೆತಕ್ಕೆ ನೆಟ್ಟಿಗರು ಉಸ್ಸಪ್ಪಾ!

ಲವಲವಿಕೆಯ ಹುಡುಗಿ, ಪ್ರಬುದ್ಧ ನಟಿ ನಿತ್ಯಾ ಮೆನನ್ಳ ಒಂದು ಲಿಪ್-ಲಾಕ್ ಫೋಟೊ ನೆಟ್ಟಿಗರಲ್ಲಿ ಸಂಚಲನ ಮೂಡಿಸಿದೆ.…

ಈಗಿನಿಂದಲೇ ಹೊಸ ಗೆಟಪ್ ನಲ್ಲಿ ಬರಲು ತಯಾರಾಗುತ್ತಿದ್ದಾರೆ ಸುದೀಪ್!

ಲಾಕ್ ಡೌನ್ ಅವಧಿಯಲ್ಲಿ ಫ್ಯಾಂಟಮ್ ಕೆಲಸದಲ್ಲಿ ಸುದೀಪ್ ತೊಡಗಿಸಿಕೊಂಡಿದ್ದಾರೆ. ತಮ್ಮ ಮುಂದಿನ ಕಮರ್ಷಿಯಲ್ ಆಕ್ಷನ್ ಮೂವಿಗಾಗಿ ಹೊಸ ಗೆಟಪ್ ಪಡೆದಿದ್ದಾರೆ.

ಒಳ್ಳೆಯ ಅವಕಾಶಗಳು ಸಿಕ್ಕರೆ ಕನ್ನಡದಲ್ಲಿಯೂ ನಟಿಸುವೆ – ಸಂಯುಕ್ತಾ!

ಬೆಂಗಳೂರು : ಲಾಕ್ ಡೌನ್ ಇದ್ದರೂ ಅಭಿಮಾನಿಗಳೊಂದಿಗೆ ತಮ್ಮ ಒಡನಾಟ ಇಟ್ಟುಕೊಂಡಿರುವ ನಟಿ ಸಂಯುಕ್ತಾ ಹೆಗ್ಡೆ…

ಕತ್ತಲ ಕೋಣೆ ಕನ್ನಡ ಸಿನಿಮಾಕ್ಕೆ ಭೋಜಪುರಿ ನಿರ್ಮಾಪಕನ ಕಣ್ಣು!

ಕತ್ತಲ ಕೋಣೆ ಕನ್ನಡ ಸಿನಿಮಾ ಮೇಲೆ ಇದೀಗ ಭೋಜಪುರಿ ನಿರ್ಮಾಪಕರು ಕಣ್ಣು ಬಿದ್ದಿದೆ. ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಸಿನಿಮಾ ಇದಾಗಿದ್ದು 1998ರ ಸತ್ಯ ಘಟನೆ ಆಧಾರಿತ ಚಿತ್ಯರ. ಉಡುಪಿಯ ಸಂದೇಶ ಶೆಟ್ಟಿ ಆಜ್ರಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿತ್ತು. ಚಿತ್ರದ ನಾಯಕ ನಟ ಕೂಡ ಸಂದೇಶ ಅವರೆ. ಅಂದುಕೊಂಡಂತಾದರೆ ಕನ್ನಡದ ಕತ್ತಲ ಕೋಣೆ ಮರಾಠಿಯಲ್ಲೂ ಸದ್ದು ಮಾಡಲಿದೆ.