ಸಿನಿಮಾ, ರಾಜಕೀಯ ಮತ್ತು ವಯಕ್ತಿಕ ಜೀವನ ಎಲ್ಲದರಲ್ಲೂ ಪಾರದರ್ಶಕವಾಗಿದ್ದ ಬೋಲ್ಡ್ ನಟಿ ರಮ್ಯಾ ಕಳೆದ ಆರು ತಿಂಗಳಿಂದ ಸುದ್ದಿಯಲ್ಲೆ ಇರಲಿಲ್ಲ. ಈಗ ಸಾಮಾಜಿಕ ಜಾಲತಾಣದ ಮೂಲಕ ಪ್ರತ್ಯಕ್ಷವಾಗಿದ್ದಾರೆ.
ಬೆಂಗಳೂರು: ಚಂದನವನದ ಪದ್ಮಾವತಿ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ಕ್ವೀನ್ ದರ್ಶನಕ್ಕಾಗಿ ಎಷ್ಟೋ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಇನ್ಟಾಸ್ಟಾ ಗ್ರಾಂ ಸ್ಟೇಟಸ್ ಡಿಫೆರೆಂಟ್ ಆಗಿ ಪೌಟ್ ಮಾಡಿರುವ ಅವರು, ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಎರಡ್ಮೂರು ಫೋಟೋಗಳಲ್ಲಿ ಪೌಟ್ ಮಾಡಿದರೆ, ಕೆಲವು ಫೋಟೋಗಳಲ್ಲಿ ಕಣ್ಮುಚ್ಚಿ ಪೋಸ್ ನೀಡಿದ್ದಾರೆ. ಮತ್ತೊಂದರಲ್ಲಿ ತಮ್ಮ ನಾಯಿ ಜೊತೆ, ಮಿರರ್ ಸೆಲ್ಫಿ ಫೋಟೋ ಇದೆ. ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ತಮ್ಮ ಟ್ವಿಟ್ಟರ್ ಖಾತೆಯನ್ನು ರಮ್ಯ ನಿಷ್ಕ್ರೀಯಗೊಳಿಸಿದ್ದರು. ಅಲ್ಲದೇ, ಇತ್ತೀಚೆಗೆ ಟ್ವಿಟ್ಟರ್ ಖಾತೆಯನ್ನು ಆ್ಯಕ್ಟಿವ್ ಮಾಡಿದ್ದಾರೆ. ಆದರೆ, ಮೇಡಮ್ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬುವುದಕ್ಕೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ.