ಗದಗ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 9532 ವಿದ್ಯಾರ್ಥಿಗಳು ಹಾಜರಾಗಿದ್ದು ಆ ಪೈಕಿ 6005 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಕಳೆದ ವರ್ಷ ಜಿಲ್ಲೆಯ ಪರೀಕ್ಷಾ ಫಲಿತಾಂಶ ಶೇ. 57.76 ರಷ್ಟಾಗಿ ಜಿಲ್ಲೆಯು 26 ನೇ ಸ್ಥಾನ ಪಡೆದುಕೊಂಡಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯು ಶೇ. 63 ರಷ್ಟು ಫಲಿತಾಂಶ ಪಡೆಯುವ ಮೂಲಕ 22 ನೇ ಸ್ಥಾನ ಪಡೆದುಕೊಂಡಿದೆ.
ಜಿಲ್ಲೆಯಲ್ಲಿ ರ್ಯಾಂಕ್ ವಿಜೇತರು:


ಕಲಾ ವಿಭಾಗದಲ್ಲಿ ಗದಗ ನಗರದ ಎಚ್.ಸಿ.ಇ.ಎಸ್.ಪದವಿ ಪೂರ್ವ ಕಾಲೇಜಿನ ಕುಮಾರ್ ಲಿಂಬಣ್ಣ ಬಡಿಗೇರ 582 ಅಂಕಗಳನ್ನು ( 97 %) ಪಡೆದಿದ್ದು ಪ್ರಥಮ ಸ್ಥಾನ , ಎಸ್.ಜೆ.ಜೆ. ಎಂ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗಂಗಮ್ಮ ಮಂಜುನಾಥ ಕುರ್ತಕೋಟಿ 576 ಅಂಕಗಳನ್ನು ( 96 %) ಪಡೆದಿದ್ದು ದ್ವಿತೀಯ ಸ್ಥಾನ, ಗಜೇಂದ್ರಗಡದ ಎಸ್.ವಿ.ವಿ. ಎಸ್. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶೇಫಾ ಬೋದ್ಲೆಖಾನ್ 573 ಅಂಕಗಳನ್ನು ( 95.5 % ) ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.


ವಾಣಿಜ್ಯ ವಿಭಾಗದಲ್ಲಿ ಬೆಟಗೇರಿಯ ಎ.ಎಸ್.ಎಸ್.ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಶಾಂತ ನಾಕೋಡ 592 ಅಂಕಗಳನ್ನು ಪಡೆದಿದ್ದು ( 98.67%) ಪ್ರಥಮ ಸ್ಥಾನ, ಶ್ರೇಯಾ ಕುಷ್ಟಗಿ 585 ಅಂಕಗಳನ್ನು ಪಡೆದು ( 97.5% ) ದ್ವಿತೀಯ ಸ್ಥಾನ ಹಾಗೂ ಪ್ರತೀಕ್ಷಾ ಎಸ್. ಬನಸಾಲಿ 585 ಅಂಕಗಳನ್ನು ಪಡೆದು ( 97.5% ) ದ್ವಿತೀಯ ಸ್ಥಾನ , ನರಗುಂದದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅರುಣಕುಮಾರ ಗದಗಿನ 580 ಅಂಕಗಳನ್ನು ಪಡೆದು ( 96.67 % ) ತೃತೀಯ ಸ್ಥಾನ ಪಡೆದಿದ್ದಾರೆ.


ವಿಜ್ಞಾನ ವಿಭಾಗದಲ್ಲಿ ಗದಗ ನಗರದ ಸನ್ಮಾರ್ಗ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಂಕಿತಾ ಸಂಶಿ 580 ಅಂಕಗಳನ್ನು ಪಡೆದು ( 96.67 %) ಪ್ರಥಮ ಸ್ಥಾನ, ಗದಗ ನಗರದ ಬಿಪಿನ್ ಚಿಕ್ಕಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸೌರವ್ ಮೆಣಸಗಿ 580 ( 96.67 %) ಪ್ರಥಮ ಸ್ಥಾನ , ನರೇಗಲ್ ದ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮನೋಜಗೌಡ ರಬ್ಬನಗೌಡರ 578 ಅಂಕಗಳನ್ನು ಪಡೆದು ( 96.63 % ) ದ್ವಿತೀಯ ಸ್ಥಾನ , ಗದಗ ನಗರದ ವಿನಯ ಚಿಕ್ಕಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಯೋಗೇಶ ದೇಸಾಯಿ 577 ( 96.17 %) ತೃತೀಯ ಸ್ಥಾನ ಪಡೆದಿದ್ದಾರೆ.


ಅನುತ್ತೀರ್ಣ ವಿದ್ಯಾರ್ಥಿಗಳು ಓ.ಎಂ.ಆರ್. ಅರ್ಜಿಗಳಿಗಾಗಿ ಕಾಯುವ ಬದಲು ಫಲಿತಾಂಶ ಪಟ್ಟಿ ಆಧಾರದ ಮೇಲೆ ಅನುತ್ತೀರ್ಣ ವಿಷಯಗಳಿಗೆ ಪರೀಕ್ಷಾ ಶುಲ್ಕ ಪಾವತಿಸಲು ಜುಲೈ 31 ಕೊನೆಯ ದಿನವಾಗಿದೆ. ಕಾಲೇಜಿನವರು ಪರೀಕ್ಷಾ ಶುಲ್ಕ ಸಂದಾಯ ಮಾಡಲು ಅಗಸ್ಟ 3 ಹಾಗೂ ಪರೀಕ್ಷಾ ಅರ್ಜಿಗಳನ್ನು ಉಪನಿರ್ದೇಶಕರ ಕಚೇರಿಗೆ ಸಲ್ಲಿಸಲು ಅಗಸ್ಟ 5 ಕೊನೆಯ ದಿನವಾಗಿದೆ. ಒಂದು ವಿಷಯಕ್ಕೆ 140/- ರೂ, ಎರಡು ವಿಷಯಕ್ಕೆ 270 /- ರೂ, ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400/- ರೂ ಶುಲ್ಕ ಪಾವತಿಸಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಎಸ್. ರಾಜೂರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮಾಗಡಿ : ಗ್ರಾಪಂ ಮಾಜಿ ಸದಸ್ಯರ ಬಣವಿಗೆ ಬೆಂಕಿ..!

ತಾಲೂಕಿನ ಮಾಗಡಿ ಗ್ರಾಪಂ ವ್ಯಾಪ್ತಿಯ ಪರಸಾಪೂರ (ವಾರ್ಡ ನಂ:6) ಗ್ರಾಮದಲ್ಲಿ ಶೇಂಗಾ ಬಣವಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಮಾಜಿ ಗ್ರಾಪಂ ಸದಸ್ಯ ಬಸಪ್ಪ ಬೇರಗಣ್ಣವರ ಸದ್ಯ ನಡೆಯುತ್ತಿರುವ ಚುನಾವಣೆಗೆ ಅವರ ಮಗ‌ನನ್ನು ಕಣಕ್ಕೆ ಇಳಿಸಿದ್ದರು.

ಭಾರಿ ಮಳೆಗೆ ಹಾರಿ ಹೋದ ಮೇಲ್ಛಾವಣಿ

ಹಾವೇರಿ: ಜಿಲ್ಲೆಯಾದ್ಯಂತ ಬಿರುಗಾಳಿ ಸಮೇತ ಮಳೆ ಹಿನ್ನೆಲೆ ಬಿರುಗಾಳಿ ಹೊಡೆತಕ್ಕೆ ಸರ್ಕಾರಿ ಶಾಲೆಯ ಚಾವಣಿ ಹಾರಿ…

ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಅಧ್ಯಕ್ಷರಾಗಿ ಸೋಮಣ್ಣ ಬೆಟಗೇರಿ ನೇಮಕ

ಲಕ್ಷ್ಮೇಶ್ವರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನವ ಹಕ್ಕುಗಳು ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ರಾಜ್ಯ ಆರೋಗ್ಯ ಘಟಕ…

ನಿಧನ: ಗಿರಿಜಮ್ಮ ಬಸನಗೌಡ ಪಾಟೀಲ್

ಮಾಜಿ ಸಚಿವ ಎಸ್.ಎಸ್.ಪಾಟೀಲ್ ಇವರ ಅಣ್ಣಂದಿರಾದ ದಿ.ಮುದುಕನಗೌಡ ಭರಮನಗೌಡ ಪಾಟೀಲ್ ಇವರ ಹಿರಿಯ ಸುಪುತ್ರ ದಿ.ಬಸನಗೌಡ ಮುದುಕನಗೌಡ ಪಾಟೀಲ್ ಇವರ ಧರ್ಮಪತ್ನಿ ಗಿರಿಜಮ್ಮ ಬಸನಗೌಡ ಪಾಟೀಲ್(77) ಇವರು ಭಾನುವಾರ ನಿಧನ ಹೊಂದಿದರು.