ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ನಿಗಮದಲ್ಲಿ ನೌಕರರ ಹಕ್ಕುಗಳನ್ನು ದಮನ ಮಾಡಲು ವ್ಯವಸ್ಥಿತ ಹುನ್ನಾರ ನಡೆದಿದೆ ಎಂದು ಚಾಲಕರು ಮತ್ತು ನಿರ್ವಾಹಕರು ಆತಂಕಗೊಂಡಿದ್ದಾರೆ. ವಿಶೇಷ ರಜೆಯ ಹೆಸರಿನಲ್ಲಿ ಸಾವಿರಾರು ನೌಕರರನ್ನು ಖಾಯಂ ಮನೆಗೆ ಕಳಿಸುವ ಸಂಚು ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಇದಕ್ಕೆ ಜುಲೈ 7ರಂದು ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಬಿಎಂಟಿಸಿ, ವಾಯುವ್ಯ ಸಾರಿಗೆ ಮತ್ತು ಈಶಾನ್ಯ ಸಾರಿಗೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಪತ್ರ ಬರೆದು, ಅಧಿಕಾರಿಗಳು ಮತ್ತು ನೌಕರರಿಗೆ ಒಂದು ವರ್ಷದ ವಿಶೇಷ ರಜೆ ಕೊಡುವ ಬಗ್ಗೆ ತಮ್ಮ ಅಭಿಪ್ರಾಯ ಕಳಿಸಿ ಎಂದಿದ್ದಾರೆ. ಈ ಪತ್ರ ಎಷ್ಟು ನಯವಂಚನೆಯಿಂದ ಕೂಡಿದೆ ಎಂದರೆ, ನೌಕರರ ‘ಇಚ್ಛೆಯ ಮೇರೆಗೆ’ ಒಂದು ವರ್ಷದ ರಜೆ ಮೇಲೆ ಕಳಿಸುವುದಂತೆ!

ಇದರ ಮುಖ್ಯ ಸಂಚು ಏನೆಂದರೆ, ಸಂಬಳ ಮತ್ತು ಭತ್ಯೆ ರಹಿತ ರಜೆಯಂತೆ! ಈಗಾಗಲೇ ಲಾಕ್ ಡೌನ್ ನಂತರ ಬಸ್ ಸಂಚಾರ ಆರಂಭವಾದ ಮೇಲೆ ಅನಾರೋಗ್ಯದವರಿಗೆ ಮತ್ತು 55 ವರ್ಷ ದಾಟಿದವರಿಗೆ ಡ್ಯೂಟಿ ನಿರಾಕರಿಸುತ್ತಲೇ ಅವರನ್ನು ವಿ.ಆರ್.ಎಸ್ ಹಳ್ಳಕ್ಕೆ ದೂಡುವ ಕೆಲಸ ನಡೆದಿದೆ. ಇದೇ ಸಂದರ್ಭದಲ್ಲಿ ನೌಕರರಿಗೆ ಶೇ.4 ಬಡ್ಡಿದರದಲ್ಲಿ ನೀಡುತ್ತಿದ್ದ ಗೃಹಸಾಲ ಯೋಜನೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಪ್ರಯಾಣಿಕರ ಸಂಖ್ಯೆ ಕಡಿಮೆಯಾಯಿತು ಎಂದು ವೇತನ ರಹಿತ ರಜೆ ಮೇಲೆ ಕಳಿಸಲು ಕೆ.ಎಸ್.ಆರ್.ಟಿ.ಸಿ ಏನೂ ಸಂಪೂರ್ಣ ಖಾಸಗಿ ಸಂಸ್ಥೆಯಲ್ಲ. ಈ ಪತ್ರದಲ್ಲಿ ಬಳಸಿರುವ ಭಾಷೆಯಲ್ಲಿಯೇ ವಂಚನೆಯಿದೆ. ‘ರಜೆಯನ್ನು ಮಂಜೂರು’ ಮಾಡುವ ಬಗ್ಗೆ ಎಂಬ ವಾಕ್ಯದ ಪ್ರಕಾರ, ನೌಕರರೇ ಒಂದು ವರ್ಷದ ರಜೆ ಕೇಳುತ್ತಿದ್ದಾರೆ ಎಂದು ಬಿಂಬಿಸುವ ಯತ್ನ ನಡೆದಿದೆ.

ಇನ್ನಷ್ಟು ಓದಿ..ಕಂಡಕ್ಟರ್-ಡ್ರೈವರ್ ಗಳಿಗೆ ವೇತನ ರಹಿತ ರಜೆಗೆ ಚಿಂತನೆ?


ಸಾರಿಗೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕರ ಪತ್ರ

ಆದರೆ. ನೌಕರರು,  ಮುಖ್ಯವಾಗಿ ಚಾಲಕರು ಮತ್ತು ನಿರ್ವಾಹಕರು ಈ ಸಲಹೆಗೆ ಸಂಪೂರ್ಣವಾಗಿ ವಿರುದ್ಧವಾಗಿದ್ದಾರೆ. ಇದು ನೌಕರರು ಅನಿವಾರ್ಯವಾಗಿ ವಿ.ಆರ್.ಎಸ್ ಪಡೆದುಕೊಳ್ಳುವಂತೆ ಮಾಡುವ, ಹುನ್ನಾರ ಎನ್ನುತ್ತಾರೆ ಸಾರಿಗೆ ನಿಗಮದ ನೌಕರರು. ಹಾಗೆಯೇ ನೌಕರರನ್ನು ಅತಂತ್ರಗೊಳಿಸುವ ವ್ಯವಸ್ಥಿತ ಹುನ್ನಾರವೂ ಇದರ ಹಿಂದೆ ಇದ್ದಂತೆ ಕಾಣುತ್ತಿದೆ.

ವಿಶೇಷ ರಜೆ, ಷರತ್ತುಗಳ ಸಜೆ..! ಏನೋ ನೌಕರರಿಗೆ ಮಹಾ ಉಪಕಾರ ಮಾಡುತ್ತಿದ್ದೇವೆ ಎಂಬಂತೆ ಈ ವಿಶೇಷ ರಜೆಯ ಬಗ್ಗೆ ಬಿಲ್ಡಪ್ ಕೊಡಲಾಗುತ್ತಿದೆ. ಮೊದಲೇ ವೇತನವಿಲ್ಲ, ಭತ್ಯೆ ಇಲ್ಲ ಜೊತೆಗೆ 14 ಷರತ್ತುಗಳಿಂದ ನೌಕರರನ್ನು ಕಟ್ಟಿ ಹಾಕಲಾಗಿದೆ. ಈ ರಜೆ ಪಡೆಯುವವರು ನಿಗಮದಲ್ಲಿ ಬಾಕಿ ಉಳಿಸಿಕೊಂಡ ಹಣಕಾಸಿನ ವ್ಯವಹಾರ ಚುಕ್ತಾ ಮಾಡಬೇಕು. ನಿಗಮದ ಯಾವ ಆರ್ಥಿಕ ಸೌಲಭ್ಯಗಳು ರಜಾ ಅವಧಿಯಲ್ಲಿ ಇವರಿಗೆ ಲಭ್ಯವಿಲ್ಲ. ಬೇರೆ ಕೆಲಸ ಮಾಡಿದರೂ ಅದರಿಂದ ನಿಗಮಕ್ಕೆ ತೊಂದರೆಯಾಗಬಾರದಂತೆ. ಇಂಥ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ನಿಗಮವು ಅಂಥ ನೌಕರರನ್ನು ವಜಾಗೊಳಿಸುವ ಹಕ್ಕು ಹೊಂದಿದೆಯಂತೆ. ಅಂದರೆ ಏನಾದರೂ ತಪ್ಪು ಹುಡುಕಿ ನೌಕರರನ್ನು ಖಾಯಂ ಮನೆಗೆ ಅಟ್ಟುವ ಸಂಚು ಇದರಲ್ಲಿ ಇರುವಂತಿದೆ ಎನ್ನುವ ಸಂದೇಹ ಸಾರಿಗೆ ನೌಕರರದ್ದಾಗಿದೆ.  

ಸಾರಿಗೆ ಸಚಿವ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಮಧ್ಯ ಪ್ರವೇಶಿಸಿ ನೌಕರರ ಹಕ್ಕುಗಳನ್ನು ಕಾಪಾಡಬೇಕಿದೆ. ಇಲಾಖೆಗೆ ಹೊರೆ ಆಗಿರುವ ಲಕ್ಷ ಸಂಬಳದ ಐಎಎಸ್ ಬಿಳಿಯಾನೆಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು, ನಿಗಮದಲ್ಲಿ ಮೇಲ್ಮಟ್ಟದಲ್ಲಿ ಆಗುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು, ಸೋರಿಕೆಯನ್ನು ನಿಲ್ಲಿಸಬೇಕು, ಆಗ ನಿಗಮ ತಾನೇ ಆರ್ಥಿಕವಾಗಿ ಭದ್ರಗೊಳ್ಳುತ್ತದೆ. ವಿಶ್ವಾಸದ ಮೇಲೆ ಒಂದು ವರ್ಷದ ರಜೆ ನೀಡುವುದಾದರೆ ಕನಿಷ್ಠ ಶೇ.60 ರಷ್ಟು ಸಂಬಳವನ್ನು ನೀಡುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕಿದೆ. ಈ ಬಗ್ಗೆ ಸಾರಿಗೆ ನೌಕರರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಇನ್ನಷ್ಟು ನೋಡಿ..ಕಂಡಕ್ಟರ್-ಡ್ರೈವರ್ ಗಳಿಗೆ ಅವಮಾನದ ಆರೋಪ

Leave a Reply

Your email address will not be published. Required fields are marked *

You May Also Like

ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಲೋಕಾರ್ಪಣೆ

ಉತ್ತರ ಪ್ರಭ ದಿನ ಪತ್ರಿಕೆ ಕಾರ್ಯಾಲಯದಲ್ಲಿ ನಡೆದ ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯ ಡಾ.ಕೆ.ಯೋಗೇಶನ್ ಮಾತನಾಡಿದರು.

ಆಲಮಟ್ಟಿ 26 ಗೇಟ್ ಓಪನ್ – ಅಪಾರ ನೀರು ಹೊರಕ್ಕೆ

ಉತ್ತರಪ್ರಭ ಸುದ್ದಿಆಲಮಟ್ಟಿ: ನೆರೆಯ ಮಹಾರಾಷ್ಟ್ರ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಕೃಷ್ಣಾ ನದಿ ಹರಿವಿನಲ್ಲಿ…

ನಟಿ ಜಸ್ಲೀನ್ ಅವತಾರಕ್ಕೆ ನೆಟ್ಟಿಗರು ಶಾಕ್!

ಸೆಲೆಬ್ರಟಿಗಳಿಗೆ ಅದೆಂತೆಂಥಾ ಹುಚ್ಚಿರುತ್ತೆ ಅಂತ ಊಹಿಸೋಕು ಆಗಲ್ಲ. ಪ್ರಚಾರಕ್ಕಾಗಿ ಎಂತೆಂಥ ಚಿತ್ರವಿಚಿತ್ರ ಅವತಾರ ತಾಳುತ್ತಾರೆ ಅಂತ ಕಲ್ಪನೆಗೂ ಅಸಾಧ್ಯ. ಇಂತಹ ಪ್ರಚಾರದ ಗೀಳಿಗೆ ಬಿದ್ದ ನಟಿಯೊಬ್ಬರು ಇದೀಗ ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ.

ಗದಗ ಜಿಲ್ಲೆಯ ಪೈಲ್ವಾನರ ಮಾಶಾಸನ ಬಿಡುಗಡೆಗೆ ಒತ್ತಾಯ

ಜಿಲ್ಲಾ ಪೈಲ್ವಾನರ ಮಾಶಾಸನ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ನೀಡುವ ವೇಳೆ ಜಟಾಪಟಿ ನಡೆದ ಘಟನೆ ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ.