ಇಲ್ಲಿವರೆಗೂ ‘ಒಲ್ಲೆ ನಾ ಒಲ್ಲೆ’ ಅಂತಿದ್ದರು!: ಅಂತೂ ಟ್ರಂಪ್ ಮಾಸ್ಕ್ ಧರಿಸಿದರು!

donald trum mask

ಕೊನೆಗೂ ಅಮೆರಿಕಾ ಅಧ್ಯಕ್ಷ ಟ್ರಂಪ್ ಮುಖಕ್ಕೆ ಮಾಸ್ಕ್ ಹಾಕಿಕೊಂಡರು.

ನವದೆಹಲಿ: ಅಂತೂ ಇಂತೂ ಮೊಟ್ಟಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಾಸ್ಕ್ ಧರಿಸಿದ್ದಾರೆ!

ಇದು ಸುದ್ದೀನಾ ಎಂದು ನಗಬೇಡಿ. ಇದು ಸುದ್ದಿಯಾಗಬೇಕಾದ ವಿಷಯಾನೇ. ಏಕೆಂದರೆ ವಿಶ್ವದಲ್ಲೇ ಸೋಂಕಿತರ ಸಂಖ್ಯೆಯ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಸುಮಾರು 1,35,000 ಜನರು ಕೋವಿಡ್ನಿಂದ ಮೃತಪಟ್ಟಿದ್ದಾರೆ.

ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ಟ್ರಂಪ್ ಸಾರ್ವಜನಿಕ ಸ್ಥಳಗಳಲ್ಲೂ ಮಾಸ್ಕ್ ಧರಿಸಲು ನಿರಾಕರಿಸುತ್ತಲೇ ಬಂದಿದ್ದರು. ಅಧಿಕಾರಿಗಳು, ಅವರ ಪರ್ಸನಲ್ ವೈದ್ಯರು ಎಷ್ಟೇ ಒತ್ತಾಯಿಸಿದರೂ ‘ನಾ ವಲ್ಯಾ ಅಂದ್ರ ವಲ್ಯಾ ನೋಡು’ ಎಂದು ಹಠ ಮಾಡುತ್ತಲೇ ಬಂದಿದ್ದರು. ಇದರಿಂದಾಗಿ ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳಿಂದ ಭಾರಿ ಟೀಕೆ ಎದುರಿಸಿದರೂ ಅವರ ಮಾಸ್ಕ್ ದ್ವೇಷ ಕಡಿಮೆಯಾಗಿರಲಿಲ್ಲ.

ಆದರೆ ಶನಿವಾರ ಅವರು ವಾಟರ್ ರೆಡ್ ಮಿಲಿಟರಿ ಹಾಸ್ಪಿಟಲ್ಗೆ ಗಾಯಾಳು ಸೈನಿಕರನ್ನು ಭೇಟಿ ಆಗಲು ಹೋದಾಗ ನೇವಿ ಬ್ಲೂ ಮಾಸ್ಕ್ ಧರಿಸುವ ಮೂಲಕ ತಮ್ಮ ಮಾಸ್ಕ್ ವಿರೋಧಿ ವೃತ ಮುರಿದರು!

‘ಆಸ್ಪತ್ರೆಯಂತಹ ಸ್ಥಳದಲ್ಲಿ, ಅದೂ ಹಲವಾರು ಸೈನಿಕರ ಆರೋಗ್ಯ ವಿಚಾರಿಸುವ ಸಂದರ್ಭದಲ್ಲಿ ಮಾಸ್ಕ್ ಅಗತ್ಯ ಎನಿಸಿತು. ಹಾಗಾಗಿ ಮಾಸ್ಕ್ ಧರಿಸಿದೆ’ ಎಂದಿದ್ದಾರೆ.

ಅಂದರೆ ಮತ್ತೆ ಅವರ ಮಾಸ್ಕ್ ವಿರೋಧಿ ಅಭಿಯಾನ ಮುಂದುವರೆಯುವ ಲಕ್ಷಣಗಳಿವೆ. ಬರಲಿರುವ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ ಟ್ರಂಪ್ ಈಗ ಅಲ್ಲಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದು. ಮಾಸ್ಕ್ ಧರಿಸದೇ ಇರುವುದು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದು ಅಲ್ಲಿ ಟೀಕೆಗೆ ಗುರಿಯಾಗಿದೆ.

Exit mobile version