ಮುಂಬೈ: ಕೊರೋನಾ ಹಿನ್ನೆಲೆ ಈಗಾಗಲೇ ಒಂದುವರೆ ತಿಂಗಳಿಗೂ ಅಧಿಕ ದಿನಗಳಿಂದ ದೇಶ ಲಾಕ್ ಡೌನ್ ಘೋಷಣೆಯಲ್ಲಿದೆ. ಆದರೆ ಈ ಬಿಡುವಿನ ವೇಳೆಯಲ್ಲಿ ಬಹುತೇಕ ನಟ-ನಟಿಯರು ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಕೊಮಡಿದ್ದರು. ತಮ್ಮ ಹಾಡು,ಕುಣಿತ ಹೀಗೆ ಏನೇ ಒಂದಲ್ಲ ಒಂದು ಚಟುವಟಿಕೆಗಳು ವೈರಲ್ ಆಗುತ್ತಲೇ ಇವೆ. ಆದರೆ ಬಾಲಿವುಡ್ ನಟ ಸಲ್ಲು ಬಾಯ್ ಅಭಿಮಾನಿಗಳಿಗೆ ಮಾತ್ರ ಲಾಕ್ ಡೌನ್ ನಲ್ಲಿ ಸಲ್ಲುಭಾಯ್ ಏನು ಮಾಡ್ತಿದ್ದಾರೆ ಅಂತ ಕುತೂಹಲ ಇತ್ತು. ಆದ್ರೆ ಅಭಿಮಾನಿಗಳಿಗೆ ತಾವು ಈ ಬಿಡುವಿನಲ್ಲಿ ಏನು ಮಾಡ್ತಿದ್ದಾರೆ ಅಂತ ತೋರಿಸಿದ್ದಾರೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ಫಾರಂ ಹೌಸ್‌ನಲ್ಲಿ ಕುಟುಂಬ ಸದಸ್ಯರೊಂದಿಗೆ ಸಿಕ್ಕಿ ಹಾಕಿಕೊಂಡಿರುವ ಸಲ್ಮಾನ್ ಖಾನ್ ತನ್ನ ಹವ್ಯಾಸಗಳನ್ನು ಪುನರ್‌ಜಾಗೃತಗೊಳಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಚಿತ್ರ ಬರೆಯುವುದು, ಕುದುರೆ ಸವಾರಿ ಮಾಡುವುದು ಹೀಗೆ ಒಂದಲ್ಲ ಒಂದು ಚಟುವಟಿಯಲ್ಲಿ ತಮ್ಮನ್ನು ತಾವು ಫುಲ್ ಬ್ಯೂಸಿಯಾಗಿಸಿಕೊಮಡಿದ್ದಾರೆ ಸಲ್ಮಾನ್ ಖಾನ್.

ಬಾಲಿವುಡ್ ನಟ ಸಲ್ಮಾನ್ ಖಾನ್ ರಚಿಸಿ ಹಾಡಿರುವ ಕೊರೋನಾ ಪ್ಯಾರ್ ಕೊರೋನಾ ಗೀತೆಗೆ ನೃತ್ಯ

ಪ್ಯಾರ್ ಕರೋನಾ ಎನ್ನುವ ಹಾಡಿಗೆ ಸಾರೆ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರಾ ಎಂಬ ಸಾಲುಗಳನ್ನೂ ಸೇರಿಸಿಕೊಂಡು ಗೀತೆ ರಚನೆ ಮಾಡಿದ್ದಾರೆ ಸಲ್ಮಾನ್ ಖಾನ್. ಸುಮಧುರು ಸಂಗೀತಕ್ಕೆ ಕೊಂಚ ರ್ಯಾಪ್ ಸ್ಪರ್ಷ ಕೂಡ ಈ ಹಾಡಿಗೆ ನೀಡಲಾಗಿದೆ. ಅಂದ್ಹಾಗೆ ಈ ಗೀತೆ ರಚನೆಯಲ್ಲಿ ಹುಸೇನ್ ದಲಾಲ್ ಅವರು ಕೂಡ ಸಲ್ಮಾನ್ ಗೆ ಸಾಥ್ ನೀಡಿದ್ದಾರೆ. ಹಾಡಿಗೆ ಸಂಗೀತ ನಿರ್ದೇಶನ ಮಾಡಿರುವುದು ಸಾಜಿದ್ ವಾಜಿದ್. ಹಾಡಿನ ನಿರ್ದೇಶನವನ್ನು ಅಭಿರಾಜ್ ಮಿನಾವಾಲಾ ಮಾಡಿದ್ದಾರೆ. ಸಂಗೀತ ನಿರ್ಮಾಣ ಅದಿತ್ಯ ದೇವ್ ಅವರದ್ದು.

ಸಲ್ಲುಭಾಯ್ ಹವ್ಯಾಸಗಳಲ್ಲಿ ಇದೀಗ ಗೀತೆರಚನೆ ಹೊಸ ಸೇರ್ಪಡೆಯಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ನಾವೆಲ್ಲ ಅಳವಡಿಸಿಕೊಳ್ಳಬೇಕಾದ ಅಂಶಗಳ ಕುರಿತು ಸ್ವತಃ ಹಾಡು ರಚಿಸಿ ತಾವೇ ಹಾಡಿದ್ದು ವಿಶೇಷ. ಸಲ್ಮಾನ್ ಖಾನ್ ಅವರ ಈ ಹಾಡು ಕೆಲವೇ ಗಂಟೆಗಳಲ್ಲಿ ಫುಲ್ ವೈರಲ್ ಆಗಿದೆ.

Leave a Reply

Your email address will not be published. Required fields are marked *

You May Also Like

ಪಿಜಿ ಬಾಡಿಗೆ ಹಣ ಕೊಡದಿದ್ದಕ್ಕೆ ಮಾಲಿಕ ಮಾಡಿದ್ದೇನು?

ಪಿಜಿ ಬಾಡಿಗೆ ನೀಡಿಲ್ಲವೆಂಬ ಕಾರಣಕ್ಕೆ ಯುವತಿಯರನ್ನು ಪಿಜಿ ಮಾಲೀಕ ಕೂಡಿ ಹಾಕಿದ ಘಟನೆ ನಗರದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.

ರಾಜ್ಯಸಭೆ ಚುನಾವಣೆ ಫಲಿತಾಂಶ: ಯಾವ ರಾಜ್ಯದಲ್ಲಿ ಯಾರು ಆಯ್ಕೆ..?

ಆಂಧ್ರವೈ.ಎಸ್.ಆರ್.ಸಿ. – 4 (ಡಿಸಿಎಂ ಪಿಳ್ಳಿ ಸುಭಾಷ್ ಚಂದ್ರ ಬೋಸ್, ಸಚಿವ ಎಂ.ವಿ.ರಮಣ, ಪರಿಮಳಾ ನತವಾನಿ,…

ಕೊರೊನಾ ಭಯ – ಹಲವೆಡೆ ಸ್ವಯಂ ಪ್ರೇರಿತ ಬಂದ್!

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಹಲವಡೆ ಸ್ವಯಂ…

ಅಪಘಾತ: ಪ್ಯಾಟೆ ಹುಡ್ಗಿ ರಿಯಾಲಿಟಿ ಶೋದ ಮೆಬಿನಾ ಸಾವು

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಎಂಬ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮನ ಗೆದ್ದವರು ಮೆಬಿನಾ.