ಬೆಂಗಳೂರು: ರಾಜ್ಯದಲ್ಲಿಂದು 204 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 6245 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 114 ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 2976 ಕೇಸ್ ಗಳು. ಈ ಮೂಲಕ ರಾಜ್ಯದಲ್ಲಿ ಈವರೆಗೆ 3195 ಸಕ್ರೀಯ ಪ್ರಕರಣಗಳಿವೆ.
ಇಂದು ಕೊರೊನಾ ಸೋಂಕಿನಿಂದ ಮೂವರು ಮೃತಪಟ್ಟಿದ್ದು, ಮೃತರ ಸಂಖ್ಯೆ 72 ಕ್ಕೆ ಏರಿಕೆಯಾಗಿದೆ. ಇಂದು ದೃಢಪಟ್ಟ ಸೋಂಕಿತರಲ್ಲಿ 157 ಕೇಸ್ ಗಳಿಗೆ ಅಂತರಾಜ್ಯ ಪ್ರವಾಸದ ಹಿನ್ನೆಲೆ ಇದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲಿಟಿನ್ ನಲ್ಲಿ ತಿಳಿಸಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು

ಕಲಬುರಗಿ – 16
ಯಾದಗಿರಿ – 66
ಉಡುಪಿ- 22
ಬೆಂಗಳೂರು ನಗರ -17
ರಾಯಚೂರು – 15
ಬೀದರ್ – 14
ಶಿವಮೊಗ್ಗ- 10
ದಾವಣಗೆರೆ – 09
ಕೋಲಾರ್ – 06
ಮೈಸೂರ್ – 05
ರಾಮನಗರ – 05
ವಿಜಯಪೂರ – 04
ಬಾಗಲಕೋಟೆ – 03
ಉತ್ತರ ಕನ್ನಡ – 03
ದಕ್ಷಿಣ ಕನ್ನಡ – 02
ಹಾಸನ – 02
ಧಾರವಾಡ- 02
ಬೆಂಗಳೂರು ಗ್ರಾಮಾಂತರ – 01
ಚಿಕ್ಕಮಗಳೂರು – 01
ಕೊಪ್ಪಳ – 01

Leave a Reply

Your email address will not be published.

You May Also Like

ಮುಳುಗದ ರವಿ‌ ಬೆಳಗು

ಪತ್ರಕರ್ತ, ಕವಿ, ಕತೆಗಾರ, ಅನುವಾದಕ, ವಿವಾದಾತ್ಮಕ ಬರಹಗಾರ ರವಿ ಬೆಳಗೆರೆ ನಿರೀಕ್ಷಿತವಾಗಿ ದೈಹಿಕವಾಗಿ ಹೋಗಿದ್ದಾರೆ. ಕುಡಿತ, ಸಿಗರೇಟ್, ರಸಿಕತೆ ರವಿಯನ್ನು ಬಲಿ ತೆಗೆದುಕೊಂಡಿದೆ. ಯಾವತ್ತಾದರೂ ಒಂದು ದಿನ ಸಾಯೋದೇ, ಹ್ಯಾಗ ಬದುಕಿದರೆ ಏನು? ಎಂಬ ಉಡಾಫೆಯೂ ಇತ್ತಲ್ಲ! ಆದರೆ ರವಿ very very colourful ಕನಸುಗಾರ. ಬದುಕಿನ ರಹಸ್ಯಗಳನ್ನು ಬಿಚ್ಚಿಟ್ಟ ಎದೆಗಾರ. ತುಂಬಾ ಕಾಡಿ ಕನಲಿದ ಹುಟ್ಟಿನ ರಹಸ್ಯ ಬಿಚ್ಚಿಟ್ಟು ನಿರಾಳವಾದ ಹೊತ್ತಲ್ಲಿ ಜೀವ ಬಿಟ್ಟ ಜಾದೂಗಾರ.

ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಕ

ಇತ್ತಿಚಿಗಷ್ಟೆ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿ ಮುಗಿದಿದ್ದು.ಕೊರೊನಾ ಕಾರಣದಿಂದ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗಳು ನಡೆಯದ ಕಾರಣ, 5 ವರ್ಷ ಅವಧಿಯನ್ನು ಮುಗಿಸಿದ ನಂತರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ,1993ರ ಪ್ರಕರಣ 8(1)ಬಿ(2)ರಡಿ ಕಲಂ 321ರ ಅಡಿಯಲ್ಲಿ ಆಡಳಿತಾಧಿಕಾರಿಗಳನ್ನು

ಅಡಕೆ ನುಂಗಿದ ಮಗು ಉಸಿರುಗಟ್ಟಿ ಸಾವು

ತಾಲೂಕು ಹೆದ್ದೂರು ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. 1 ವರ್ಷ ಒಂದು ತಿಂಗಳ ಮಗು ನಿಶಾನ್ ಮೃತಪಟ್ಟಿದೆ. ಸಂದೇಶ ಮತ್ತು ಅರ್ಚನಾ ದಂಪತಿಗಳ ಮಗು ನಿಶಾನ್ ಆರೋಗ್ಯವಾಗಿತ್ತು. ಆಟವಾಡುವಾಗ ಅಡಕೆ ನುಂಗಿದ್ದರಿಂದ, ಉಸಿರುರಾಡಲು ಕಷ್ಟವಾಗಿದೆ. ತಕ್ಷಣವೇ ಮಗುವನ್ನು ಕಟ್ಟೆಹಕ್ಕಲುವಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಅಲ್ಲಿಂದ ತೀರ್ಥಹಳ್ಳಿಯ ಜೆ. ಸಿ. ಆಸ್ಪತ್ರೆಗೆ ಕರೆತಂದು ದಾಖಲು ಮಾಡಲಾಗಿದೆ. ಆದರೆ, ಉಸಿರಾಡಲು ಕಷ್ಟವಾಗಿ ಮಗು ಮೃತಪಟ್ಟಿದೆ.

ನಾಳೆಯಿಂದ ನೀಲಗುಂದ ಗ್ರಾಮದಲ್ಲಿ ಮಹಾಶಿವರಾತ್ರಿ ಉತ್ಸವ

ಐತಿಹಾಸಿಕ, ಆಧ್ಯಾತ್ಮ ನೆಲೆಬೀಡು ನೀಲಗುಂದ ಗ್ರಾಮದ ಗುದ್ನೇಶ್ವರಮಠದ ದಿವ್ಯ ಚೇತನ ಟ್ರಸ್ಟ್ನಿಂದ ಮಾ.9 ರಿಂದ 11 ವರಗೆ ಮಹಾಶಿವರಾತ್ರಿ ಉತ್ಸವ ಹಮ್ಮಿಕೊಂಡಿದ್ದು, ಮೂರು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಹೇಳಿದರು.