ಬೆಂಗಳೂರು: ನಟ ಧ್ರುವ ಸರ್ಜಾ ಟಾಲಿವುಡ್ ಸಿನಿಪ್ರೀಯರಿಗೆ ಕ್ಷಮೆಯಾಚಿಸಿದ್ದಾರೆ. ಅರೇ ಯಾಕೆ ಧ್ರುವಾ ಸರ್ಜಾ ಕ್ಷಮೆಯಾಚಿಸಿದ್ದಾರೆ ಎನ್ನುವ ಕುತೂಹಲು ಮೂಡುವುದು ಸಹಜ. ಇದೇ ಮೊದಲ ಬಾರಿ ತೆಲುಗು ಪ್ರೇಕ್ಷಕರಿಗೆ ಮುಂದೆ ಧ್ರುವ ಬರಲಿದ್ದಾರೆ. ಇಂತಹ ಸಂದರ್ಭದಲ್ಲಿ ಧ್ರುವ ಕ್ಷಮೆಯಾಚಿಸಿದ್ದು ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

ಈಗಾಗಲೇ ಧ್ರುವ ಸರ್ಜ ನಟನೆಯ ಪೊಗರು ಸಿನಿಮಾ ಸ್ಯಾಂಡಲ್​ವುಡ್​ ಅಂಗಳದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಪೊಗರು ಕನ್ನಡ,  ತಮಿಳು ಹಾಗೂ ತೆಲುಗಿನಲ್ಲಿ ರಿಲೀಸ್ ಆಗಲಿದೆ. ಹೀಗಾಗಿ ಈ ಮೂಲಕ ಇದೇ ಮೊದಲ ಬಾರಿ ಧ್ರುವ ಸರ್ಜಾ ಟಾಲಿವುಡ್ ಪ್ರೇಕ್ಷಕರಿಗೆ ಪರಿಚಯವಾಗುತ್ತಿದ್ದಾರೆ. ಕೆಜಿಎಫ್​ ಸಿನಿಮಾದ ನಂತರ ಕನ್ನಡದ ಬಹುತೇಕ ಸಿನಿಮಾಗಳು ತೆಲುಗು ಹಾಗೂ ತಮಿಳಿನಲ್ಲಿ ತೆರೆ ಕಾಣಲಿವೆ. ಇನ್ನು ತೆರೆಗೂ ಮುನ್ನವೇ ಪೊಗರು ಸಿನಿಮಾದ ಡೈಲಾಗ್​ ಟೀಸರ್​ ಹಾಗು  ಖರಾಬು ಹಾಡು ಹಾಗೂ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಪ್ರೇಕ್ಷಕರ ಮನಕ್ಕೂ ಲಗ್ಗೆ ಇಟ್ಟಿದೆ.

ಪೊಗರು ಸಿನಿಮಾ ಪ್ರಚಾರಕ್ಕಾಗಿ ನಟ ಧ್ರುವ ಇನ್ ಸ್ಟಾಗ್ರಾಂನಲ್ಲಿ ಟಾಲಿವುಡ್ ಸಿನಿಪ್ರೀಯರಿಗೆ ಕ್ಷಮೆಯಾಚಿಸಿದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಮೂಲಕ ಅರ್ಜುನ್​ ಸರ್ಜಾ ಅವರೊಂದಿಗಿರುವ ಧ್ರುವ ಸರ್ಜಾ ಕೂಡ ಟಾಲಿವುಡ್​ ಪ್ರೇಕ್ಷಕರಿಗೆ ಪರಿಚಯ ಮಾಡಿಕೊಂಡಿದ್ದಾರೆ. ತಾನು ಅರ್ಜುನ್​ ಸರ್ಜಾ ಅವರ ಸಂಬಂಧಿ, ತೆಲುಗಿನಲ್ಲಿ ತಪ್ಪಾಗಿ ಮಾತನಾಡಿದರೆ ಕ್ಷಮಿಸಿ ಎನ್ನುತ್ತಲೇ ಮಾತು ಆರಂಭಿಸಿ, ಪೊಗರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾವನ್ನು ನೋಡಿ ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಡ್ರಗ್ಗಿಣಿಯರಿಗೆ ಇಂದು ಸಿಗಲಿಲ್ಲ ಬೇಲ್! ಕಾರಣವೇನು ಗೊತ್ತಾ?

ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಜಾಗೊಂಡಿದೆ.

ಸಿನಿಮಾದಲ್ಲಿ ಮೂಡಿ ಬರಲಿದೆ ಮುರಳೀಧರನ್ ಜೀವನ!

ವಿಶ್ವ ಬ್ಯಾಟಿಂಗ್ ದಿಗ್ಗಜರ ನಿದ್ದೆಗೆಡಿಸಿದ್ದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ನಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಅಭಿಮಾನಿಗಳಲ್ಲಿ ಗೋಲ್ಡನ್ ಸ್ಟಾರ್ ಮನವಿ ಮಾಡಿದ್ದೇನು?

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಜು. 2ರಂದು ಗೋಲ್ಡನ್…

ಲಾಕ್ ಡೌನ್ ಸಮಯದಲ್ಲಿ ಬಾಲಿವುಡ್ ನಟ ಸಲ್ಲು ಬಾಯ್ ಮಾಡಿದ್ದೆನು ಗೊತ್ತಾ..?

ಬಾಲಿವುಡ್ ನಟ ಸಲ್ಲು ಬಾಯ್ ಅಭಿಮಾನಿಗಳಿಗೆ ಮಾತ್ರ ಲಾಕ್ ಡೌನ್ ನಲ್ಲಿ ಸಲ್ಲುಭಾಯ್ ಏನು ಮಾಡ್ತಿದ್ದಾರೆ ಅಂತ ಕುತೂಹಲ ಇತ್ತು. ಆದ್ರೆ ಅಭಿಮಾನಿಗಳಿಗೆ ತಾವು ಈ ಬಿಡುವಿನಲ್ಲಿ ಏನು ಮಾಡ್ತಿದ್ದಾರೆ ಅಂತ ತೋರಿಸಿದ್ದಾರೆ.