ನವದೆಹಲಿ: ಅಂತೂ ಇಂತೂ ಮೊಟ್ಟಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಾಸ್ಕ್ ಧರಿಸಿದ್ದಾರೆ!

ಇದು ಸುದ್ದೀನಾ ಎಂದು ನಗಬೇಡಿ. ಇದು ಸುದ್ದಿಯಾಗಬೇಕಾದ ವಿಷಯಾನೇ. ಏಕೆಂದರೆ ವಿಶ್ವದಲ್ಲೇ ಸೋಂಕಿತರ ಸಂಖ್ಯೆಯ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಸುಮಾರು 1,35,000 ಜನರು ಕೋವಿಡ್ನಿಂದ ಮೃತಪಟ್ಟಿದ್ದಾರೆ.

ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ಟ್ರಂಪ್ ಸಾರ್ವಜನಿಕ ಸ್ಥಳಗಳಲ್ಲೂ ಮಾಸ್ಕ್ ಧರಿಸಲು ನಿರಾಕರಿಸುತ್ತಲೇ ಬಂದಿದ್ದರು. ಅಧಿಕಾರಿಗಳು, ಅವರ ಪರ್ಸನಲ್ ವೈದ್ಯರು ಎಷ್ಟೇ ಒತ್ತಾಯಿಸಿದರೂ ‘ನಾ ವಲ್ಯಾ ಅಂದ್ರ ವಲ್ಯಾ ನೋಡು’ ಎಂದು ಹಠ ಮಾಡುತ್ತಲೇ ಬಂದಿದ್ದರು. ಇದರಿಂದಾಗಿ ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳಿಂದ ಭಾರಿ ಟೀಕೆ ಎದುರಿಸಿದರೂ ಅವರ ಮಾಸ್ಕ್ ದ್ವೇಷ ಕಡಿಮೆಯಾಗಿರಲಿಲ್ಲ.

ಆದರೆ ಶನಿವಾರ ಅವರು ವಾಟರ್ ರೆಡ್ ಮಿಲಿಟರಿ ಹಾಸ್ಪಿಟಲ್ಗೆ ಗಾಯಾಳು ಸೈನಿಕರನ್ನು ಭೇಟಿ ಆಗಲು ಹೋದಾಗ ನೇವಿ ಬ್ಲೂ ಮಾಸ್ಕ್ ಧರಿಸುವ ಮೂಲಕ ತಮ್ಮ ಮಾಸ್ಕ್ ವಿರೋಧಿ ವೃತ ಮುರಿದರು!

‘ಆಸ್ಪತ್ರೆಯಂತಹ ಸ್ಥಳದಲ್ಲಿ, ಅದೂ ಹಲವಾರು ಸೈನಿಕರ ಆರೋಗ್ಯ ವಿಚಾರಿಸುವ ಸಂದರ್ಭದಲ್ಲಿ ಮಾಸ್ಕ್ ಅಗತ್ಯ ಎನಿಸಿತು. ಹಾಗಾಗಿ ಮಾಸ್ಕ್ ಧರಿಸಿದೆ’ ಎಂದಿದ್ದಾರೆ.

ಅಂದರೆ ಮತ್ತೆ ಅವರ ಮಾಸ್ಕ್ ವಿರೋಧಿ ಅಭಿಯಾನ ಮುಂದುವರೆಯುವ ಲಕ್ಷಣಗಳಿವೆ. ಬರಲಿರುವ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ ಟ್ರಂಪ್ ಈಗ ಅಲ್ಲಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದು. ಮಾಸ್ಕ್ ಧರಿಸದೇ ಇರುವುದು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದು ಅಲ್ಲಿ ಟೀಕೆಗೆ ಗುರಿಯಾಗಿದೆ.

Leave a Reply

Your email address will not be published. Required fields are marked *

You May Also Like

ಗುತ್ತಿಗೆ ದಾರನಿಂದ ಕಳಪೆ ಕಾಮಗಾರಿ-ಗ್ರಾಮಸ್ಥರ ಆಕ್ರೋಶ

ಲಕ್ಷ್ಮೇಶ್ವರ: ಉತ್ತಮ ರಸ್ತೆ ನಿರ್ಮಾಣಕ್ಕೆಂದು ಸರಕಾರ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತೇ. ಆದ್ರೆ, ಗುತ್ತಿಗೆದಾರರು…

ಸಂವಿಧಾನದ ಸಮಗ್ರತೆ ಎತ್ತಿ ಹಿಡಿಯೋಣ: ಶಾಸಕ ಆರ್.‌ಬಸನಗೌಡ ತುರವಿಹಾಳ

ವರದಿ:ವಿಠ್ಠಲ ಕೇಳುತ್ ಮಸ್ಕಿ: ಜಾತ್ಯತೀತ, ಸಮಾನತೆಯ ಸಮಾಜ ನಿರ್ಮಾಣ ಗಣರಾಜ್ಯದ ಆಶಯವಾಗಿದ್ದು, ಇದನ್ನು ಸಕಾರಗೊಳಿಸುವ ಜವಬ್ದಾರಿ…

ವಾಲಿಬಾಲ್ ಪಂದ್ಯಾಟ : ಹಳಕಟ್ಟಿ ಶಾಲೆ ಬಾಲಕಿಯರ ತಂಡ ಸಾಧನೆ

ಆಲಮಟ್ಟಿ : ಸ್ಥಳೀಯ ಎಸ್.ವಿ.ವಿ.ಅಸೋಸಿಯೇಷನ್ ಶಿಕ್ಷಣ ಸಂಸ್ಥೆಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ  2022-23…

ನವೋದಯ : 9 ನೇ ವರ್ಗ ಪ್ರವೇಶಕ್ಕೆ ಅರ್ಜಿ ಆಹ್ವಾನ

ಆಲಮಟ್ಟಿ: ಜವಾಹರ ನವೋದಯ ವಿದ್ಯಾಲಯದ 9 ನೇ ವರ್ಗದ ಖಾಲಿಯಿರುವ ಸ್ಥಳಗಳ ಭರ್ತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ…