ಕಂಕಣ ಗ್ರಹಣಕ್ಕೂ ಮೊದಲು ಒಟ್ಟು ಸೋಂಕಿನ ಪ್ರಕರಣ 60 ಇದ್ದದ್ದು 23 ದಿನದಲ್ಲಿ 5 ಪಟ್ಟು ಹೆಚ್ಚಿದೆ, ಸಾವಿನ ಪ್ರಮಾಣದಲ್ಲೂ 5 ಪಟ್ಟು ಹೆಚ್ಚಳವಾಗಿದೆ.

ಗದಗ: ಜುಲೈ 13ರ ಸೋಮವಾರದಂದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 322 ತಲುಪಿದೆ. ಈ 322 ರಲ್ಲಿ ಕಳೆದ 23 ದಿನಗಳಲ್ಲಿ 262 ಹೊಸ ಪ್ರಕರಣಗಳು ದಾಖಲಾಗಿವೆ.

ಅಮಾವಾಸ್ಯೆ ಕಂಕಣ ಗ್ರಹಣದ  ಹಿಂದಿನ ದಿನ (ಜೂನ್ 20) ಒಟ್ಟು ಸೋಂಕಿತರ ಸಂಖ್ಯೆ 60 ಇತ್ತು. ಕಂಕಣ ಗ್ರಹಣ ದಿನ ಜೂನ್ 21ರಂದು  ಒಮ್ಮೆಲೇ 18 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನ ಪಯಣ ವೇಗ ಪಡೆದುಕೊಂಡಿತು. ಅಂದಿನಿಂದ ಜುಲೈ13ರ ಸೋಮವಾರದ ಅವಧಿಯಲ್ಲಿ 23 ದಿನದಲ್ಲಿ  262  ಹೊಸ ಪ್ರಕರಣ ದಾಖಲಾಗಿ ಒಟ್ಟು ಸೋಂಕಿತರ ಸಂಖ್ಯೆ 322 ಕ್ಕೆ ಏರಿದೆ.

 ಒಟ್ಟು ಸೋಂಕಿತರುಸಕ್ರಿಯ ಕೇಸ್ಗುಣಮುಖರ ಸಂಖ್ಯೆಸಾವು  
ಜೂನ್ 20   60    19   39   02
ಜುಲೈ 13  322   134   178   10
23 ದಿನದಲ್ಲಿ ಹೆಚ್ಚಳ  262   115   139   08
23 ದಿನದಲ್ಲಿ ಶೇ. ಹೆಚ್ಚಳ   81,3 %    85.82 %   78 %   80 %
ಅಂಕಿ ಸಂಖ್ಯೆಗಳ ವಿವರ

ಜೂನ್ 20ರಂದು 19 ಇದ್ದ ಸಕ್ರಿಯ ಕೇಸುಗಳ ಸಂಖ್ಯೆ ಜುಲೈ 13 ಕ್ಕೆ 134ಕ್ಕೆ ತಲುಪಿದೆ.  ಸಕ್ರಿಯ ಕೇಸುಗಳ ಸಂಖ್ಯೆಯಲ್ಲಿ 23 ದಿನಗಳಲ್ಲಿ 7 ಪಟ್ಟು ನೆಗೆತವಾಗಿದೆ. ಎರಡು ಇದ್ದ ಸಾವಿನ ಸಂಖ್ಯೆ ಸುಮಾರು 5 ಪಟ್ಟು ಹೆಚ್ಚಿ 10 ಕ್ಕೆ ತಲುಪಿದೆ.

                       ಶೇಕಡಾವಾರು ಲೆಕ್ಕದಲ್ಲಿ

ಈ 23 ದಿನಗಳಲ್ಲಿ, (ಜೂನ್ 20-ಜುಲೈ 13)

·       ಒಟ್ಟು ಸೋಂಕಿತರ ಪೈಕಿ ಶೇ. 81.3  ಪ್ರಕರಣ ಈ 23 ದಿನದಲ್ಲಿ ದಾಖಲಾಗಿವೆ.

·       ಒಟ್ಟು ಸಕ್ರಿಯ ಕೇಸುಗಳ ಪೈಕಿ ಶೇ. 85.82 ರಷ್ಟು ಈ 23 ದಿನದಲ್ಲಿ ದಾಖಲಾಗಿವೆ..

·       ಒಟ್ಟು ಸಾವುಗಳ ಪೈಕಿ ಶೇ. 80 ರಷ್ಟು ಈ 23 ದಿನದಲ್ಲಿ ಸಂಭವಿಸಿವೆ.

·       ಒಟ್ಟು ಗುಣಮುಖರ ಪೈಕಿ ಶೇ. 78 ಜನ ಈ 23 ದಿನದಲ್ಲಿ ಗುಣಮುಖರಾಗಿದ್ದಾರೆ

Leave a Reply

Your email address will not be published. Required fields are marked *

You May Also Like

ಅಬ್ಬಿಗೇರಿ: ಕಠಿಣ ಲಾಕ್ಡೌನ್ ಮನೆ ಮನೆಗೆ ಪಡಿತರ

ನರೇಗಲ್: ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ಜಿಲ್ಲಾಡಳಿತ 5 ದಿನದವರೆಗೂ ಕಠಿಣ ಲಾಕ್ಡೌನ್ ವಿಧಿಸಿದ ಪರಿಣಾಮ, ಸಮೀಪದ ಅಬ್ಬಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪಡಿತರನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಕೈಗೊಂಡರು. ಗ್ರಾಮದಲ್ಲಿನ ಸಂಘದ ಪಡಿತರ ಚೀಟಿ ಇರುವ ಮನೆಮನೆಗೆ ತೆರಳಿ ಗ್ರಾಹಕರ ಪಡಿತರವನ್ನು ಸ್ಥಳದಲ್ಲಿಯೇ ತೂಕ ಮಾಡಿ ಹಂಚಿಕೆ ಮಾಡಲಾಗುತ್ತಿದೆ,ಕಠಿಣ ಲಾಕ್ಡೌನ್ ನಿಂದ ಜನರು ಹೊರಗಡೆ ಬರಲು ಆಗದ ಕಾರಣ ಗ್ರಾಮ ಪಂಚಾಯತಿ ಯವರು ಪಡಿತರವನ್ನು ಮನೆ ಮನೆಗೆ ಹಂಚುತ್ತಿರುವುದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನ ಸಭೆಯಲ್ಲಿ ಚರ್ಚಿಸಬೇಕಿದ್ದ ನೈತಿಕತೆ, ಚರ್ಚೆ ಆಗಲೇ ಇಲ್ಲ

ಮಾನವ ತನ್ನ ಜೀವನದಲ್ಲಿ ಕೆಲವು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಮೌಲ್ಯ ಇಲ್ಲದ ಜೀವನ, ಜೀವನವೇ ಅಲ್ಲ. ನಂಬಿಕೆ. ವಿಶ್ವಾಸ,ತತ್ವ,ಸಿದ್ಧಾಂತ’ ನೈತಿಕತೆ, ಇವು ಮಾನವೀಯ ಮೌಲ್ಯಗಳು. ಇವುಗಳಲ್ಲಿ ಶ್ರೇಷ್ಠವಾದದ್ದು ನೈತಿಕತೆ.

'ಲಾ' ಸಿನಿಮಾ ಬಗ್ಗೆ ಕುತೂಹಲಕಾರಿ ಮಾಹಿತಿ ಹಂಚಿಕೊಂಡ ನಟಿ ರಾಗಿಣಿ ಚಂದ್ರನ್‌

ಕನ್ನಡದ ʻಲಾʼ ಸಿನಿಮಾ ಬಿಡುಗಡೆಯ ಬಗ್ಗೆ ಚಿತ್ರದ ನಾಯಕಿ ಬಹಳ ಉತ್ಸುಕರಾಗಿದ್ದಾರೆ. ಇದೇ ಜುಲೈ 17…

ಅಪ್ಪಾ ಹೇಳಿದ ಹೊಡಿ ಒಂಭತ್ತಿನ ಕಥಿ ಏನು ಗೊತ್ತಾ…?

ಹಿಗ್ಗಿನಿಂದ ಕುಣಿದಾಡಿದ ಅಪ್ಪನ ಮಾತು ನಂಬಿ ಪಾಪ ಗುಂಡ ಮುಗಿಲು ನೋಡಿಕೊಂಡ ಮಲಗಿದ. ಗುಂಡನ ಅಪ್ಪನ ಹಿಗ್ಗಿಗೆ ಕಾರಣ ಏನು ಗೊತ್ತಾ..? ಹಾಗಾದ್ರೆ ಈ ಕಥೆ ಓದಿ