ಪುಣೆಯಲ್ಲಿ ಶಂಕರ್ ಕುರಾಡೆ ಎನ್ನುವಾತ 2.80 ಲಕ್ಷ ರೂ. ಮೌಲ್ಯದ ಚಿನ್ನದ ಮಾಸ್ಕ್ ಧರಿಸಿದ್ದನ್ನು ನೋಡಿ ಪ್ರೇರಣೆ ಪಡೆದ ಒರಿಸ್ಸಾದ ಚಿನ್ನ ಪ್ರಿಯನೊಬ್ಬ 3.6 ಲಕ್ಷ ರೂ ಮಾಸ್ಕ್ ಮಾಡಿಸಿಕೊಂಡಿದ್ದಾನೆ.

ಕಟಕ್( ಒರಿಸ್ಸಾ): ಪುಣೆಯ ಶಂಕರ್ ಕರಾಡೆಯ ಚಿನ್ನದ ಮಾಸ್ಕ್ ನಿಂದ ಸ್ಪೂರ್ತಿ ಪಡೆದ ಕಟಕ್ ನಗರದ ಉದ್ಯಮಿ ಅಲೋಕ್ ಮೊಹಂತಿ ಎಂಬಾತ 3.5 ಲಕ್ಷ ರೂ ಮೌಲ್ಯದ ಚಿನ್ನದ ಮಾಸ್ಕ್ ಮಾಡಿಸಿಕೊಂಡು, ಅದನ್ನು ಧರಿಸಿ ಮೆರೆಯುತ್ತಿದ್ದಾನೆ.

 ಆನ್ ಲೈನ್ ಆರ್ಡರ್ ಕೊಟ್ಟು ಮುಂಬೈನಿಂದ ಇದನ್ನು ತರಿಸಿಕೊಂಡಿದ್ದಾನಂತೆ! ಅಂದರೆ ಚಿನ್ನದ ಮಾಸ್ಕ್ ತಯಾರಿಸುವುದು ಈಗ ಲಾಭದಾಯಕ ವ್ಯಾಪಾರ ಆಗಿದೆ ಎಂದಾಯಿತು.

‘ಮೊದಲಿನಿಂದಲೂ ನನಗೆ ಬಂಗಾರ ಎಂದರೆ ಪ್ರೀತಿ. ಜನ ನನ್ನನ್ನು ಬಂಗಾರದ ಮನುಷ್ಯ ಎಂತಲೇ ಕರೆಯುತ್ತಾರೆ. ಪುಣೆ ವ್ಯಕ್ತಿಯ ಮಾಸ್ಕ್ ಬಗ್ಗೆ ಓದಿದಾಗ ನನಗೂ ಆಸೆಯಾಯಿತು’ ಎಂದು ಮೊಹಂತಿ ಹೇಳಿದ್ದಾನೆ.

ಎನ್-95 ಮಾಸ್ಕಿಗೆ ಚಿನ್ನದ ಎಳೆಗಳನ್ನು ಪೋಣಿಸಿ ಈ ಮಾಸ್ಕ್ ಮಾಡಲಾಗಿದೆಯಂತೆ. ಈ ಬಂಗಾರದ ಮಾಸ್ಕಿನ ಟ್ರೆಂಡ್ ಅನ್ನು ತೆವಲು ಅನ್ನುವುದೋ, ಮೂರ್ಖತನ ಎಂದು ಕರೆಯುವುದೋ?

Leave a Reply

Your email address will not be published. Required fields are marked *

You May Also Like

ಎಡಗೈ ಆಟಗಾರರು ನಿಜವಾಗಿಯೂ ಪ್ರತಿಭಾವಂತರೆ?

ಭಾರತ ತಂಡದ ಪ್ರತಿಭಾವಂತೆ ಹಾಗೂ ಸ್ಟೈಲಿಷ್ಟ್ ಆಟಗಾರ್ತಿ ಸ್ಮೃತಿ ಮಂಧನಾ ಅವರು ಶನಿವಾರ ತಮ್ಮ 24ನೇ ಹುಟ್ಟು ಹಬ್ಬದ ಸಂಭ್ರಮ ಆಚರಿಸಿಕೊಂಡಿದ್ದಾರೆ. ಅವರಿಗೆ ಖ್ಯಾತ ಆಟಗಾರರು ಹಾಗೂ ಅಭಿಮಾನಿ

ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ಪಡೆಯಲು ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ

ದೆಹಲಿ: ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದು ಗುಜರಾತ್, ರಾಜಸ್ಥಾನ, ಛತ್ತೀಸ್ಘಾಡ್ಸೇರಿದಂತೆ 13 ಜಿಲ್ಲೆಗಳಲ್ಲಿ ನೆಲೆನಿಂತ ಹಿಂದೂ, ಸಿಖ್, ಜೈನ, ಬೌದ್ಧ ಹಾಗು ಮುಸ್ಲಿಮೇತರರಿಗೆ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಭಾರತ ಸರ್ಕಾರ ಅರ್ಜಿ ಆಹ್ವಾನಿಸಿದೆ.