ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ಸಂದರ್ಭದಲ್ಲಿ ನಮ್ಮ ಆಹಾರ ಪದ್ಧತಿ ಹೇಗಿರಬೇಕು ಎಂದು ಟಿಪ್ಸ್ ನೀಡುತ್ತ ಬಂದಿದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇವು ಸಹಾಯಕಾರಿ. ಈ ಟಿಪ್ಸ್ ಎಲ್ಲ ಕಾಲಕ್ಕೂ ಅನ್ವಯ ಆಗುವಂತಹವೇ ಆಗಿವೆ.
1) ಕೊಬ್ಬು ಮತ್ತು ಎಣ್ಣೆ ಪದಾರ್ಥಗಳ ಸೇವನೆ ಕಡಿಮೆ ಮಾಡಿ.
2) ಅಡುಗೆ ತಯಾರಿಕೆಯಲ್ಲಿ ಬೆಣ್ಣೆ, ತುಪ್ಪ ಬಳಕೆಯನ್ನು ಮಿತಗೊಳಿಸಿ. ಸೋಯಾ, ಸೂರ್ಯಕಾಂತಿ ಅಡುಗೆ ಎಣ್ಣೆ ಬಳಕೆಗೆ ಆದ್ಯತೆ ನೀಡಿ.
3) ಮಾಂಸಾಹಾರ ಸೇವಿಸುತ್ತಿದ್ದರೆ ಆದಷ್ಟು ಕೆಂಪು ಮಾಂಸಕ್ಕಿಂತ ಬಿಳಿ ಮಾಂಸ ಸೇವಿಸಿ. ಅಂದರೆ, ಕೋಳಿ ಅಥವಾ ಮೀನು ಆಹಾರ ಒಳ್ಳೆಯದು.

4) ಜಾಸ್ತಿ ಕೊಬ್ಬು ಇರುವ ಹಾಲು ಮತ್ತು ಇತರ ಡೈರಿ ಪದಾರ್ಥಗಳ ಅವಲಂಬನೆ ಕಡಿಮೆ ಇರಲಿ.
5) ಸಂಸ್ಕರಿತ ಸಿದ್ಧ ಆಹಾರದ ಬಳಕೆ ಕಡಿಮೆ ಮಾಡಿ.
6) ಅಡುಗೆ ತಯಾರಿಸುವಾಗ ಹುರಿಯುವುದಕ್ಕಿಂತ, ಕುದಿಸುವ ಅಥವಾ ಸ್ಟೀಮ್ (ಕುಕರ್) ಪದ್ಧತಿಗೆ ಆದ್ಯತೆ ನೀಡಿ.
7) ಸಿಹಿ ಪದಾರ್ಥ ಸೇವನೆ ತುಂಬ ಕಡಿಮೆ ಮಾಡಿ.
8) ಸಕ್ಕರೆ ಪದಾರ್ಥ ಮತ್ತು ಸಕ್ಕರೆ ಪ್ರಮಾಣ ಹೆಚ್ಚಿರುವ ಸಾಫ್ಟ್ ಡ್ರಿಂಕ್ಸ್ ಸೇವನೆ ಮಿತಗೊಳಿಸಿ.
9) ಕೇಕ್, ಚಾಕೊಲೇಟ್ ಸೇವನೆ ಕಡಿಮೆ ಮಾಡಿ. ಅದರ ಬದಲು ತಾಜಾ ಹಣ್ಣುಗಳಿಗೆ ಆದ್ಯತೆ ನೀಡಿ.
10) ಮಕ್ಕಳಿಗೆ ಆದಷ್ಟು ಸಕ್ಕರೆ ಹೆಚ್ಚಿರುವ ಸಿಹಿ ತಿಂಡಿ ಕೊಡುವುದನ್ನು ಕಡಿಮೆ ಮಾಡಿ. 2 ವರ್ಷದ ಒಳಗಿನ ಮಕ್ಕಳಿಗೆ ಸಕ್ಕರೆ ಮತ್ತು ಉಪ್ಪು ಬೆರೆತ ಆಹಾರ ನೀಡಬೇಡಿ. 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮತ್ತು ಉಪ್ಪು ಬೆರೆತ ಆಹಾರ ನೀಡಿ.
11) ನೀರು ಸೇವನೆ ಹೆಚ್ಚಿರಲಿ. ಸಹಜವಾಗಿ ಬಳಸುವ ನಲ್ಲಿ ನೀರು ಕುಡಿದರೂ ಸಾಕು.
12) ಶಿಶುಗಳಿಗೆ ಆದಷ್ಟು ಎದೆಹಾಲು ಉಣ್ಣಿಸಿ.