ಧಾರವಾಡ: ರಮೇಶ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಷಡ್ಯಂತ್ರ ಅಂತಾ ಹೇಳಿದ್ದಾರೆ ಎಂದ ಅವರು, ನಾನು ಎಲ್ಲಿಯೂ ಸಹ ನನ್ನ ಬಳಿ ಸಿಡಿ ಇವೆ ಅಂತಾ ಹೇಳಿಲ್ಲ, ಯಾರ ಬಳಿಯಾದರೂ ನನ್ನ ಹೇಳಿಕೆಯ ದಾಖಲೆ ಇದ್ದರೆ ತೋರಿಸಿ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನೇಶ ಕಲ್ಲಹಳ್ಳಿಯವರು ರಮೇಶ ಜಾರಕಿಹೊಳಿ ಸಿಡಿ ಕುರಿತ ದೂರು ವಾಪಸ್ ನಿರ್ಧಾರ ತೆಗೆದುಕೊಂಡಿದ್ದಕ್ಕೆ, ಅವರಿಗೆ ಒತ್ತಡಗಳು ಏನಿದೆಯೋ ಗೊತ್ತಿಲ್ಲ. ಬೇರೆ ಏನಾದರೂ ತೊಂದರೆ ಆಗಿರಬಹುದು. ವಾಪಸ್ಸು ಪಡೆದಿದ್ದು ಈಗ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.

ದೇಶದಲ್ಲಿ ಪ್ರಾಮಾಣಿಕ ಸಾಮಾಜಿಕ ಹೋರಾಟಗಾರರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಎಲ್ಲರೂ ಅಣ್ಣಾ ಹಜಾರೆ, ರಾಜಶೇಖರ ಮುಲಾಲಿ ಆಗೋಕೆ ಸಾಧ್ಯವಿಲ್ಲ ಎಂದರು. ಒಂದೇ ದಿನ ಹಿರೋ ಆಗಿ ಅವತ್ತೇ ಸಂಜೆ ವಿಲನ್ ಆದವರೂ ಇದ್ದಾರೆ ಎಂದರು.

Leave a Reply

Your email address will not be published. Required fields are marked *

You May Also Like

ಫೀಸ್ ಅವಾಂತರ – ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ ಭೇಟಿ ಮಾಡಿದ ಶಿಕ್ಷಣ ಸಚಿವ!

ಬೆಂಗಳೂರು : ಶಾಲಾ ಶುಲ್ಕಕ್ಕೆ ಕಿರುಕುಳ ನೀಡಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿಯ ಮನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಸ್ವಯಂ ನಿವೃತ್ತಿಗೆ ಆದೇಶ

ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ದೈಹಿಕವಾಗಿ ಅಸಮರ್ಥಗೊಂಡ ನಿಗಮದ ಅಧಿಕಾರಿಗಳು/ನೌಕರರಿಗೆ ಅನ್ವಯವಾಗುವಂತೆ ಆಕರ್ಶಣೀಯ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಸರ್ಕಾರ ಗಂಭೀರ ನಿರ್ಧಾರ ತೆಗೆದುಕೊಳ್ಳದಿದ್ರೆ ಜನ ಆಸ್ಪತ್ರೆಗಳಲ್ಲಿ ಸಾವೀಗೀಡಾಗಬೇಕಾದೀತು : ಶಾಸಕ ಎಚ್.ಕೆ.ಪಾಟೀಲ್

ರಾಜ್ಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ನ ಅಭಾವಿದೆ. ಆಕ್ಸಿಜನ್ ಕುರಿತಂತೆ ಗಂಭೀರವಾದ, ದೃಢವಾದ ತಕ್ಷಣದ ಹೆಜ್ಜೆಗಳನ್ನಿಡದೇ ಹೋದರೆ ಜನ ಆಸ್ಪತ್ರೆಗಳಲ್ಲಿ ಬಾರೀ ಸಂಖ್ಯೆಯಲ್ಲಿ ಸಾವೀಗೀಡಾಗಬೇಕಾದ ಪ್ರಸಂಗ ಬಂದೀತು ಎಂದು ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಕೊರೊನಾ ಕಾಟದ‌ಲ್ಲಿ ಸದ್ದಿಲ್ಲದೇ ಏರಿಕೆಯಾಗುತ್ತಿದೆ ವಿದ್ಯುತ್ ಬಿಲ್..?

ಈಗಾಗಲೇ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ವಿದ್ಯುತ್ ಇಲಾಖೆ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.