ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 58ನೇ ಹುಟ್ಟು ಹಬ್ಬದ ಅಂಗವಾಗಿ ಭಜರಂಗಿ 2 ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಸದ್ಯ ಟೀಸರ್ ಬಗ್ಗೆ ಅಭಿಮಾನಿಗಳು ಫುಲ್ ಖುಷಿ ಪಡುತ್ತಿದ್ದಾರೆ.

ಭಜರಂಗಿ ಸಿನೆಮಾ ಹಿಟ್ ಆದಾಗ ನಾವು ಅದರ ಮುಂದುವರಿದ ಭಾಗ ಸಿನೆಮಾ ಮಾಡಲು ನಿರ್ಧರಿಸಿ ತಯಾರಿಸಿದೇವು. ಇದು ಈ ಮಟ್ಟದಲ್ಲಿ ವೈರಲ್ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನನ್ನ ಹುಟ್ಟುಹಬ್ಬಕ್ಕೆ ಸಿಕ್ಕಿರುವ ಬಹುದೊಡ್ಡ ಕೊಡುಗೆಯಿದು. ಬೇರೆ ಭಾಷೆಗಳ ಚಿತ್ರೋದ್ಯಮಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರಕ್ಕೆ ಸಿಕ್ಕಿದ ಪ್ರೋತ್ಸಾಹಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದು ಶಿವಣ್ಣ ಹೇಳಿದ್ದಾರೆ.

ಎ ಹರ್ಷ ನಿರ್ದೇಶನದ ಚಿತ್ರದಲ್ಲಿ ಭಾವನಾ, ಶೃತಿ, ಲೋಕಿ, ಚೆಲುವರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಕಳೆದ ಭಾನುವಾರ ಬಿಡುಗಡೆಯಾದ ಚಿತ್ರದ ಟೀಸರ್ ಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ 2 ನಿಮಿಷಕ್ಕಿಂತ ಕಡಿಮೆ ಅವಧಿಯ ಟೀಸರ್ ನಲ್ಲಿ ಡ್ರಾಮಾ, ಆಕ್ಷನ್ ಗಳಿದೆ. ಶ್ಲೋಕದಿಂದ ಆರಂಭವಾಗಿ ಚಿತ್ರದ ಎಲ್ಲಾ ಪಾತ್ರಗಳ ಬಗ್ಗೆ ತುಣುಕು ನೀಡುತ್ತದೆ.

Leave a Reply

Your email address will not be published. Required fields are marked *

You May Also Like

ಬಹುಭಾಷೆ ಸಿನಿಮಾದಲ್ಲಿ ಅನ್ಯಗ್ರಹ ಜೀವಿಯ ಪಾತ್ರದಲ್ಲಿ ಸಂದೇಶ್!

ಚಿತ್ರರಂಗದ ಕನಸು ಹೊತ್ತ ಯುವ ನಿರ್ದೇಶಕ ಸಂದೇಶ್ ಇದೀಗ ತನ್ನ ಕನಸಿನ ಬಹುಭಾಷಾ ಸಿನಿಮಾದ ತಯಾರಿಯಲ್ಲಿದ್ದಾರೆ.

ನಟಿ ರಾಧಿಕಾ ಕುಮಾರಸ್ವಾಮಿ ಎಲ್ಲೂ ಓಡಿ ಹೋಗಿಲ್ವಂತೆ!

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಯುವರಾಜ್ ಖಾತೆಯಿಂದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ…

ಹುಚ್ಚ ವೆಂಕಟ್ ಗೆ ಸಹಾಯ ಹಸ್ತ ಚಾಚಿದ ಕಿಚ್ಚ ಸುದೀಪ್..!

ಬೆಂಗಳೂರು: ಹುಚ್ಚ ವೆಂಕಟ್ ಮಾನಸಿಕ ಸಮತೋಲನ ಕಳೆದುಕೊಂಡ ಕಾರಣ ರಸ್ತೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಓಡಾಡುತ್ತಿದ್ದಾರೆ.…

ನಟ ಸುಶಾಂತ್ ಪ್ರಕರಣದ ತನಿಖೆ ಕೊನೆಗೊಳಿಸಲು ನಿರ್ಧರಿಸಿದ ಸಿಬಿಐ!

ಮುಂಬಯಿ : ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಗೆ ಅಂತ್ಯ ಹಾಡಲು ಸಿಬಿಐ ನಿರ್ಧರಿಸಿದೆ.