ಕೈಗಳು ವಿವಿಧ ಮೇಲ್ಮೈಗಳನ್ನು ಆಗಾಗ ಸ್ಪರ್ಶಿಸುವುದರಿಂದ ಮುಂಗೈಯನ್ನು ಸ್ವಚ್ಛಗೊಳಿಸುವುದು ಮುಖ್ಯ. ಇದಕ್ಕಾಗಿ ಆಲ್ಕೊಹಾಲ್ ಆಧರಿತ ಸ್ಯಾನಿಟೈಸರ್ ಬಳಕೆ ಮಾಡಬೇಕು. ಆದರೆ ನೀರು ಮತ್ತು ಸೋಪ್ ಬಳಸಿ ಕೈ ತೊಳೆಯುವುದು ಕೂಡ ಅಷ್ಟೇ ಪರಿಣಾಮಕಾರಿ ಎಂಬುದನ್ನು ಡಬ್ಲೂ.ಎಚ್.ಒ. ಒತ್ತಿ ಒತ್ತಿ ಹೇಳುತ್ತ ಬಂದಿದೆ.

ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಹ್ಯಾಂಡ್ ಸ್ಯಾನಿಟೈಸರ್ಗಳೆಲ್ಲ ಆಲ್ಕೊಹಾಲ್ ಪದಾರ್ಥ ಒಳಗೊಂಡಿವೆ. ಈ ಆಲ್ಕೊಹಾಲ್ ಆಧರಿತ ಸ್ಯಾನಿಟೈಸರ್ ಬಳಸುವವರು ಈ ಕೆಳಗಿನ ಅಂಶಗಳನ್ನು ಗಮನಿಸಿ, ಪಾಲಿಸವುದು ಸೂಕ್ತ.

  1. ಮಕ್ಕಳಿಂದ ಸ್ಯಾನಿಟೈಸರ್ಗಳನ್ನು ದೂರವಿಡಿ. ಸ್ಯಾನಿಟೈಸರ್ ಬಳಸುವುದನ್ನು ಅವರಿಗೆ ಕಲಿಸಿಕೊಡಿ ಮತ್ತು ಅವರು ಬಳಸುವಾಗ ಅದನ್ನು ನೀವು ಗಮನಿಸಿ ನಿಗಾ ವಹಿಸಿ.
  2. ಕೈಯಲ್ಲಿ ಒಂದು ಸಣ್ಣ ನಾಣ್ಯದಷ್ಟು ಸ್ಯಾನಿಟೈಸರ್ ಹಾಕಿಕೊಂಡು ಲೇಪಿಸಿಕೊಂಡರೆ ಸಾಕು. ಹೆಚ್ಚಿನ ಪ್ರಮಾಣದಲ್ಲೇನೂ ಅಗತ್ಯವಿಲ್ಲ.
  3. ಸ್ಯಾನಿಟೈಸರ್ ಲೇಪಿಸಿಕೊಂಡ ಕೆಲವು ನಿಮಿಷದವರೆಗೆ ಕೈಗಳಿಂದ ನಿಮ್ಮ ಮೂಗು, ಬಾಯಿ ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ. ಹಾಗೆ ಮಾಡಿದರೆ ಅದು ತುರಿಕೆಗೆ, ಉರಿತಕ್ಕೆ ಕಾರಣವಾಗಬಹುದು. ಕೆಲವರಿಗೆ ಇನ್ಫೆಕ್ಷನ್ ಕೂಡ ಆಗಬಹುದು.
  4. ಸ್ಯಾನಿಟೈಸರ್ಗಳು ಆಲ್ಕೊಹಾಲ್ ಹೊಂದಿರುವುದರಿಂದ ದಹಿಸುವ ಗುಣ ಹೊಂದಿವೆ. ಹೀಗಾಗಿ ಬೆಂಕಿ ಬಳಸುವ (ಸ್ಟೋವ್ ಹಚ್ಚುವುದು, ದೀಪ ಹಚ್ಚುವುದು ಮತ್ತು ಊದಿನಕಡ್ಡಿ ಹಚ್ಚುವುದು) ಮುನ್ನ ಸ್ಯಾನಿಟೈಸರ್ ಲೇಪನ ಬೇಡ. ಹಾಗೆಯೇ ಅಡುಗೆ ಮಾಡುವ ಮುನ್ನವೂ ಬೇಡ. ಬೆಂಕಿ ಕೈಗೆ ತಾಗುವ ಸಾಧ್ಯತೆಗಳಿರುತ್ತವೆ.
  5. ಯಾವ ಸಂದರ್ಭದಲ್ಲೂ ಸ್ಯಾನಿಟೈಸರ್ ಕುಡಿಯಬೇಡಿ. (ಕೆಲವು ಕಡೆ ಇಂತಹ ಪ್ರಕರಣ ಸಂಭವಿಸಿ ಜೀವಕ್ಕೂ ಕುತ್ತು ಬಂದಿದೆ) . ಈ ವಿಷಯದಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಿ.
  6. ಅಂತಿಮವಾಗಿ, ನೀರು, ಸೋಪ್ ಬಳಸಿ ಕೈ ತೊಳೆಯುವುದು ಕೂಡ ಸ್ಯಾನಿಟೈಸರ್ ಬಳಸಿದಷ್ಟೇ ಪರಿಣಾಮಕಾರಿ.
Leave a Reply

Your email address will not be published.

You May Also Like

ದಾವಣಗೆರೆಯಲ್ಲಿ ಕೊರೋನಾ ಸೋಂಕು ಸೆಂಚೂರಿ..!

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 100 ಗಡಿ ದಾಟಿದೆ. ಇವತ್ತು ಒಂದೇ ದಿನ 19 ಪಾಸಿಟೀವ್ ಪ್ರಕರಣ ಪತ್ತೆಯಾಗಿದ್ದು, ಇದರಿಂದ ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ 109ಕ್ಕೆ ಏರಿಕೆಯಾಗಿದೆ.

ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಫುಲ್ ಗರಂ

ಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಅಧಿಕಾರಿಗಳು ಗರಂ ಆಗಿದ್ದಾರೆ.

ಶಿವಾಜಿನಗರದಲ್ಲಿ ಮತ್ತೆ 14 ಜನರಲ್ಲಿ ಕಂಡು ಬಂದ ಸೋಂಕು!

ಬೆಂಗಳೂರು: ಇಲ್ಲಿಯ ಶಿವಾಜಿನಗರದಲ್ಲಿ ಮತ್ತೆ 14 ಜನರಲ್ಲಿ ಸೋಂಕು ಇರುವುದು ಬೆಳಕಿಗೆ ಬಂದಿದೆ. ಹೌಸ್ ಕೀಪಿಂಗ್…

ಕೊರೊನಾ ಎಫೆಕ್ಟ್: ಎಂಜನೀಯರಿಂಗ್, ಡಿಪ್ಲೋಮಾ, ಎಂಬಿಎ, ಐಟಿಐ ಉದ್ಯೋಗಿಗಳು ನರೆಗಾ ಕೆಲಸಕ್ಕೆ..!

ಉನ್ನತ ಶಿಕ್ಷಣ ಪಡೆದು ತಿಂಗಳಾದರೆ ಸಾಕು ಕೈತುಂಬ ಸಂಬಳ ಎಣಿಸುತ್ತಿದ್ದವರು ಬದುಕಿನ ಅನಿವಾರ್ಯತೆಗೆ ನರೇಗಾ ಕೂಲಿ ಕೆಲಸಕ್ಕೆ ಹೊರಟಿದ್ದಾರೆ.