ವಿಯೆಟ್ನಾಂ: 9ನೇ ಶತಮಾನದ ಶಿವಲಿಂಗಗಳು ವಿಯೆಟ್ನಾಂನಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಭಾರತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾಹಿತಿ ನೀಡಿದ್ದಾರೆ. ಇಲ್ಲಿನ ಮೈಸನ್ ಪ್ರದೇಶದಲ್ಲಿ ಉತ್ಖನನ ವೇಳೆ ಶಿವಲಿಂಗಗಳು ಪತ್ತೆಯಾಗಿವೆ ಎಂದು ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಇನ್ನು ಈ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಉತ್ಖನನ ನಡೆಸಿದ್ದಾರೆ. ಉತ್ಖನನ ವೇಳೆ 6 ಶಿವಲಿಂಗಗಳು ಪತ್ತೆಯಾಗಿದ್ದು ಇವುಗಳನ್ನು ಸಂರಕ್ಷಿಸಿ ಇಡುವ ನಿಟ್ಟಿನಲ್ಲಿ ಭಾರತ ಹಾಗೂ ವಿಯೆಟ್ನಾಂ ಮುಂದಾಗಿದೆ. ಈ ವಿಚಾರವಾಗಿ ವಿದೇಶಾಂಗ ಸಚಿವಾಲಯ ಒಂದು ವಿಭಾಗವನ್ನು ನಿಯೋಜಿಸಿದೆ ಎನ್ನಲಾಗಿದೆ.

ಮಾಹಿತಿಯ ಪ್ರಕಾರ ಈ ಭಾಗದಲ್ಲಿ ಚಂಪಾ ಅರಸರು ಆಳ್ವಿಕೆ ನಡೆಸಿದ್ದಾರೆ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಈ ಪ್ರದೇಶವನ್ನು 4ನೇ ಶತಮಾನದಿಂದ 14ನೇ ಶತಮಾನದವರೆಗೆ ಚಂಪಾ ಅರಸರು ಆಳ್ವಿಕೆ ನಡೆಸಿದ್ದಾರೆ ಎಂಬ ಇತಿಹಾಸವಿದೆ.

ಅವರ ಕಾಲಾವಧಿಯಲ್ಲಿ 70ಕ್ಕೂ ಹೆಚ್ಚು ದೇವಾಲಯ ನಿರ್ಮಿಸಲಾಗಿತ್ತು. ವಿಯೆಟ್ನಾಂ ಯುದ್ಧದ ವೇಳೆ ಅಮೇರಿಕಾ ಬಾಂಬ್ ದಾಳಿಯಿಂದ ದೇವಸ್ಥಾನಗಳು ನಾಶವಾದವು ಎಂದು ಹೇಳಲಾಗುತ್ತಿದೆ.  

1 comment
  1. ಸೂಪರ್ ಸರ್
    ಪತ್ರಿಕೆ ಉತ್ತಮವಾಗಿ ಮೂಡಿಬರುತ್ತಿದೆ

Leave a Reply

Your email address will not be published.

You May Also Like

ರಾಜ್ಯದಲ್ಲಿಂದು 2228 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 2228 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 31105…

ಲಿಲ್ಲಿ ಆಗಲು ಸಜ್ಜಾಗಿರುವ ಕನ್ನಡದ ಬುಲ್ ಬುಲ್!

ಬೆಂಗಳೂರು: ಚಂದನವನದ ಬೆಡಗಿ, ಡಿಂಪಲ್ ರಾಣಿ ರಚಿತಾ ರಾಮ್ ಮತ್ತೊಂದು ಲುಕ್ ಗೆ ಸಜ್ಜಾಗಿದ್ದಾರೆ.ಈ ಬುಲ್…

ಗದಗ ಜಿಲ್ಲೆಯಲ್ಲಿ ಮುಂದುವರಿದ ಕೊರೊನಾ ನಾಗಾಲೋಟ

ಗದಗ:ಜಿಲ್ಲೆಯಲ್ಲಿ ಕೂರೂನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಎರಡೇ ದಿನದಲ್ಲಿ ಬರೋಬ್ಬರಿ 37 ಜನರಿಗೆ…

ರಾಯಚೂರಿನಲ್ಲಿಂದು 9 ಕೊರೊನಾ ಪಾಟಿಟಿವ್..!

ಜಿಲ್ಲೆಯಲ್ಲಿಂದು 9 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆಯಾಗಿದೆ.