ಗದಗ: ಜಿಲ್ಲೆಯ ಕೋಟುಮಚಗಿ ಗ್ರಾಮದ ವಾರ್ಡ ಸಂಖ್ಯೆ 1 ಮತ್ತು 2 , ಗದಗ ತಾಲ್ಲೂಕಿನ ಹರ್ತಿ ಗ್ರಾಮದ ವಾರ್ಡ ನಂ. 1ದ ನಾವಳ್ಳಿ ಕುಟುಂಬದವರ ಪ್ರದೇಶ, ಪೂಜಾರ ಪ್ರದೇಶ, ರೋಣ ತಾಲೂಕಿನ ಕುರಡಗಿ ಗ್ರಾಮ ಪಂಚಾಯತಿ ವಾರ್ಡ ಸಂಖ್ಯೆ 2, ಶಿರಹಟ್ಟಿ ಪಟ್ಟಣದ ವಾರ್ಡ ಸಂಖ್ಯೆ 6 ಆಜಾದ ಕಾಲನಿ, ಗದಗ ಬೆಟಗೇರಿ ನಗರಸಭೆಯ ವಾರ್ಡ ನಂ.1 ಎಸ್.ಎಂ.ಕೃಷ್ಣಾನಗರ, ಈ ಏಳು ಪ್ರದೇಶಗಳನ್ನು ಕೊವಿಡ್-19 ಸೋಂಕು ನಿಯಂತ್ರಣ ಕಂಟೇನ್‌ಮೆಂಟ್ ಪ್ರದೇಶವೆಂದು ಘೋಷಿಸಿರುವುದನ್ನು ಹಿಂಪಡೆದು ಸಾಮಾನ್ಯ ವಲಯವಾಗಿ ಬದಲಾವಣೆಗೊಳಿಸಿ ಗದಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಎಂ.ಸುಂದರೇಶ್ ಬಾಬು ಆದೇಶ ಹೊರಡಿಸಿದ್ದಾರೆ.
You May Also Like
ಕೊರೊನಾ ಕಾರಣದಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ- ಸಿ.ಸಿ.ಪಾಟೀಲ್
ಕೊರೋನಾದ ಪರಿಣಾಮದಿಂದ ಕಂಗಾಲಾದ ನಾವು ನೀವೆಲ್ಲರೂ ಇದೀಗ ಹೊರಗಡೆ ಬಂದಂತಾಗಿದೆ, ಸುಮಾರು ದಿನಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಪೂಜೆ ಮಾಡದೇ ಇರುವುದಕ್ಕೆ ಕಾರಣ ಈ ಮಹಾಮಾರಿ ಕರೋನ. ಇದರಿಂದ ದೇಶದ ಬೊಕ್ಕಸ, ರಾಜ್ಯದ ಬೊಕ್ಕಸ, ವ್ಯಾಪಾರಸ್ಥರಿಗೆ ಹಿನ್ನೆಡೆ ಮತ್ತು ಉದ್ಯಮಿಗಳಿಗೆ ಭಾರೀ ತೊಂದರೆ ಉಂಟಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.
- ಉತ್ತರಪ್ರಭ
- November 30, 2020