ಕಂಕಣ ಗ್ರಹಣಕ್ಕೂ ಮೊದಲು ಒಟ್ಟು ಸೋಂಕಿನ ಪ್ರಕರಣ 60 ಇದ್ದದ್ದು 23 ದಿನದಲ್ಲಿ 5 ಪಟ್ಟು ಹೆಚ್ಚಿದೆ, ಸಾವಿನ ಪ್ರಮಾಣದಲ್ಲೂ 5 ಪಟ್ಟು ಹೆಚ್ಚಳವಾಗಿದೆ.
ಗದಗ: ಜುಲೈ 13ರ ಸೋಮವಾರದಂದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 322 ತಲುಪಿದೆ. ಈ 322 ರಲ್ಲಿ ಕಳೆದ 23 ದಿನಗಳಲ್ಲಿ 262 ಹೊಸ ಪ್ರಕರಣಗಳು ದಾಖಲಾಗಿವೆ.

ಅಮಾವಾಸ್ಯೆ ಕಂಕಣ ಗ್ರಹಣದ ಹಿಂದಿನ ದಿನ (ಜೂನ್ 20) ಒಟ್ಟು ಸೋಂಕಿತರ ಸಂಖ್ಯೆ 60 ಇತ್ತು. ಕಂಕಣ ಗ್ರಹಣ ದಿನ ಜೂನ್ 21ರಂದು ಒಮ್ಮೆಲೇ 18 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನ ಪಯಣ ವೇಗ ಪಡೆದುಕೊಂಡಿತು. ಅಂದಿನಿಂದ ಜುಲೈ13ರ ಸೋಮವಾರದ ಅವಧಿಯಲ್ಲಿ 23 ದಿನದಲ್ಲಿ 262 ಹೊಸ ಪ್ರಕರಣ ದಾಖಲಾಗಿ ಒಟ್ಟು ಸೋಂಕಿತರ ಸಂಖ್ಯೆ 322 ಕ್ಕೆ ಏರಿದೆ.
ಒಟ್ಟು ಸೋಂಕಿತರು | ಸಕ್ರಿಯ ಕೇಸ್ | ಗುಣಮುಖರ ಸಂಖ್ಯೆ | ಸಾವು | |
ಜೂನ್ 20 | 60 | 19 | 39 | 02 |
ಜುಲೈ 13 | 322 | 134 | 178 | 10 |
23 ದಿನದಲ್ಲಿ ಹೆಚ್ಚಳ | 262 | 115 | 139 | 08 |
23 ದಿನದಲ್ಲಿ ಶೇ. ಹೆಚ್ಚಳ | 81,3 % | 85.82 % | 78 % | 80 % |
ಜೂನ್ 20ರಂದು 19 ಇದ್ದ ಸಕ್ರಿಯ ಕೇಸುಗಳ ಸಂಖ್ಯೆ ಜುಲೈ 13 ಕ್ಕೆ 134ಕ್ಕೆ ತಲುಪಿದೆ. ಸಕ್ರಿಯ ಕೇಸುಗಳ ಸಂಖ್ಯೆಯಲ್ಲಿ 23 ದಿನಗಳಲ್ಲಿ 7 ಪಟ್ಟು ನೆಗೆತವಾಗಿದೆ. ಎರಡು ಇದ್ದ ಸಾವಿನ ಸಂಖ್ಯೆ ಸುಮಾರು 5 ಪಟ್ಟು ಹೆಚ್ಚಿ 10 ಕ್ಕೆ ತಲುಪಿದೆ.
ಶೇಕಡಾವಾರು ಲೆಕ್ಕದಲ್ಲಿ
ಈ 23 ದಿನಗಳಲ್ಲಿ, (ಜೂನ್ 20-ಜುಲೈ 13)
· ಒಟ್ಟು ಸೋಂಕಿತರ ಪೈಕಿ ಶೇ. 81.3 ಪ್ರಕರಣ ಈ 23 ದಿನದಲ್ಲಿ ದಾಖಲಾಗಿವೆ.
· ಒಟ್ಟು ಸಕ್ರಿಯ ಕೇಸುಗಳ ಪೈಕಿ ಶೇ. 85.82 ರಷ್ಟು ಈ 23 ದಿನದಲ್ಲಿ ದಾಖಲಾಗಿವೆ..
· ಒಟ್ಟು ಸಾವುಗಳ ಪೈಕಿ ಶೇ. 80 ರಷ್ಟು ಈ 23 ದಿನದಲ್ಲಿ ಸಂಭವಿಸಿವೆ.
· ಒಟ್ಟು ಗುಣಮುಖರ ಪೈಕಿ ಶೇ. 78 ಜನ ಈ 23 ದಿನದಲ್ಲಿ ಗುಣಮುಖರಾಗಿದ್ದಾರೆ