ಚಡ್ಡಿ ಗಿಡ್ ಆತಂತ, ತಾನ್ ಕೊಟ್ ಅಳತಿಗೆ ಚಡ್ಡಿ ಹೊಲದ ಕೊಡಲಿಲ್ಲಾ ಅಂತ, ಟೇಲರ್ ವಿರುದ್ಧ ಚಡ್ಡಿ ಹೊಲಿಸಿಕೊಂಡಾವ ಕಂಪ್ಲೆಂಟ್ ಕೊಟ್ಟಾನಂತ. ಅಂದ್ಹಂಗ ಈ ಚಡ್ಡಿ ಜಗಳ ಈಗ ಕೋರ್ಟ್ ಅಂಗಳಕ್ಕೂ ಬಂದೈತಿ ನೋಡ್ರಿ.

ಭೋಪಾಲ್: ಚಡ್ಯಾರಾ ಆಗಲಿ, ಪ್ಯಾಂಟರಾ ಆಗಲಿ, ಒಳ ಅಂಗ್ಯಾರ ಆಗಲಿ, ಮೇಲಂಗ್ಯಾರ ಆಗಲಿ, ಏನಾರ ಆಗಲಿ ನಾವು ಹ್ಯಾಂಗ್ ಅಳತಿ ಕೊಟ್ಟಿರತಿವಿ ಹಂಗ ಹೊಲದ್ ಕೊಡೊ ಕೆಲ್ಸಾ ಟೈಲರ್ದು. ಆದ್ರ ನಾನು ‘ಚಂದನ್ ಬಟ್ಟಿ ಕೊಟ್ಟೀನಿ. ಆದ್ರ ಟೇಲರ್ ಗಿಡ್ ಗಿಡ್ ಅಂಡರ್ ವೇರ್ ಹೊಲದಾನ. ಅರೆಸ್ಟು ಮಾಡಿ ಒಗಿರಿ ಅವನ್ನ ಅಂತ ಭೋಪಾಲಿನ್ಯಾಗ ಒಬ್ಬಾಂವ ಪೊಲೀಸರ ಠಾಣಾ ಕಟ್ಟಿ ಹತ್ಯಾನ.

ಈ ಪೊಲೀಸ್ರು ಚಡ್ಡಿ ಸಲುವಾಗಿ ಯಾಕ್ ಜಗಳಾಡ್ತಿರಿ ಬರ್ರಿಲ್ಲಿ ಅಂತ ಕರದು ಜಗಳ ಬಗಿ ಹರಿಸಿ ಕಳಿಸಿ ಬಿಟ್ಟಿದ್ರ ನಡಿತ್ತಿತ್ತೇನೋ? ಒಂದ್ ವ್ಯಾಳೆ ಪೊಲೀಸ್ರಿಗೂ ಈ ಚಡ್ಡಿ ಜಗಳ ತಲಿ ಚಿಟ್ ಹಿಡಿಸಿತ್ತೋ ಏನೋ? ಏನಾರಾ ಆಗ್ಲಿಪಾ ಚಡ್ಡಿ ಗಿಡ್ ಹೊಲದಾನೋ ಉದ್ ಹೊಲದಾನೋ ಈ ಜಗಳಾ ಕೋರ್ಟ್ ನ್ಯಾಗ ಬಗೀ ಹರಿಸ್ಕೋ ಹೋಗ್ರಿ ಅಂತ ಸಾಗ ಹಾಕ್ಯಾರ.

ಕೃಷ್ಣಕುಮಾರ್ ದುಬೆ ಅನ್ನಾಂವ ಟೈಲರ್ ಅಣ್ಣನ ಕಡೆ ಚಡ್ಡಿ ಹೊಲಿಸಿಕೊಂಡು ಅನ್ಯಾಯಕ್ಕ ಒಳಗಾದಾಂವ ನೋಡ್ರಿ.  ‘ಬಾಳಾ ಅಂದ್ರ ಬಾಳಾ ಗಿಡ್ ಹೊಲಿದಾನ್ರಿ ಅಂವಾ ನಾನರ ಸೆಕ್ಯುರಿಟಿ ಗಾರ್ಡ್ ಅದಿನಿ, 9 ಸಾವಿರ ರೂ. ಪಗಾರ ಬರುತ್ತಿತ್ತು. ಲಾಕ್ ಡೌನ್ ಆದ್ ಕೂಡ್ಲೆ ಇದ್ ಸಣ್ ಕೆಲ್ಸಾನೂ ಹೋತು. ಊರಿಗೆ ಹೋಗುವ ಮೊದ್ಲ ಒಂದೆರಡು ಪಟ್ಟಾಪಟ್ಟಿ ಚಡ್ಡಿ ಹೊಲಿಸಿಕೊಂಡು ಹೋಗೋಣ ಅಂತ, 2 ಮೀಟರ್ ಅರಬಿ ತಂದು, ‘ಎಷ್ಟ್ ಅಕ್ಕಾವು ಅಷ್ಟ್ ಚಡ್ಡಿ ಹೊಲಿ’ ಎಂದು ಟೇಲರ್ಗೆ ಕೊಟ್ರ, 190 ರೂಕ್ಕಾ ತುಗೊಂಡ್ ಚಡ್ಡಿ ಹೊಲ್ದ್ ಕೊಟ್ಟಾನ್ರಿ. ಆದರೆ ಅವು ತೀರಾ ಅಂದ್ರ ತೀರಾ ಗಿಡ್ ಆಗ್ಯಾವ್ರಿ ಅನ್ನೋದು ದುಬೆ ವಾದ.

ಈ ಬಗ್ಗೆ ಹೇಳಿಕೆ ನೀಡಿರುವ ಹಬೀಬ್ ಗಂಜ್ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ರಾಕೇಶ್ ಶ್ರೀವಾತ್ಸವ್, ಯಾಕೋ ಈ ಚಡ್ಡಿ ಕೇಸು ಕಾಂಪ್ಲಿಕೆಟೆಡ್ ಅನಿಸ್ತು. ಅದಕ್ಕ ಕೋರ್ಟಿಗೆ ಹೋಗೋಪ’ ಅಂತಾ ಹೇಳಿದೆವು ಅಂತ ತಿಳಿಸ್ಯಾರ.

ಇದಕ್ಕ ಟೈಲರ್, ಅಂವಾ ಕೊಟ್ ಬಟ್ಟಿನಾ ಕಡಿಮಿತ್ತು, ನಾನಾರ ಏನ್ ಮಾಡ್ಲಿ ಅಂತ ಹೇಳ್ಯಾನ. ಈ ಚಡ್ಡಿ ಗಿಡ್ಡ-ಉದ್ದ ಅಂತ ದುಬೆ ಮತ್ತ ಟೈಲರ್ ನಡುವ ಮಾತಿಗೆ ಮಾತು ಬೆಳೆದೈತಿ. ತಲಿ ಕೆಟ್ಟ ದುಬೆ ಸೀದಾ ಪೊಲೀಸ್ ಠಾಣಾಕ್ ಹೋಗಿ ಕಂಪ್ಲೇಂಟ್ ಕೊಟ್ಟಾನ.

ಈ ಚಡ್ಡಿ ರಗಳೆಗೆ ಸುಸ್ತಾದ ಟೇಲರ್, ‘ಯಪ್ಪಾ, ನಿನ್ ರೊಕ್ಕ ನಿಂಗ್ ವಾಪಸ್ ಕೊಡ್ತೀನಿ. ಕೋರ್ಟು-ಗೀರ್ಟು ಬ್ಯಾಡಪೋ ಶಿವನೇ’ ಅಂದಾನಂತ. ಆದ್ರ ದುಬೆ ಏನ್ ಮಾಡ್ತಾನ ಅನ್ನೋದ ಭಾಳ್ ಕುತೂಹಲದ್ ವಿಷಯ ನೋಡ್ರಿ.

Leave a Reply

Your email address will not be published. Required fields are marked *

You May Also Like

ಮದ್ಯದಿಂದ ವಂಚಿತರಾದರು ದಾವಣಗೆರೆ ಜನ

ಮದ್ಯದಿಂದ ವಂಚಿತರಾದರು ದಾವಣಗೆರೆ ಜನ ದಾವಣಗೆರೆ : ಮದ್ಯ ಪ್ರಿಯರ ಮನವಿಯಂತೆ ನೀನ್ನೆಯಿಂದ ಬಾರ್ ಗಳು…

ಬಿಸ್ಲಾಗ ನಿಂತಕಿಯ ನೆರಳಿನಾಟ

ಇದು ‘ಸುದ್ದಿ ಕಾಲ’! ಹಾಗಂದರೆ ಏನೆಂದು ತಿಳಿದಿರಬೇಕಲ್ಲವೆ? ಹೌದು ಅದೇ ‘ಸುದ್ದಿ’ ವಿಷಯ. ಕೆಟ್ಟ ಸುದ್ದಿಯ ಸುರಿಮಳೆ. ಈಗ ತಿಳಿಯಿತಲ್ಲ ಸಾವಿನ ಸುದ್ದಿ ಎಂದು? ಇತ್ತೀಚೆಗೆ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮವರು, ತಮ್ಮವರು, ಬಹಳ ಹತ್ತಿರದಿಂದ ಕಂಡವರು, ಸಣ್ಣ ವಯಸ್ಸಿನವರು, ವಯಸ್ಸಾದವರು, ಹೀಗೆ ಒಬ್ಬರಲ್ಲ ಒಬ್ಬರು ನಿತ್ಯ ನಮ್ಮನ್ನಗಲುತ್ತಿದ್ದಾರೆ. ಇದಕ್ಕೆ ಕೊನೆ ಎಂದು? ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಉತ್ತರವಿಲ್ಲದ ಪ್ರಶ್ನೆಗೆ ‘ಕಾಲ’ವೇ ಉತ್ತರಿಸಬೇಕು.

ವಿಧಾನ ಸಭೆಯಲ್ಲಿ ಚರ್ಚಿಸಬೇಕಿದ್ದ ನೈತಿಕತೆ, ಚರ್ಚೆ ಆಗಲೇ ಇಲ್ಲ

ಮಾನವ ತನ್ನ ಜೀವನದಲ್ಲಿ ಕೆಲವು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಮೌಲ್ಯ ಇಲ್ಲದ ಜೀವನ, ಜೀವನವೇ ಅಲ್ಲ. ನಂಬಿಕೆ. ವಿಶ್ವಾಸ,ತತ್ವ,ಸಿದ್ಧಾಂತ’ ನೈತಿಕತೆ, ಇವು ಮಾನವೀಯ ಮೌಲ್ಯಗಳು. ಇವುಗಳಲ್ಲಿ ಶ್ರೇಷ್ಠವಾದದ್ದು ನೈತಿಕತೆ.

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!!

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!! ಬೆಂಗಳೂರು : ಕೊರೊನಾ ಲಾಕ್ ಡೌನ್ ನ್ನು…