ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ದೇಶಕ್ಕೆ ಸಾಗಿಸಲ್ಪಟ್ಟ 30 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜುಲೈ 4ರಂದು ತಿರುವನಂತಪುರದಲ್ಲಿ ವಶಪಡಿಸಿಕೊಂಡು ಸ್ವಪ್ನ ಸುರೇಶ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.

ಯಾರಿದು ಸ್ವಪ್ನ-ಸುಂದರಿ?
ಕೇರಳ ಸರ್ಕಾರದ ಮುಖ್ಯಮಂತ್ರಿಗೂ ಮುಜುಗರ ತರುವಂತಾಗಲು ಈ ಸುಂದರಿಯ ಜಾಬ್ ಪ್ರೊಪೈಲ್ ಕಾರಣವಾಗುತ್ತಿರುವುದು ಹೇಗೆ? ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. ಕೇರಳ ಸರ್ಕಾರದ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್.ಐ.ಎ) ಒಪ್ಪಿಸಿದೆ.

ಈ ಹಿಂದೆ ಸ್ವಪ್ನ ಸುರೇಶ್ ಯುಎಇ ಕಾನ್ಸುಲೇಟ್ ನಲ್ಲಿ ಕೆಲಸ ಮಾಡಿದ್ದರು. ಈಗ ಚಿನ್ನವನ್ನು ಯುಎಇ ಕಾನ್ಸುಲೇಟ್ ಹೆಸರಿನ ಕಾರ್ಗೋ ಮೂಲಕ ಕೇರಳದಲ್ಲಿರುವ ಯುಎಇ ಮಿಷನ್ ಹೆಸರಿಗೆ ಕಳಿಸಿದ್ದು, ಸ್ವಪ್ನ ಈ ವಿಷಯವಾಗಿ ವಿಶೇಷ ಆಸಕ್ತಿ ತೋರಿದ್ದರು. ಈ ಕಾರಣಕ್ಕೆ ಕಸ್ಟಮ್ಸ್ ಅಧಿಕಾರಿಗಳು ಈಕೆಯನ್ನು ಬಂಧಿಸಿದ್ದಾರೆ.

ಕೇರಳ ಸರ್ಕಾರದ ಐಟಿ ಇಲಾಖೆಯ ಜೊತೆ ಪ್ರಾಜೆಕ್ಟ್ ಒಂದನ್ನು ನಡೆಸುತ್ತಿರುವ ಖಾಸಗಿ ಕಂಪನಿಯಲ್ಲಿ ಸ್ವಪ್ನ ಗುತ್ತಿಗೆ ಆಧಾರದ ಕೆಲಸ ಮಾಡುತ್ತಿದ್ದಾರೆ. ಕೇರಳ ಸಿಎಂ ಮುಖ್ಯ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದ ಶಿವಶಂಕರನ್ ಜೊತೆಗೆ ಸ್ವಪ್ನ ಆತ್ಮೀಯರಾಗಿದ್ದರು. ಈಗ ಶಿವಶಂಕರನ್ ಅವರನ್ನು ಕೇರಳ ಸರ್ಕಾರ ವಜಾಗೊಳಿಸಿದೆ. ಸಿಎಂ ಪಿಣರಾಯಿ ವಿಜಯನ್ ರಾಜೀನಾಮೆಗೆ
ಕೇರಳ ಕಾಂಗ್ರೆಸ್ ಆಗ್ರಹಿಸಿದೆ.

Leave a Reply

Your email address will not be published. Required fields are marked *

You May Also Like

ಕೊರೊನಾ ಸಂಕಷ್ಟ ಪರಿಹಾರಕ್ಕೆ ಸಿರಿವಂತರ ಮೇಲೆ ತೆರಿಗೆ ವಿಧಿಸಿ

ಬೆಂಗಳೂರು: ಸಾಹಿತಿ, ಕಲಾವಿದರು, ಜನಪರ ಹೋರಾಟಗಾರರು ಕೊರೊನಾ ಸಂಕಷ್ಟ ಪರಿಹಾರಕ್ಕಾಗಿ ಸಿರಿವಂತರ ಮೇಲೆ ಹೆಚ್ಚಿನ ತೆರಿಗೆ…

ಇನ್ಮೆಲೆ ಹೋಮ್ ಡಿಲೇವರಿ ಮೂಲಕ ಮದ್ಯ ಸಿಗುತ್ತಾ?

ಮದ್ಯ ಮಾರಾಟದ ಸ್ಥಳಗಳಲ್ಲಿ ಜನ ಸಂದಣಿ ಹೆಚ್ಚಾಗುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಹೋಮ್ ಡೆಲಿವರಿ ಕೈಗೊಳ್ಳಲು ಸಲಹೆ ನೀಡಿದೆ.

ಕರಿನಾ-ಸೈಫ್ ಅಲಿ ಖಾನ್ ದಂಪತಿಗೆ ಮತ್ತೊಂದು ಮಗು

ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿಗೆ ಮತ್ತೊಂದು ಮಗು ಜನಿಸಿದ್ದು ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.

ಕಟ್ಟಿ ಹಾಕಿದ್ದ ಕೇರಳಕ್ಕೆ ಸವಾಲು ಹಾಕಿದ ಮಹಾಮಾರಿ!

ಕೊಚ್ಚಿ : ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸೋಂಕು ಪತ್ತೆಯಾಗಿದ್ದ ಕೇರಳದಲ್ಲಿ ಕೆಲವು ದಿನಗಳಿಂದ ಮಹಾಮಾರಿ ಕಟ್ಟಿ ಹಾಕಲಾಗಿತ್ತು. ಆದರೆ, ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆಯಾಗಿದ್ದಾರೆ.