ಈ ಅವಳಿ-ಜವಳಿ ನೋಡೊಕ್ಕಂತೂ ಡಿಟ್ಟೋ. ಅವರಿಬ್ಬರಿಗೂ ಸಿಕ್ಕ ಅಂಕಗಳು ಕೂಡ ಡಿಟ್ಟೋ. ಅವರ ಹೆಸರು ಮಾತ್ರ ಬೇರೆ ಬೇರೆಯಷ್ಟೆ!

ನೋಯ್ಡಾ: ನೋಡಲು ಒಂದೇ ತರಹ, ಝೆರಾಕ್ಸ್ ಕಾಪಿ ಅಂತಾರಲ್ಲ ಹಂಗೇ. ನಗು, ಕಣ್ಣೋಟ, ಮನಸು, ಮನಸಿನ ಸೊಗಸು, ಮನಸಿನ ಮುನಿಸು…ಎಲ್ಲವೂ ಒಂದೇ ಅಂದರೆ ಒಂದೇ. ಇವರಿಬ್ಬರ ಕನಸೂ ಒಂದೇ, ಇಂಜಿನಿಯರಿಂಗ್ ಓದುವುದು.

ಇವರು ಮಾನಸಿ ಮತ್ತು ಮಾನ್ಯಾ ಎಂಬ ಅವಳಿ-ಜವಳಿ. ಈಗ ಪ್ರಕಟವಾಗಿರುವ ಸಿಬಿಎಸ್ಸಿ ಪರೀಕ್ಷೆಯಲ್ಲಿ ಇಬ್ಬರೂ ಅಷ್ಟೇ ಪರ್ಸೆಂಟೇಜ್ ಮಾಡಿದ್ದಾರೆ. ಅದಿರ್ಲಿ, ಎಲ್ಲ ವಿಷಯದಲ್ಲೂ ಇಬ್ಬರಿಗೂ ಸೇಮ್ ಮಾರ್ಕ್ಸ್!

‘ನಮ್ಮಿಬ್ಬರ ಹೆಸರು ಬೇರೆ ಎನ್ನುವುದು ಬಿಟ್ಟರೆ, ನಾವಿಬ್ಬರೂ ಒಂದೇ’ ಎನ್ನುತ್ತಾಳೆ ಮಾನಸಿ. ‘ಎರಡು ವರ್ಷದ ಹಿಂದೆ ಅವಳಿ-ಜವಳಿಗೆ ಒಂದೇ ಅಂಕ ಬಂದಿದ್ದು ಓದಿದ್ದೆ. ಈಗ ನಮಗೇ ಅನುಭವವಾಗಿದೆ’ ಎನ್ನುತ್ತಾ:ಳೆ ಮಾನ್ಯಾ.

Leave a Reply

Your email address will not be published. Required fields are marked *

You May Also Like

ಸರಕಾರ ಮಂಜಪ್ಪ ಹಡೇ೯ಕರ ಉತ್ಸವ ಆಚರಿಸಲಿ- ಶಂಕರ ಜಲ್ಲಿ

ಆಲಮಟ್ಟಿ : ಅನ್ನದಾಸೋಹ, ಖಾದಿಧಾರಿ, ಪತ್ರಕರ್ತ, ಸಂಪಾದಕರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ವಿಶೇಷ ಕೊಡುಗೆ ನೀಡಿದ ಅನರ್ಘ್ಯ…

ಖಾಸಗಿ ಬಸ್ ಪಲ್ಟಿ 5 ಜನ ಸಾವು 25 ಜನರಿಗೆ ಗಂಭೀರ ಗಾಯ

ತುಮಕೂರು: ಇಂದು ಬೆಳ್ಳಂಬೆಳಿಗ್ಗೆ ಬಾರಿ ದುರಂತವೋಂದು ನಡೆದು ಹೋಗಿದೆ. ಹೌದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ…

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ: ಸಚಿವ ಸುರೇಶ ಕುಮಾರ್

ನಿರೀಕ್ಷೆಗಿಂತ ಮೊದಲೇ ಪಿಯುಸಿ ದ್ವಿತೀಯ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ನಾಳೆ ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ ಕುಮಾರ್ ಫೇಸ್ಬುಕ್ ಮೂಲಕ ತಿಳಿಸಿದ್ದಾರೆ.

ಆರೋಗ್ಯಕರ ಜೀವನಕ್ಕೆ ಯೋಗ ಅಗತ್ಯ:ಡಾ:ರಾಕೇಶ್

ಉತ್ತರಪ್ರಭ ಸುದ್ದಿ ನರೆಗಲ್ಲ:ಆರೋಗ್ಯಕರ ಜೀವನಕ್ಕೆ ಯೋಗ ಅಗತ್ಯ ಹಾಗೂ ದೈಹಿಕವಾಗಿ ಮಾನಸಿಕವಾಗಿ ಮನುಷ್ಯ ಯೋಗವನ್ನು ಪ್ರತಿದಿನ…