ಲಕ್ಷ್ಮೇಶ್ವರ: ಉತ್ತಮ ರಸ್ತೆ ನಿರ್ಮಾಣಕ್ಕೆಂದು ಸರಕಾರ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತೇ. ಆದ್ರೆ, ಗುತ್ತಿಗೆದಾರರು ಆ ಅನುದಾನ ಬಳಸಿಕೊಂಡು ಕಳಪೆ ಕಾಮಗಾರಿ ಮಾಡಿ, ಜನರಿಗೂ ಹಾಗೂ ಸರಕಾರಕ್ಕೆ ಮಕ್ಮಲ್ ಟೋಪಿ ಹಾಕ್ತಾರೆ ಎನ್ನುವದಕ್ಕೆ ಇದೊಂದು ಬೆಸ್ಟ್ ಉದಾಹರಣೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ತಾಂಡಾದಿಂದ ಎಂ.ಡಿ.ಆರ್ ವ್ಹಾಯಾ ಸೂವರ್ಣಗಿರಿತಾಂಡಾ ಮತ್ತು ಸೂರಣಗಿವರೆಗೆ ರಸ್ತೆ ಕಾಮಾಗಾರಿಯುವ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಹೌದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-3 ಯೋಜನೆಯಡಿಯಲ್ಲಿ ಸುಮಾರು 6.72 ಕೋಟಿ ರೂಪಾಯಿ ವೆಚ್ಚದಲ್ಲಿ 9.18 ಕಿ.ಮೀ ರಸ್ತೆ ಕಾಮಗಾರಿ ಮಂಜೂರು ಆಗಿತ್ತು ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು 2020ರಲ್ಲಿಯೇ ಪ್ರಾರಂಬಿಸಿದ್ದಾರೆ ಆದರೆ ಇಲ್ಲಿಯವರೆಗೆ ಕಾಮಗಾರಿ ಯುಕ್ತಾಯವಾಗಿಲ್ಲ. ಆದೇಶ ಪ್ರಕಾರ 2021 ರ 6 ನೇ ತಿಂಗಳಲ್ಲಿ ಮುಕ್ತಾಯವಾಗಬೇಕಿದ್ದ ಕಾಮಗಾರಿ ಇಲ್ಲಿಯವರೆಗು ಮುಕ್ತಾವಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕಳಪೆ ಕಾಮಗಾರಿಯಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಅಂತಾ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಮೇಟಲಿಂಗ್ ಮಾಡಿ ಅರ್ಧಕ್ಕೆ ನಿಲ್ಲಿಸಿ 6 ತಿಂಗಳ ಕಳೆದಿದೆ .. ರಸ್ತೆಗೆ ಹಚ್ಚಿ ಸುಮಾರು ಹೋಲಗಳು ಇವೆ . ಕಾಮಗಾರಿಯ ರಸ್ತೆಯಲ್ಲಿನ ಧೂಳು ಬೆಳೆಗಳ ಮೇಲೆ ಬಂದು ಬೆಳೆಗಳಿಗೆ ರೋಗ ಬಂದು ಬೆಳೆಗಳು ನಾಶವಾಗುತ್ತಿವೆ. ಈ ರಸ್ತೆ ಕಾಮಗಾರಿಯ ಗುತ್ತಿಗೆದಾರರು, ಸಂಭವಿಸಿದ ಅಧಿಕಾರಿಗಳು ಎಲ್ಲಿ ಇದ್ದಾರೆ ಎಂದು ಅರ್ಥ ಆಗುತ್ತಿಲ್ಲ. ಅದಷ್ಟು ಬೇಗ ಈ ರಸ್ತೆ ಪೂರ್ಣಗೊಳ್ಳದಿದ್ದರೆ ರೈತರಿಂದ ಹೋರಾಟ ಮಾಡಲಾಗುದು ಎಂದು ವಿನೋದ ಲಮಾಣಿ, ದೊಡ್ಡೂರ ತಾಂಡಾದ ರೈತ ಎಚ್ಚರಿಸಿದರು


Leave a Reply

Your email address will not be published. Required fields are marked *

You May Also Like

9 ರಿಂದ 12ನೇ ತರಗತಿಗಳು ಸದ್ಯದಲ್ಲಿ ಆಗಲಿವೆ ಓಪನ್!

ಬೆಂಗಳೂರು : ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜು ತೆರೆಯುವ ಸಿದ್ಧತೆ ರಾಜ್ಯದಲ್ಲಿ ನಡೆದಿದೆ. ಮುಂದಿನ ತಿಂಗಳಿನಿಂದ ಒಂಭತ್ತರಿಂದ 12ನೇ ತರಗತಿಯವರೆಗೆ ತರಗತಿಗಳನ್ನು ಆರಂಭಿಸಲು ಸದ್ಯ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಒಪ್ಪಿಗೆ ಸೂಚಿಸಿವೆ.

ಕೊರೋನಾ ಸೋಂಕಿತರ ಸಂಖ್ಯೆ ಬಹಿರಂಗಕ್ಕೂ ಮೀನಾಮೇಷವೇ..?

ಲಾಕ್ ಡೌನ್ ಸಡಿಲಿಕೆಯಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಕೇಂದ್ರ ಸರ್ಕಾರ ಅಂಕಿಸಂಖ್ಯೆಯನ್ನು ಬಹಿರಂಗ ಪಡಿಸಲು ಮೀನಾಮೇಷ ಎಣಿಸುತ್ತಿದೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ.

ಆರ್ ಆರ್ ನಗರ, ಶಿರಾದಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡ ಬಿಜೆಪಿ!

ಬೆಂಗಳೂರು : ರಾಜ್ಯದಲ್ಲಿ ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿದ್ದು, ಫಲಿತಾಂಶ ಇಂದು ಹೊರ ಬರುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿವೆ.

ಬೋಧಕರು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಸೂಚನೆ

2020-21 sಸಾಲಿನ ಶೈಕ್ಷಣಿಕ ವರ್ಷದ ತರಗತಿಗಳ ಪ್ರಾರಂಭಕ್ಕೆ ಅಗತ್ಯವಿರುವ ಪೂರ್ವ ಸಿದ್ಧತೆಗಳಾದ Dijital learning online/offline teaching, Study material preparation, LMS Preparation ಮುಂತಾದವುಗಳ ಬಗ್ಗೆ ತಯಾರಿ ಮಾಡಿಕೊಳ್ಳಲು, ಇಲಾಖೆ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ವಿಶ್ವವಿದ್ಯಾಲಯಗಳ ಭೋಧಕರಿಗೆ ಸೂಚಿಸಲಾಗಿದೆ.