ಗದಗ: ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ, ಗದಗ ಜಿಲ್ಲಾ ಪಂಚಾಯತಿ ಗಜೇಂದ್ರಗಡ, ಲಕ್ಷ್ಮೇಶ್ವರ ತಾಲೂಕು ಪಂಚಾಯತಿಗಳಲ್ಲಿನ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಹೊರಸಂಪನ್ಮೂಲ ಎಜೆನ್ಸಿ ಯಿಂದ ಭರ್ತಿ ಮಾಡಿಕೊಳ್ಳಲು ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆವ್ಹಾನಿಸಲಾಗಿದೆ.

ಅರ್ಜಿಯನ್ನು https://gadag.nic.in ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-08-2020 ರವರೆಗೆ ಅವಕಾಶ ಇರುತ್ತದೆ. ಮಾಹಿತಿಗಾಗಿ 08372-235947 ಸಂಪರ್ಕಿಸಬಹುದು.

ಹುದ್ದೆಗಳ ವಿವರ

1) ತಾಲೂಕು ತಾಂತ್ರಿಕ ಸಂಯೋಜಕರು
ಹುದ್ದೆಗಳ ಸಂಖ್ಯೆ-02
ವಿದ್ಯಾರ್ಹತೆ: ಬಿಇ/ಬಿಟೆಕ್(ಇನ್ ಸಿವಿಲ್ ಇಂಜನೀಯರಿಂಗ್ ಮತ್ತು ಗಣಕ ಯಂತ್ರದ ಬಗ್ಗೆ ಜ್ಞಾನ ಹೊಂದಿರಬೇಕು) ಡಿಪ್ಲೋಮಾ ವಿದ್ಯಾರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಗರೀಷ್ಟ ವಯೋಮಿತಿ: 45 ವರ್ಷ ಹಾಗೂ 36 ತಿಂಗಳ ಕೆಲಸದ ಅನುಭವ ಹೊಂದಿರಬೇಕು. ಪ್ರಸ್ತುತ ಈ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವವರಿಗೆ ವಯೋಮಿತ 4 ವರ್ಷ ಸಡಿಲಿಕೆ ಇರುತ್ತದೆ.

2) ತಾಲೂಕು ಎಮ್.ಐ.ಎಸ್ ಸಂಯೋಜಕರು

ಹುದ್ದೆಗಳು: 02
ವಿದ್ಯಾರ್ಹತೆ: ಎಮ್.ಸಿ.ಎ ಅಥವಾ ಕಂಪ್ಯೂಟರ್, ಎಲೇಕ್ಟ್ರಾನಿಕ್ಸ್ ಇಂಜನೀಯರಿಂಗ್ ಪದವಿಧರರು ಜೊತೆಗೆ ಪಿಜಿ ಡಿಸಿಎ ಪದವಿಧರರು ಅರ್ಹರಿರುತ್ತಾರೆ.
ಗರೀಷ್ಟ ವಯೋಮಿತಿ: 40 ವರ್ಷ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರಿಗೆ ವಯೋಮಿತಿಯಲ್ಲಿ 4 ವರ್ಷ ಸಡಲಿಕೆ ಇದೆ.

3) ತಾಲೂಕು ಐಇಸಿ ಸಂಯೋಜಕರು
ವಿದ್ಯಾರ್ಹತೆ: ಮಾಸ್ ಕಮ್ಯೂನಿಕೇಶನ್ ನಲ್ಲಿ ಪದವಿ ಅಥವಾ ಯಾವುದೇ ಸ್ನಾತಕೋತ್ತರ ಪದವಿಧರ ಕನಿಷ್ಟ ಮಾಸ್ ಕಮ್ಯೂನಿಕೇಶನ್ ನಲ್ಲಿ ಡಿಪ್ಲೋಮಾ ಮುಗಿಸಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ. ಗರೀಷ್ಟ ವಯೋಮಿತಿ : 45 ವರ್ಷ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರಿಗೆ 4 ವರ್ಷ ವಯೋಮಿತಿ‌ ಸಡಿಲಿಕೆ. ಹಾಗೂ 36 ತಿಂಗಳ ಅನುಭವ ಹೊಂದಿದವರು ಅರ್ಹರು.

4) ಗಣಕಯಂತ್ರ ನಿರ್ವಾಹಕರು(ಡೆಟಾ ಎಂಟ್ರಿ ಆಪರೇಟರ್)
ಹುದ್ದೆಗಳು :02
ವಿದ್ಯಾರ್ಹತೆ: ಪಿಯುಸಿ ಯಲ್ಲಿ ಶೇ.40 ರಷ್ಟು ಅಂಕ ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯ. ಕಂಪ್ಯೂಟರ್ ನಲ್ಲಿ ಕನ್ನಡ ಮತ್ತು ಇಂಗ್ಲೀಷ್ ನಿಮಿಷಕ್ಕೆ 35 ಶಬ್ದಗಳನ್ನು ಟೈಪ್ ಮಾಡುವ ಸಾಮಾರ್ಥ್ಯ ಹೊಂದಿರಬೇಕು. 36 ತಿಂಗಳ ಅನುಭವ ಉಳ್ಳವರಾಗಿರಬೇಕು.

1 comment
Leave a Reply

Your email address will not be published. Required fields are marked *

You May Also Like

ಸಿಡಿಲು ಬಡಿದು ಇಬ್ಬರು ಸಾವು

ಉತ್ತರಪ್ರಭಶಿರಹಟ್ಟಿ: ಪಟ್ಟಣದ ಹೊರವಲಯದಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ…

ರೋಣ ಸಾಹಿತ್ಯ ಭವನದಲ್ಲಿ ಶ್ರೀ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆ

ರೋಣ: ಸಾಹಿತ್ಯ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ…

ತಂದೆ ಬರ್ತಡೆಗೆ ಕೇಕ್ ತರಲು ಬಂದವರ ಬೈಕ್ ಜಪ್ತಿ!

ಗದಗ: ಜೂ.1ರವರೆಗೆ ಗದಗ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದಾಗ್ಯೂ ಜನರು ಮಾತ್ರ ಅನಾವಶ್ಯಕ ಓಡಾಟ ನಿಲ್ಲಿಸುತ್ತಿಲ್ಲ. ತಂದೆಯ ಹುಟ್ಟು ಹಬ್ಬ ಹಿನ್ನೆಲೆ ಕೇಕ್ ತರಲು ಹೊರ ಬಂದವರನ್ನು ತಡೆದ ಪೊಲೀಸರು ಬೈಕ್ ಸೀಜ್ ಮಾಡಿದ್ದಾರೆ.

ಮುಳಗುಂದ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ಶಿವಣ್ಣ ನೀಲಗುಂದ ಆಯ್ಕೆ

ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ…