ಸಚಿವ ಸಿ.ಟಿ.ರವಿ ಎರಡು ದಿನದಿಂದ ತಮ್ಮ ಕೋರೊನಾ ಪರೀಕ್ಷೆಯ ಕುರಿತು ಟ್ವೀಟ್ ಮಾಡಿದ್ದೇ ಮಾಡಿದ್ದು. ಅವರ ಅನುಭವ ನೋಡಿದರೆ ಟೆಸ್ಟ ಫಲಿತಾಂಶ ‘ಪಾಸಿಟಿವ್, ನೆಗೆಟಿವ್’ ಎಂಬ ಎರಡು ಚೀಟಿಯಲ್ಲಿ ಒಂದನ್ನು ಎತ್ತಿಕೊಳ್ಳುವ ಆಟದಂತಿದೆ. ಇದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯೂ ಆಗಿದೆ.

ಬೆಂಗಳೂರು: ಪುಣ್ಯಕ್ಕೆ ನಾಲ್ಕನೆ ಟೆಸ್ಟ ಮೊರೆ ಹೋಗಿಲ್ಲ ಸಚಿವ ಸಿ.ಟಿ ರವಿಯವರು. ಮೂರಕ್ಕೇ ಸಾಕು ಎಂದಿದ್ದಾರೆ.

ಮೊದಲ ಟೆಸ್ಟ ಪಾಸಿಟಿವ್ ಬಂತಂತೆ. ತಮ್ಮ ಸರ್ಕಾರ ನಡೆಸುತ್ತಿರುವ ಟೆಸ್ಟಿಂಗ್ ಮೇಲೇಯೇ ವಿಶ್ವಾಸವಿಲ್ಲದ ಸಚಿವರು, ಮತ್ತೊಮ್ಮೆ ಗಂಟಲು ದ್ರವವನ್ನು ಹೆಕ್ಕಿಸಿಕೊಂಡು ಎರಡನೇ ಟೆಸ್ಟ್ ಮಾಡಿಸಿಕೊಂಡರಂತೆ. ಅದು ನೆಗೆಟಿವ್ ಬಂತಂತೆ. ಅಷ್ಟೊತ್ತಿಗೆ ಸಚಿವರಿಗೆ ಇದು ಆಟದ ತರಹ ಕಂಡಿತೇನೋ? ಮೂರನೇ ಟೆಸ್ಟ್ ಮಾಡಿಸಿಕೊಂಡರು. ಫಲಿತಾಂಶಕ್ಕೆ ಕಾಯುತ್ತ ‘ಥರ್ಢ್ ಅಂಪೈರ್ ರಿಸಲ್ಟ ಗೆ ಕಾಯುತ್ತಿರುವೆ’ ಎಂದು ಹುಡುಗಾಟಿಕೆಯ ಮಾತಿನಲ್ಲಿ ಟ್ವೀಟ್ ಮಾಡಿದರು.

ಮೂರನೆ ಫಲಿತಾಂಶ ಇವತ್ತು ಪಾಸಿಟಿವ್ ಬಂದಾಗ. ‘ಥರ್ಡ್ ಅಂಪೈರ್ ಫಲಿತಾಂಶ ಪಾಸಿಟಿವ್ ಬಂದಿದೆ. ನಾನು ಆರೋಗ್ಯವಾಗಿದ್ದೇನೆ’ ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

ಸಿ.ಟಿ. ರವಿಯವರ ಒಟ್ಟೂ ಈ ಟೆಸ್ಟಿಂಗ್ ಪ್ರಹಸನ ರಾಜ್ಯದಲ್ಲಿ ಸರ್ಕಾರ ಟೆಸ್ಟಿಂಗ್ ಬಗ್ಗೆ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸಚಿವರಿಗೆ ಮಾತ್ರ ‘ಬೆಸ್ಟ ಆಫ್ ಥ್ರೀ’ ಆಪ್ಷನ್ ಇದೆಯೋ, ಜನಸಾಮಾನ್ಯರಿಗೂ ಇದೆಯೋ ಎಂಬುದನ್ನು ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಸ್ಪಷ್ಟಪಡಿಸಲಿ.

ಒಟ್ಟಿನಲ್ಲಿ ಮೂರು ಟ್ವೀಟ್ ಗಳ ಮೂಲಕ ಟೆಸ್ಟಿಂಗ್ ಎಂಬುದು ಚೀಟಿ ಎತ್ತುವ ಆಟ ಎಂಬಂತೆ ಸಿ.ಟಿ. ರವಿ ಚಿತ್ರಿಸಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

You May Also Like

ಮೌನ್ ಮೋದಿ ಮಿಸ್ಸಿಂಗ್ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್

ದೆಹಲಿ: ಚೀನಾ, ನೇಪಾಳ ಗಡಿಯಲ್ಲಿ ಸಂಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ #MaunModiMissing ಟ್ರೆಂಡಿಂಗ್ ಆಗಿದೆ.…

ಕೊರೋನಾ ಸಂಕಷ್ಟ: ಜನರ ನೋವಿಗೆ ಧ್ವನಿಗುತ್ತಿರುವ ಶಿವಕುಮಾರಗೌಡ

ಈಗಾಗಲೇ ಒಂದುವರೆ ತಿಂಗಳ ಲಾಕ್ ಡೌನ್ ನಿಂದಾಗಿ ಬಹುತೇಕ ಬಡ ಹಾಗೂ ಮದ್ಯಮ ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿವೆ. ಇದರಿಂದಾಗಿ ಸಾಕಷ್ಟು ಜನ ತಮ್ಮದೇ ಆದ ರೀತಿಯಲ್ಲಿ ಜನ ಸೇವಾ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಮುಂಡರಗಿ ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್ ಜನರ ಸಂಕಷ್ಟಕ್ಕೆ ಧ್ವನಿಯಾಗಿದ್ದಾರೆ.

ಗದಗ ಜಿಲ್ಲೆಯಲ್ಲಿ ಬಾರ್ ಗಳ ಮುಂದೆ ಜನವೋ ಜನ

ಒಂದುವರೆ ತಿಂಗಳಿಂದ ಲಾಕ್ ಡೌನ್ ಹಿನ್ನೆಲೆ ಬಾರ್ ಗಳನ್ನು ಬಂದ್ ಮಾಡಲಾಗಿತ್ತು. ಇನ್ನೇನು ಸರ್ಕಾರ ಲಾಕ್ ಡೌನ್ ಸಡಿಲಗೊಳಿಸಿ ಕೆಲವು ನಿಯಮ ವಿಧಿಸಿ ಬಾರ್ ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದೆ ತಡ ಬಾರ್ ಗಳ ಮುಂದೆ ಜನವೋ ಜನ.

2 ಅಪರೂಪದ ಆಮೆ ಪತ್ತೆ: ಒಂದು ಹಳದಿ ಬಣ್ಣದ್ದು, ಇನ್ನೊಂದು ಮೃದು ಚಿಪ್ಪಿನದ್ದು!

ಕಪ್ಪು, ದಟ್ಟ ಕಂದು ಬಣ್ಣದ ಆಮೆಗಳನ್ನು ನೋಡಿದ್ದೇವೆ. ಆದರೆ ಒರಿಸ್ಸಾದಲ್ಲೊಂದು ಅಪರೂಪದ ಆಮೆ ಸಿಕ್ಕಿದೆ. ಅದರ ಬಣ್ಣ ಹಳದಿ. ಇಡೀ ದೇಹ, ಚಿಪ್ಪು ಎಲ್ಲವೂ ಸಂಪೂರ್ಣ ಹಳದಿ.