ಬೆಂಗಳೂರು: ನಟ ಶಿವಣ್ಣ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದಾರೆ. ಅಲ್ಲದೇ, ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಸದ್ಯ ಶಿವರಾಜ್ ಕುಮಾರ್ ಅವರು ಇಂದ್ರಸೇನ ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಚಿತ್ರವನ್ನು ಮುರಳಿ ಮೋಹನ್ ನಿರ್ದೇಶಿಸಿದ್ದಾರೆ. ಇಂದ್ರಸೇನ ಚಿತ್ರದ ಮೂಲಕ ಮುರಳಿ ಮೋಹನ್ ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ.
ಈ ಹಿಂದೆ ನಿರ್ದೇಶಕ ಮುರಳಿ ಮೋಹನ್ ಅವರು, ನಾಗರಹಾವು, ಸಂತ ಸೇರಿದಂತೆ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಆ ನಂತರ ನಿರ್ದೇಶನದಿಂದ ದೂರ ಉಳಿದಿದ್ದರು. ಸದ್ಯ ಇಂದ್ರಸೇನಾ ಚಿತ್ರದ ಮೂಲಕ ಮರಳಿ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ.

ಒಂದಷ್ಟು ನೈಜ ಅಂಶಗಳನ್ನಿಟ್ಟುಕೊಂಡು ಚಿತ್ರ ರೂಪಿಸಲಾಗಿದೆ. ಶತ್ರುಗಳು ಹೊರಗಿಲ್ಲ, ಒಳಗೆಯೇ ಇದ್ದಾರೆ. ಹೊರಗಿನ ಶತ್ರುಗಳಿಗಿಂತ ನಮ್ಮ ಬೆನ್ನ ಹಿಂದೆ ಇರುವ ಶತ್ರುಗಳು ತುಂಬಾ ಅಪಾಯಕಾರಿ. ಈ ಹಿಂದೆ ನಾವು ಬ್ರಿಟಿಷರ ವಿರುದ್ಧ ಹೋರಾಡಬೇಕಾಗಿತ್ತು. ಆ ನಂತರ ನಮ್ಮೊಳಗಿನ ಶತ್ರುಗಳ ಜೊತೆಯೇ ಹೋರಾಡುವಂತಾಯಿತು ಎಂಬುವುದು ಚಿತ್ರದ ತಿರುಳಾಗಿದೆ.

Leave a Reply

Your email address will not be published. Required fields are marked *

You May Also Like

ಖ್ಯಾತ ಚಿತ್ರ ನಟ ಇರ್ಫಾನ್ ಖಾನ ಇನ್ನಿಲ್ಲ

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್(53) ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ್ದಾರೆ.

ಒಳ್ಳೆಯ ಅವಕಾಶಗಳು ಸಿಕ್ಕರೆ ಕನ್ನಡದಲ್ಲಿಯೂ ನಟಿಸುವೆ – ಸಂಯುಕ್ತಾ!

ಬೆಂಗಳೂರು : ಲಾಕ್ ಡೌನ್ ಇದ್ದರೂ ಅಭಿಮಾನಿಗಳೊಂದಿಗೆ ತಮ್ಮ ಒಡನಾಟ ಇಟ್ಟುಕೊಂಡಿರುವ ನಟಿ ಸಂಯುಕ್ತಾ ಹೆಗ್ಡೆ…

ಇನ್ನೊಂದು ಜನ್ಮವಿದ್ದರೆ ಶಿವಣ್ಣ ಅಣ್ಣನಾಗಲಿ ಎಂದ ಜಗ್ಗೇಶ್

ನನಗೆ ಇನ್ನೊಂದು ಜನ್ಮ ಇದ್ದರೆ ಶಿವಣ್ಣನೆ ನನಗೆ ಅಣ್ಣನಾಗಿ ಬರಲಿ.. ನನ್ನ ಬದುಕಲ್ಲಿ ನಾನು ಕಂಡ ಶ್ರೇಷ್ಠಮನುಜ..ರಾಜಣ್ಣ ಅವರ ಕರೆಯುತ್ತಿದ್ದದ್ದು ದೊಡ್ಡ ನೋಟಿನ ಸಾಹುಕಾರ ಎಂದು!