ಮಂಗಳೂರು : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಹಾಗೂ ಕಿರುತೆರೆ ನಟಿ ಅನುಶ್ರೀ ಅವರು ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ಅವರು ಇಂದು ಬೆಳಿಗ್ಗೆ 9ಕ್ಕೆ ಉತ್ತರ ವಿಭಾಗ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ಮಂಗಳೂರು ಉಪ ನಗರ ಉಪ ಪೊಲೀಸ್ ಆಯುಕ್ತ ವಿನಯ ಗಾಂವ್ಕರ್ ನೇತೃತ್ವದಲ್ಲಿ ಸಿಸಿಬಿ ಇನ್ಸಪೆಕ್ಟರ್ ಶಿವಪ್ರಕಾಶ್ ವಿಚಾರಣೆ ನಡೆಸಿದರು.

ಆದರೆ, ಮಾಧ್ಯಮ ಸೇರಿದಂತೆ ಅಭಿಮಾನಿಗಳಿಂದಾಗಿ ಹೆಚ್ಚಿನ ಗದ್ದಲ ಸೃಷ್ಟಿಯಾಗಬಹುದು ಎಂಬ ಕಾರಣಕ್ಕೆ ಪೊಲೀಸರು ವಿಚಾರಣೆ ಸ್ಥಳವನ್ನು ಗೌಪ್ಯವಾಗಿಟ್ಟಿದ್ದರು. ನಗರದಲ್ಲಿ ನಡೆಸದೆ ಹೊರಭಾಗದ ಮಂಗಳೂರು ಉತ್ತರ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆಸುತ್ತಿದ್ದಾರೆ.

ಶುಕ್ರವಾರವೇ ಅನುಶ್ರೀ ಅವರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಪೊಲೀಸರು ನಿನ್ನೆ ವಿಚಾರಣೆ ನಡೆಸಲಿಲ್ಲ. ಹೀಗಾಗಿ ಅವರ ವಿಚಾರಣೆ ಇಂದು ನಡೆಯಿತು. ನಿನ್ನೆಯೇ ಮಂಗಳೂರಿಗೆ ಆಗಮಿಸಿದ್ದ ಅನುಶ್ರೀ ಅವರ ಕುಟುಂಬದ ಜೊತೆ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು. ಅಲ್ಲದೇ, ಡ್ರಗ್ಸ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದ್ದರು. 

Leave a Reply

Your email address will not be published. Required fields are marked *

You May Also Like

ರಾಜ್ಯಸಭೆಯತ್ತ ಎಚ್.ವಿಶ್ವನಾಥ್ ಚಿತ್ತ..?

ಇತ್ತಿಚಿನ ಬೆಳವಣಿಗೆಯನ್ನು ನೋಡಿದರೆ ವಿಶ್ವನಾಥ್ ಚಿತ್ತ ರಾಜ್ಯಸಭೆಯತ್ತ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲ ಕಾರಣಗಳಿಂದ ಶಿಘ್ರದಲ್ಲಿ ಬರಲಿರುವ ರಾಜ್ಯಸಭೆ ಚುನಾವಣೆಗೆ ಇನ್ನಷ್ಟು ಮಹತ್ವ ಬಂದಿದೆ

ತ್ರಿಪುರಾದಲ್ಲಿ ಸೈನಿಕರಿಗೆ ಮಾತ್ರ ಕಂಡು ಬಂದ ಸೋಂಕು!

ತ್ರಿಪುರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಮತ್ತೆ 24 ಜನ ಬಿಎಸ್ ಎಫ್ ಯೋಧರಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣ 88 ಕ್ಕೆ ತಲುಪಿವೆ .

ಪೊಲೀಸರಿಗೆ ಸಿಕ್ಕ ನಟ ಸುಶಾಂತ್ ಸಿಂಗ್ ಒಪ್ಪಂದಗಳ ಪ್ರತಿಗಳು!

ನವದೆಹಲಿ: ನಟ ಸುಶಾಂತ್ ಸಿಂಗ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪ್ರತಿಗಳನ್ನು ಯಶ್ ರಾಜ್ ಫಿಲ್ಮ್ಸ್ (ವೈಆರ್…

ನಾಳೆ ನಡೆಯುವ ಜನಸಂಪರ್ಕ ಯಾತ್ರೆಗೆ ಬಿಎಸ್‌ವೈ, ಸಿಎಂ ಬೊಮ್ಮಾಯಿ

ಉತ್ತರಪ್ರಭ ಸುದ್ದಿ ಗದಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸೇರಿದಂತೆ ಅನೇಕ…