ಗದಗ ಜಿಲ್ಲೆಗೆ ಕೊರೋನಾ ಗ್ರಹಣ : ಈ 23 ದಿನದಲ್ಲಿ 262 ಹೊಸ ಪಾಸಿಟಿವ್, 115 ಸಕ್ರಿಯ, 8 ಸಾವು

ಕಂಕಣ ಗ್ರಹಣಕ್ಕೂ ಮೊದಲು ಒಟ್ಟು ಸೋಂಕಿನ ಪ್ರಕರಣ 60 ಇದ್ದದ್ದು 23 ದಿನದಲ್ಲಿ 5 ಪಟ್ಟು ಹೆಚ್ಚಿದೆ, ಸಾವಿನ ಪ್ರಮಾಣದಲ್ಲೂ 5 ಪಟ್ಟು ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿಂದು 6 ಪಾಸಿಟಿವ್, ಎರಡಂಕಿ ತಲುಪಿದ ಸಾವಿನ ಸಂಖ್ಯೆ: ಯಾವ ಊರಲ್ಲಿ ಎಷ್ಟು?

ಗದಗ: ಜಿಲ್ಲೆಯಲ್ಲಿ ಸೋಮವಾರ ದಿ.13 ರಂದು 6 ಜನರಿಗೆ ಕೊವಿಡ್-19 ಸೋಂಕು ದೃಢ ಪಟ್ಟಿದೆ. ರೋಣ ತಾಲ್ಲೂಕಿನ ಹುಲ್ಲೂರು ಗ್ರಾಮದ ನಿವಾಸಿ 26 ವರ್ಷದ ಪುರುಷ ಪಿ-38890 ಸೋಂಕು ದೃಢಪಟ್ಟಿದ್ದು ಸೋಂಕು ತಗುಲಿರುವ ಕುರಿತು ಪತ್ತೆ ಕಾರ್ಯ ನಡೆದಿದೆ.