ಗದಗ: 8 ದಿನದಿಂದ ಅಗತ್ಯ ವಸ್ತು ಸಿಗದೇ ಕಂಗಾಲಾಗಿದ್ದ ಸೀಲ್ ಡೌನ್ ಪ್ರದೇಶದ ಜನರ ಎದುರು ತಹಸೀಲ್ದಾರ್ ಪ್ರತ್ಯಕ್ಷರಾದರು. ಅಸಮರ್ಪಕ ಸೀಲ್ ಡೌನ್ ನಿರ್ವಹಣೆಯಿಂದ ಸಿಟ್ಟಾಗಿದ್ದ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರಿನ ಜನರು ಶನಿವಾರ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಶನಿವಾರ ಮುಂಜಾನೆ ಬಾಲೇಹೊಸೂರಿನ ಜನರು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನ್ನು ‘ಉತ್ತರಪ್ರಭ’ ವರದಿ ಮಾಡಿತ್ತು.

ಮಧ್ಯಾಹ್ನದ ಹೊತ್ತಿಗೆ ಸೀಲ್ ಡೌನ್ ಪ್ರದೇಶಕ್ಕೆ ತಹಸೀಲ್ದಾರ್ ಭ್ರಮರಾಂಬ ಅವರು ಭೇಟಿ ಕೊಟ್ಟಾಗ ಅಲ್ಲಿನ ಮಹಿಳೆಯರು, ಯುವಕರು ಮೇಡಂರನ್ನು ತರಾಟೆಗೆ ತೆಗೆದುಕೊಂಡರು.

‘ಅಲ್ರಿ ಮೇಡಂ, 8 ದಿನಾ ಒಬ್ಬರು ಇತ್ತಾಗ ಬಂದಿಲ್ಲ. ಇಲ್ಲಿ ಎಲ್ಲ ಬಂದ್ ಮಾಡ್ಯಾರ. ಆದ್ರ ಪಂಚಾಯತಿ ಕಾರ್ಯದರ್ಶಿ ಮುಂದ್ ನಿಂತು 80 ರೂಪಾಯಕ್ಕೆ ಕೆಜಿ ಟೊಮೆಟೊ ಮಾರಿಸ್ತಾನ. ವಿಡಿಯೋ ಮಾಡಿದ್ರ ಯಾಕ್ ಮಾಡ್ತೀರಿ ಅಂತಾನ. ಇಲ್ಲಿ ನೋಡಿದ್ರ ದುಡಿಮಿ ಇಲ್ಲ, ಅಕ್ಕಿನೂ ಕೊಟ್ಟಿಲ್ಲ’ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲದಕ್ಕೂ ಮೌನವೇ ಉತ್ತರ ಎಂಬಂತಿದ್ದ ಭ್ರಮರಾಂಬರಿಗೆ ಭ್ರಮನಿರಶನದಲ್ಲಿದ್ದ ಜನರ ಎದುರು ಉತ್ತರಿಸಲಾಗಲಿಲ್ಲ.

8 ದಿನದ ನಂತರ ಬಂದ ಮೇಡಂ ಪ್ರತಿ ಮನೆಗೆ ಎರಡು ಕೆಜಿ ಅಕ್ಕಿ, ಎರಡು ಕೆಜಿ ಸಕ್ಕರಿ ಕೊಟ್ಟರಷ್ಟೇ. ಜನ ಗುಬ್ಬಿಗಳಂತೆ ಈಟೀಟು ತಿನ್ನಲು ಆಗುತ್ತಾ ಎಂಬ ಪ್ರಶ್ನೆ ಕೇಳಿ ಬಂದಿತು.

ಈಗ ಎಲ್ಲ ಒದಗಿಸುವ ಭರವಸೆಯ ಸಿಹಿಮಾತು ಹೇಳಿ ಹೋಗಿದ್ದಾರೆ. ತಮ್ಮ ಆಡಳಿತದ ತಪ್ಪು ನೋಡಿ ಭ್ರಮರಾಂಬರೇ ಭ್ರಮನಿರಶರಾಗಿರಬಹುದು ಎಂದು ಜನ ಮಾತಾಡಿಕೊಳ್ಳುವಂತಿತ್ತು ತಹಸೀಲ್ದಾರರ ವರ್ತನೆ.

Leave a Reply

Your email address will not be published. Required fields are marked *

You May Also Like

ಅನೈತಿಕ ಸಂಬಂಧ : ಪತಿ ಕೊಲೆ, ಇಬ್ಬರ ಬಂಧನ

ಅನೈತಿಕ ಸಂಬಂಧ ಹೊಂದಿದ್ದ ಪತ್ನಿ ಪ್ರೀಯಕರನ ಜತೆಗೂಡಿ ಪತಿನ್ನೆ ಕೊಲೆ ಮಾಡಿರುವ ಘಟನೆ ಸಮೀಪದ ಕಬಲಾಯತಕಟ್ಟಿ ತಾಂಡದಲ್ಲಿ ಗುರುವಾರ ನಡೆದಿದೆ.

ಬಹುರಾಷ್ಟ್ರೀಯ ಕಂಪನಿಗೆ ಆಯ್ಕೆ

ಉತ್ತರಪ್ರಭ ಗದಗ: ನಗರದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಕ್ಯಾಪ್ ಜೆಮಿನಿ ಬಹುರಾಷ್ಟ್ರಿಯ ಕಂಪನಿಗೆ ಆಯ್ಕೆಯಾಗಿದ್ದಾರೆ.…

ಆದರಹಳ್ಳಿ ಗ್ರಾಮದಲ್ಲಿ ಎಗ್ಗಿಲ್ಲದೆ ಸಾಗಿದ ಅಕ್ರಮ ಮಣ್ಣು ಮತ್ತು ಮರಳು ದಂಧೆ

ವರದಿ: ಸುರೇಶ ಲಮಾಣಿ ಉತ್ತರಪ್ರಭ ಲಕ್ಷ್ಮೇಶ್ವರ: ತಾಲೂಕಿನ ಆದರಹಳ್ಳಿ ಗ್ರಾಮದ ರೈತರು ನಾದಿಗಟ್ಟಿ ಹದ್ದಿನಲ್ಲಿ ಬರುವ…

ಮಲಗಿದೆ ರಾಜ್ಯ ಮಾಹಿತಿ ಹಕ್ಕು ವೆಬ್ ಸೈಟ್!: ಮಾಹಿತಿ ಮುಚ್ಚಿಡುವ ಯತ್ನದ ಆರೋಪ

ಜನರಿಗೆ ಮಾಹಿತಿ ಒದಗಿಸಲೆಂದೇ ಮಾಹಿತಿ ಹಕ್ಕು ಜಾರಿಗೆ ಬಂದಿದೆ. ಆದರೆ, ಜನರು ಬಯಸುವ ಮಾಹಿತಿ ನೀಡಲು ಮಾಹಿತಿ ಹಕ್ಕು ಆಯೋಗ ಹಿಂದೇಟು ಹಾಕುತ್ತಿದೆಯೇ ಎಂಬ ಸಂದೇಹ ಬರುವಂತಾಗಿದೆ. ಕಳೆದ ಒಂದು ತಿಂಗಳಿಂದ ರಾಜ್ಯದ ಮಾಹಿತಿ ಹಕ್ಕು ಅಂತರ್ಜಾಲ ತಾಣ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅರ್ಜಿ ಹಾಕಲು ಬಯಸುವವರು ನಿರಾಶರಾಗಿ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ.