ವಿಶೇಷ ವರದಿ: ಗುಲಾಬಚಂದ ಆರ್. ಜಾಧವ
ಆಲಮಟ್ಟಿ :
ಪುಟ್ಟ ಪುಟ್ಟ ಪುಟಾಣಿ ಮಕ್ಕಳು ಫೂಲ್ ಜೋಶ್ ನಲ್ಲಿದ್ದರು. ಹಾಡುಗಳ ಸಂಗೀತ ರಾಗಕ್ಕೆ ತಕ್ಕಂತೆ ಬಿಂದಾಸ್ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿ ನಲಿದರು.ಅವರೆಲ್ಲ ಮೈಚಳಿ ಬಿಟ್ಟು ನೃತ್ಯ ಪ್ರದಶಿ೯ಸಿದರೆ ಇನ್ನೂ ಹಲ ಚಿಣ್ಣರು ರಾಷ್ಟ್ರ ನಾಯಕರ ವೇಷಭೂಷಣದ ರೂಪಕದ ಮೊಗದಲ್ಲಿ ಪ್ರತಿಬಿಂಬಿಸಿದರು.ಇನ್ನಷ್ಟು ಮೊಗ್ಗಿನ ಪುಟ್ಟ ಮಕ್ಕಳು ಫ್ಯಾನ್ಸಿ ಉಡುಗೆ ತೋಡುಗೆಯಲ್ಲಿ ಸ್ಟೇಪ್ಸ್ ಹಾಕಿ ರಂಜಿಸಿದರು. ಈ ಚೋಟುದ್ದ ಪೋರ ಪೋರಿಗಳ ಪ್ರಫಾರ್ಮನ್ಸ್ ಗೆ ಕಲಾಪೋಷಕ ರ ಮನಗಳೆಲ್ಲ ಫೂಲ್ ಫಿದಾ ಅಗಿ ಸಾಂಸ್ಕೃತಿಕ ರಸದೌತಣ ಸವಿದವು. ಸವಿಗಾನ ಸವಿಯಾನ ರಂಜನೀಯ ಲೋಕದಲ್ಲಿ ತೇಲಿದರು..!


ಇಲ್ಲಿನ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ 2021-22ನೇ ಸಾಲಿನ ವಾಷಿ೯ಕ ಸ್ನೇಹ ಸಮ್ಮೇಳನ, ಕರುನಾಡು ಗಾಂಧಿ ಉತ್ಸವ 2022 ಅಂಗವಾಗಿ ಮಂಗಳವಾರ ಮುಸ್ಸಂಜೆ ಶಾಲಾವರಣದನಲ್ಲಿನ ಲಿಂ,ತೋಂಟದ ಡಾ.ಸಿದ್ದಲಿಂಗ ಶ್ರೀಗಳ ಸಭಾ ವೇದಿಕೆಯಲ್ಲಿ ಪುಟಾಣಿ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಡು ಬಂದ ಕಲರ್ ಫೂಲ್ ದೃಶ್ಯಗಳಿವು.


ಶಾಲೆಯ ಎಲ್ಲ ಗುರುಮಾತೆಯರ ಶ್ರಮ, ಆಸಕ್ತಿ,ಅಚ್ಚುಕಟ್ಟಾದ ಸಂಯೋಜನೆಯಿಂದ ಮಂಗಳವಾರ ಸಂಜೆ ಶಾಲಾವರಣ ಕ್ಯಾಂಪಸ್ ಕಲರಮಯ ರಂಗು ರಂಗಿನ ಸೆಳೆತಕ್ಕೆ ಒಳಗಾಗಿತ್ತು. ಅಲ್ಲಿ ಸಾಂಸ್ಕೃತಿಕ ಸೊಬಗು ಅನಾವರಣವಾಗಿತ್ತು !


ವರ್ಣರಂಜಿತ ವೇದಿಕೆಯಲ್ಲಿ ಪುಟ್ಟ ಪುಟಾಣಿಗಳ ಜಬರ್ ದಸ್ತ್ ಕುಣಿತ, ಫ್ಯಾಶನ್ ಶೋಗಳ ಝೇಂಕಾರಕ್ಕೆ ಜನತೆ ಶಿಳ್ಳೆ ಚಪ್ಪಾಳೆ,ಕೇಕೆ ಹಾಕಿ ಸಂಭ್ರಮಿಸಿದರು. ಚಿಕ್ಕ ಮಕ್ಕಳ ಬಗೆಬಗೆಯ ಕಲಾ ಪ್ರದರ್ಶನಗಳು ನೋಡುಗರ ಕಣ್ಮನ ಸೆಳೆದವು. ಕಲರ್ ಭರಿತ ರಂಗು ಸಾಂಸ್ಕೃತಿಕ ಸೊಬಗನ್ನು ಹೆಚ್ಚಿಸಿ ಮನಸೊರೆಗೊಳಿಸಿತು.
ಕಣ್ಣು ಮಿಟುಕಿಸದೇ ಎಕಚಿತ್ತದಿ ಸಭಿಕರ ಕಂಗಳುಗಳೆಲ್ಲ ವೇದಿಕೆ ಮೇಲೆ ನೆಟ್ಟಿದ್ದವು.ಆ ಮಟ್ಟಿಗೆ ಆಕಷಿ೯ತ ಪುಳಕೀತವಾಗಿದ್ದವು. ಪುಟಾಣಿಗಳು ತಮ್ಮ ಪ್ರತಿಭಾ ಕೌಶಲ್ಯಗಳ ಸ್ಪೆಷಲ್ ಕಿಕ್ ಮೂಲಕ ಜನರನ್ನು ವಶೀಕರಿಸಿದರು.
ಬಿರು ಬಿಸಿಲಿಗೆ ಒಳಗಾಗಿದ್ದ ಹಾಟ್ ಮನಸ್ಸುಗಳು ಮಕ್ಕಳು ತೋರ್ಪಡಿಸಿದ ಅತ್ಯುತ್ತಮ ಅಭಿನಯಗಳಿಗೆ ಕೂಲ್ ಅಗಿದ್ದವು. ಕ್ಲಾಪ್ಸ್, ಶಿಳ್ಳೆ,ಚಪ್ಪಾಳೆ ತಟ್ಟಿ ಪ್ರೋತ್ಸಾಹದ ಸಿಂಚನ ಸುರಿಮಳೆ ಗೈದರು.


ಮಧುರ ಸಂಗೀತವುಳ್ಳ ,ಅರ್ಥಪೂರ್ಣ ಸಾಹಿತ್ಯ, ಸೂಪರ್ ಡೂಪರ್ ಎಲ್ಲ ಸ್ತರದ ಜನಾಕಷಿ೯ತ ಹಾಡುಗಳಿಗೆ ಚಿಣ್ಣರು ಸಖತ್ ಹೆಜ್ಜೆ ಹಾಕಿ ಸಂಭ್ರಮದ ಅಲೆ ಸೃಜನಶೀಲವಾಗಿ ಸೃಷ್ಟಿಸಿದರು. ಡ್ಯಾನ್ಸ್ ಧಮಾಕಾ ಕಣ್ಮನ ತಣಿಸಿದವು. ಈ ಸಾಂಸ್ಕೃತಿಕ ರಸಸ್ವಾದದಲ್ಲಿ ಜನ ತನ್ಮಯರಾಗಿ ತಲೆದೂಗಿದರು.
ಮಹಾಪ್ರಾಣ ದೀಪಂ ಶಿವನ ಹಾಡಿಗೆ ಕೀತಿ೯,ಸಿಂಧು, ಶೃತಿ,ವಿಜಯಲಕ್ಷ್ಮಿ,ಅಪೂರ್ವ ಪ್ರದಶಿ೯ಸಿದ ನೃತ್ಯ ಭಕ್ತಿ ಲೋಕಕ್ಕೆ ಕರೆದೊಯ್ದಿತ್ತು. ಬಾನಿನಲ್ಲಿ ಮೂಡಿಬಂದ ಚಂದ ಮಾಮ ಗೀತೆಗೆ ಅನುಷ್ಕಾ, ಸಮನ್ವಿ, ರಶ್ಮಿಕಾ, ಶ್ರಾವಣ,ಪ್ರಜ್ಞಾ, ಶ್ರೀರಕ್ಷಾ, ವೈಷ್ಣವಿ ರಾಠೋಡ,ಅಭಯ,ಶಿಷ್ಟಾನ, ಅಕ್ಷತ,ತಹೀರ ಹೆಜ್ಜೆ ಹಾಕಿ ಗಮನ ಸೆಳೆದರು.


ಮೂಡಲ ಕುಣಿಗಲ್ ಕೆರೆ ಹಾಡಿಗೆ ಪವನ ರಚನಾ, ಹಷಾ೯ ಸೃಷ್ಟಿ, ಸೃುಜನ್ ಲಕ್ಷ್ಮೀ, ಉಬಿದ್ ಸನಾ, ಸೋಮು ಸಂಜಾ,ಶಶಾಂಕ ಅಕ್ಷತಾ,ಅಮಿತ ರಶಿಯಾ ಅವರುಗಳ ನೃತ್ಯ ಸಂಚಲನ ಸೃಷ್ಟಿಸಿತು.
ಅಪ್ಪಗೆ ನಮನ ಸಲ್ಲಿಸಿದ ಹಾಡಂತೂ ಭಾವನಾತ್ಮಕ ಮಿಡಿತ ಹೆಚ್ಚಿಸಿತು. ಈ ಗೀತೆಗೆ ಬಸವರಾಜ ಅಕ್ಷಯ, ಹಷಾ೯ಗಾಂಧಿ,ಉಪೇಂದ್ರ ಸೋಮು,ಸೃಜನ ರಿಜ್ವಾನ್,ಸ್ವರೂಪ ಶಿವಪ್ರಸಾದ ಅವರುಗಳ ನಟನಾಭಿನದ ಹೆಜ್ಜೆ ಸಪ್ಪಳ ಮನೋಜ್ಞವಾಗಿ ಮೂಡಿಬಂತು.


ಮಲೆನಾಡು ಅಡಿಕೆ ಮೈಸೂರು ವಿಳ್ಳೆದಲೆ ಗೀತರಾಗಕ್ಕೆ ಸಂಜನಾ ಕಾತಿ೯ಕ,ಲಕ್ಷ್ಮೀ ಸಮರ್ಥ,ಉಜ್ಜಮಾ ಸುಶಿಯಾನ್, ಸ್ನೇಹಾ ಅಮಿತ, ಅಪ್ಸನಾ ಶಶಾಂಕ, ಸರಸ್ವತಿ ಯಲಗುರೇಶ ಕುಣಿದು ಜನಮನ ಗೆದ್ದರು. ಹುಟ್ಚಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಆಮಿ೯ ಡ್ಯಾನ್ಸ್, ಜನಪದ ಸೊಗಡು ಸೇರಿದಂತೆ ಸುಮಾರು 75ಕ್ಕೂ ಹೆಚ್ಚು ವಿವಿಧ ಬಗೆಗಳ ಸಂಗೀತ ಸುಧೆಗಳ ಝೋಂಕಾರ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳಿಂದ ತಡರಾತ್ರಿವರೆಗೆ ಮೊಳಗಿದವು.
ಫ್ಯಾನ್ಸಿ ಡ್ರೈಸಿನ ಉಡುಗೆ ತೋಡುಗೆಯಲ್ಲಿ ರಾಷ್ಟ್ರದ ಮಹಾನ ಶರಣ,ಶರಣಿಯರ ವೇಷಭೂಷಣದ ರೂಪಕದಲ್ಲಿ ಪುಟಾಣಿ ಮಕ್ಕಳು ನೈಜಭರಿತವಾಗಿ ಮಿನುಗಿದರು.


ಅಣ್ಣ ಬಸವಣ್ಣನ ರೂಪದಲ್ಲಿ ಅಖಿಲ ಮಡಿವಾಳರ, ಅಂಬೇಡ್ಕರ್ ಭಾವದಲ್ಲಿ ಪ್ರತೀಷ್ಟ ಹೋಳಿ, ಸುಭಾಷ್ ಚಂದ್ರ ಬೋಸ್ ವೇಷದಲ್ಲಿ ಸಮರ್ಥ ಪತ್ತಾರ, ಸಂಗೋಳಿ ರಾಯಣ್ಣನಾಗಿ ಶ್ರೇಯಸ್ಸ ಹಾವರಗಿ, ಚಂದ್ರಶೇಖರ್ ಆಜಾದ್ ರಾಗಿ ಪ್ರತಾಪ ದಡ್ಡಣ್ಣವರ, ಶಿವನ ರೂಪದಲ್ಲಿ ಸಮರ್ಥ ಕಟ್ಟಿಮನಿ, ಶಿವಾಜಿ ಮಹಾರಾಜರಾಗಿ ಅಭಯ ಶಿರಸಾಗರ, ಕಿತ್ತೂರು ರಾಣಿ ಚೆನ್ನಮ್ಮಳಾಗಿ ಆರೋಹಿ ಎ.ಗೋಖಲೆ, ಓನಕೆ ಓಬವ್ವಳಾಗಿ ಸ್ನೇಹಾ ಪತ್ತಾರ, ಝಾನ್ಸಿಬಾಯಿ ಲಕ್ಷ್ಮೀರಾಣಿಯಾಗಿ ಪ್ರಜ್ಞಾ ಉಕ್ಕಲಿ, ಅಕ್ಕಮಹಾದೇವಿಯ ರೂಪಕದಲ್ಲಿ ಶ್ರೀರಕ್ಷಾ ಬೂದಿಹಾಳ, ಇಂದಿರಾಗಾಂಧಿ ಯಾಗಿ ಸಾನವ ಗುಳೇದಗುಡ್ಡ, ಸಾಲ ಮರದ ತಿಮ್ಮಕ್ಕ ವೇಷದಲ್ಲಿ ವೈಷ್ಣವಿ ಗುಳೇದಗುಡ್ಡ, ಕೋರವಂಜಿಯ ಪಾತ್ರದಲ್ಲಿ ಅನಂದ ಶಫಾ ತಾಳಿಕೋಟ, ರಾಷ್ಟ್ರೀಯ ಧ್ವಜದ ಪಾವಿತ್ರತೆ ಮಿನುಗಿಸಿದ ಮೈತ್ರಿ ಹತ್ತರಕಿಹಾಳ, ಕರೋನಾ ವೈರಸ್ ಪಾತ್ರದಲ್ಲಿ ಹಷಾ೯ ದುಲಾರಿ, ರಾಧಾ ಕೃಷ್ಣಾರಾಗಿ ಇಂದು ಅಂಗಡಿ,ರಿಶಿಕ್ ಮಿಂಚಿದರು. ಪುಟ್ಟ ಮಕ್ಕಳು ಈ ವೇಷಭೂಷಣದಲ್ಲಿ ಮಹಾನ ನಾಯಕರ ರೂಪಕದಲ್ಲಿ ಹೊಳೆದು ಜೀವಕಳೆ ತಂದರು.


ಕಳೆದೆರಡು ವರ್ಷದಿಂದ ಕೋವಿಡ್ ನರ್ತನಕ್ಕೆ ಎಲ್ಲವೂ ನಿಶಬ್ದವಾಗಿದ್ದ ಶಾಲಾ ಶೈಕ್ಷಣಿಕ ವಲಯದ ಚಟುವಟಿಕೆಗಳು ಮತ್ತೆ ಇದೀಗ ಚೇತರಿಕೆ ಪಡೆಯುತ್ತಲಿರುವುದು ಸಂತಸ ಮೂಡಿಸಿವೆ.


ಇಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಕಲಿಕೆಯೊಂದಿಗೆ ಸಾಂಸ್ಕೃತಿಕ ರಂಗದಲ್ಲಿ ಸನ್ನದುಗೊಳಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಶಾಲೆಯ ಮುಖ್ಯ ಗುರುಮಾತೆ ತನುಜಾ ಪೂಜಾರಿ, ಗುರುಮಾತೆಯರಾದ ಕವಿತಾ ಮರಡಿ,ಸಿದ್ದಮ್ಮ ಅಂಗಡಿ, ಸರೋಜಾ ಕಬ್ಬೂರ, ಶೈನಾಬಾನು ಬಾಗಲಕೋಟ, ಕಾಂಚನಾ ಕುಂದರಗಿ ಅವರುಗಳ ಅಚ್ಚುಕಟ್ಟಾಗಿ ನಿರ್ವಹಿಸಿದ ಸಮಯೋಚಿತ ಪರಿಶ್ರಮದ ಫಲದಿಂದ ಹಾಗು ಎಸ್.ವ್ಹಿ.ವ್ಹಿ.ಅಸೋಸಿಯೇಷನ್ ದ ಅಂಗ ಸಂಸ್ಥೆಗಳ ಗುರುಬಳಗ ತೋರಿದ ಸಹಕಾರದಿಂದ ಕಾರ್ಯಕ್ರಮ ಯಶಸ್ವು ಮುಕುಟ ಧರಿಸಿ ಸಾಂಸ್ಕೃತಿಕ ಮನಗಳಲ್ಲಿ ಸ್ಮರಣೀಯವಾಗಿಸಿದ್ದು ವಿಶೇಷ.

ಜಾಹಿರಾತು
Leave a Reply

Your email address will not be published. Required fields are marked *

You May Also Like

ಶಿಘ್ರ ಆರಂಭವಾಗಲಿವೆ ದೇವಸ್ಥಾನಗಳು?

ಮುಂದಿನ ವಾರದಿಂದ ಭಕ್ತರಿಗೆ ದೇವರು ದರ್ಶನ ಕರುಣಿಸುವ ಸಾಧ್ಯತೆ ಇದೆ. ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗುತ್ತಿದ್ದು ತೀರ್ಥ, ಪ್ರಸಾದಗಳಿಗೆ ಬ್ರೇಕ್ ಬೀಳುವ ಸಾದ್ಯತೆ ಇದೆ.

ಗರ್ಭಿಣಿ ಪತ್ನಿ, ಮಗುವನ್ನು ಬಂಡಿಯಲ್ಲಿ ಕೂರಿಸಿಕೊಂಡು 700 ಕಿ.ಮೀ ನಡೆದ ಪತಿ!

ಇಲ್ಲೊಬ್ಬ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಯನ್ನು ಗಾಡಿ ಬಂಡಿಯಲ್ಲಿ ಕೂರಿಸಿಕೊಂಡು ಸುಮಾರು 700 ಕಿ.ಮೀ ಎಳೆದುಕೊಂಡು ಬಂದಿರುವ ಘಟನೆ ನಡೆದಿದೆ.

ಹೊಸ ಶಿಕ್ಷಣ ನೀತಿಯಲ್ಲಿ ಅಂತಃಸತ್ವ ಅಡಗಿದೆ-ಸಿಂಧನಕೇರಾ

ಗುಲಾಬಚಂದ ಜಾಧವಆಲಮಟ್ಟಿ :(ವಿಜಯಪುರ ಜಿಲ್ಲೆ) ಸಂಪನ್ಮೂಲ ಭರಿತ ನಮ್ಮ ದೇಶದಲ್ಲಿ ಪರಿಸರ ಸಂರಕ್ಷಣೆ ಅಷ್ಟೊಂದು ಪರಿಣಾಕಾರಿಯಾಗಿ…

ವಾಷಿಂಗ್ಟನ್ ನಲ್ಲಿ ಗಾಂಧಿ ಪ್ರತಿಮೆ ಧ್ವಂಸ: ಕ್ಷಮೆ ಕೋರಿದ ಅಮೆರಿಕ

ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮುಂದಿರುವ ಮಹಾತ್ಮ ಗಾಂಧಿ ಮೂರ್ತಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.