ನವದೆಹಲಿ: 45ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಅದರಲ್ಲೂ 60 ದಾಟಿದವರಿಗೆ ಕೋರೊನಾ ಸೋಂಕು ತಗುಲಿದರೆ ಮರಣ ಹೊಂದುವ ಸಾಧ್ಯತೆ ಹೆಚ್ಚು.

ಭಾರತದಲ್ಲಿ ಕೊರೋನಾ ಸೋಂಕಿನಿಂದ ಮೃತರಾದವರ ವಯಸ್ಸುಗಳನ್ನು ಪರಿಗಣಿಸಿದಾಗ ಈ ಅಂಶವೂ ಕಂಡು ಬರುತ್ತದೆ. ಆದರೆ, ಇಲ್ಲಿ ಅಷ್ಟೇನೂ ರಿಸ್ಕ್ ಇಲ್ಲ ಎನ್ನಲಾಗುವ 30-44 ವರ್ಷ ವಯೋಮಾನದವರಲ್ಲೂ ಸಾವಿನ ಪ್ರಮಾಣ ತುಸು ಹೆಚ್ಚೇ ಇದೆ. ಸೋಂಕಿನಿಂದ ಮೃತಪಟ್ಟವರಲ್ಲಿ 30-59 ವಯಸ್ಸಿನವರು ಶೇ.43 ಇದ್ದಾರೆ!

ಈ ಅಂಕಿಅಂಶ ಗಮನಿಸಿ
45ರ ನಂತರದವರು (ಜನಸಂಖ್ಯೆಯ ಶೇ.25ರಷ್ಟಿದ್ದಾರೆ) ಸೋಂಕಿತರಾದರೆ ಸಾಯುವ ಸಾಧ್ಯತೆ ಹೆಚ್ಚು. ಭಾರತದಲ್ಲಾದ ಒಟ್ಟು ಕೊರೋನಾ ಸಾವುಗಳಲ್ಲಿ 45ಕ್ಕಿಂತ ಹೆಚ್ಚಿನ ವಯಸ್ಸಿನವರ ಪ್ರಮಾಣ ಶೇ.85. ಈ ವಯೋಮಾನದ ಗುಂಪಿನಲ್ಲೇ 45-74 ವಯಸ್ಸಿನವರು ಅದಿಕ ಪ್ರಮಾಣದಲ್ಲಿ (ಶೇ.71) ಮೃತಪಟ್ಟಿದ್ದಾರೆ.

ಇನ್ನು ಅಷ್ಟೇನೂ ಸಾಯುವ ಸಾಧ್ಯತೆ ಇಲ್ಲ ಎನ್ನಲಾಗಿದ್ದ 30-44 ಮತ್ತು 45-59 ವಯೋಮಾನದ ಸೋಂಕಿತರ ಸಾವಿನ ಪ್ರಮಾಣ ಶೇ. 43ರಷ್ಟಿದೆ.

ದೇಶದಲ್ಲೀಗ ಒಟ್ಟು ಸೋಂಕಿತರು 7.67 ಲಕ್ಷ, ಗುಣಮುಖರಾದವರು 4.74 ಲಕ್ಷ, ಸಕ್ರಿಯ ಕೇಸುಗಳು 2.69 ಲಕ್ಷ, ಒಟ್ಟು ಸಾವು 21,129. ಹೆಚ್ಚು ಜನ ಗುಣಮುಖರಾಗುತ್ತಿದ್ದರೂ ಗುಣಮುಖರಾದವರ, ಮತ್ತು ಸಕ್ರಿಯ ಕೇಸುಗಳ ನಡುವೆ 2 ಲಕ್ಷ ಅಂತರವಿದೆ.

Leave a Reply

Your email address will not be published. Required fields are marked *

You May Also Like

ಗದಗ ಜಿ.ಪಂ. ಪ್ರಭಾರ ಅಧ್ಯಕ್ಷರಾಗಿ ಮಲ್ಲವ್ವ ಬಿಚ್ಚೂರ

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರು, ಇಂದು ಗದಗ ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷರ ಅಧಿಕಾರ ಸ್ವೀಕರಿಸಿದರು.

ಗದಗ ಜಿಲ್ಲೆಯ 9 ಕಂಟೇನ್‍ಮೆಂಟ್ ಪ್ರದೇಶಗಳ ನಿರ್ಭಂಧ ತೆರವು

ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾದ ಕೆಳಕಂಡ 9 ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿತ್ತು. ಇದೀಗ 9 ಪ್ರದೇಶಗಳ ನಿರ್ಭಂಧವನ್ನು ಜಿಲ್ಲಾಡಳಿತ ತೆರವುಗೊಳಿಸಲಾಗಿದೆ.

ಪುರಾಣ ಕವಿ ರಾಮಣ್ಣ ಬ್ಯಾಟಿ ಇನ್ನಿಲ್ಲ

ಗದಗ: ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಗದುಗಿನ ತೋಂಟದಾರ್ಯ ಲಿಂಗೈಕ್ಯ ಪರಮಪೂಜ್ಯ ಡಾಕ್ಟರ್ ತೋಂಟದ ಸಿದ್ದಲಿಂಗ…

ರಾಜ್ಯದಲ್ಲಿಂದು ಕೊರೊನಾ ಮರಣ ಮೃದಂಗ: ಒಂದೇ ದಿನಕ್ಕೆ 42 ಸಾವು, 1839 ಸೋಂಕಿತರು!

ಬೆಂಗಳೂರು: ರಾಜ್ಯದಲ್ಲಿಂದು 1839 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ದೃಢಪಟ್ಟ ಸೋಂಕಿತರಲ್ಲಿ…