ಗದಗ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದು ಜನತೆಯಲ್ಲಿ ಆತಂಕ ಹೆಚ್ಚಿಸಿದೆ. ಈ ಕಾರಣದಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದ ವ್ಯಕ್ತಿ ನೆರವಿಗೆ ಯಾರೊಬ್ಬರು ಮುಂದಾಗದ ಘಟನೆ ಗದಗ ನಗರದ ಬೆಟಗೇರಿಯಲ್ಲಿ ನಡೆದಿದೆ.

ವ್ಯಕ್ತಿಯ ಸ್ಥಿತಿ ಕಂಡು ಕೊನೆಗೂ ಯುವಕನೋರ್ವ ಹೊಟ್ಟೆ ನೋವಿನಿಂದ ನರಳಾಡುತ್ತಿದ್ದ ವ್ಯಕ್ತಿಯ ಸಹಾಯಕ್ಕೆ ಮುಂದಾಗಿ ಮಾನವೀಯತೆ ಮೆರೆದಿದ್ದಾನೆ. ಬಹುತೇಕರು ಕೊರೊನಾ ಆತಂಕದಿಂದ ದೂರದಿಂದ ನೋಡುತ್ತಿದ್ದರು. ಇಲ್ಲಿನ ಕುರಹಟ್ಟಿ ಪೇಟೆಯ ನಿವಾಸಿಯೊಬ್ಬರು ಗಂಟಲ ನೋವು, ಹೊಟ್ಟೆ ಉರಿ ಎಂದು ನರಳುತ್ತಾ ರಸ್ತೆ ಮದ್ಯೆದಲ್ಲಿ ಉರಾಳಾಡುತ್ತಿದ್ದರು.

ಈ ವ್ಯಕ್ತಿಗೆ ಕೊರೊನಾ ಇರಬಹುದು ಎಂಬ ಸಂಶಯದಿಂದ ಯಾರೂ ಆತನ ನೆರವಿಗೆ ಧಾವಿಸಲಿಲ್ಲ. ಈ ನರಳಾಟ ನೋಡದೇ ಯುವಕನೊಬ್ಬ ನರಳಾಡುತ್ತಿದ್ದ ವ್ಯಕ್ತಿಯನ್ನು ಆರೈಕೆ ಮಾಡಿದ್ದು ಮಾನವೀಯತೆಗೆ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *

You May Also Like

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಿಗರಿಗೆ ವಿಶೇಷ ಗಿಫ್ಟ್ ನೀಡಿದ ಆರ್ ಸಿಬಿ ತಂಡ!

ದುಬೈ : ಕನ್ನಡದಲ್ಲಿಯೇ ಕನ್ನಡ ರಾಜ್ಯೋತ್ಸವದ ಕುರಿತು ಶುಭಾಶಯ ತಿಳಿಸುವುದರೊಂದಿಗೆ ಕನ್ನಡಿಗರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಸರ್ಕಾರದ ಅಸಡ್ಡೆ – ಯಾದಗಿರಿಯಲ್ಲಿ ಹೆಚ್ಚಿದ ಆತಂಕ!

ಯಾದಗಿರಿ: ಮಹಾರಾಷ್ಟ್ರದ ಕೊರೊನಾದಿಂದಾಗಿ ಜಿಲ್ಲೆಯ ಜನರು ಕಂಗೆಟ್ಟು ಹೋಗಿದ್ದಾರೆ. ಸದ್ಯ ಮತ್ತೊಂದು ತಲೆನೋವು ಶುರುವಾಗಿದೆ. ವರದಿ…

ಮುಂದುವರಿದ ಸಾರಿಗೆ ನೌಕರರ ಮುಷ್ಕರ: ಬಿಕೋ ಎನ್ನುತ್ತಿದೆ ಗಜೇಂದ್ರಗಡ ಬಸ್ ನಿಲ್ದಾಣ

ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಸಾರಿಗೆ ನೌಕರರ ಅನಿರ್ಧಿಷ್ಠಾವಧಿ ಮುಷ್ಕರ ಮೂರನೇ ದಿನಕ್ಕೆ ಮುಂದುವರೆದಿದೆ. ಹೀಗಾಗಿ ಗಜೇಂದ್ರಗಡ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಚಾರ ಇಲ್ಲದೇ, ಬಿಕೋ ಎನ್ನುತ್ತಿತ್ತು.