ಉತ್ತರಪ್ರಭ ಸುದ್ದಿ

ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹೊರವಲಯದಲ್ಲಿರುವ ಜ್ಞಾನಮುದ್ರಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಅಪರೂಪದ ಕರಿನಾಗರ ಪ್ರತ್ಯಕ್ಷವಾಗಿತ್ತು, ಸ್ಥಳೀಯರ ಸಹಾಯದಿಂದ ನಾಗರ ಹಾವನ್ನ ರಕ್ಷಿಸಲಾಗಿದೆ.

ಅಪರೂಪದ ಕಪ್ಪು ಬಣ್ಣದ ಕರಿನಾಗರ

ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಶಾಲೆ ಆವರಣದಲ್ಲಿ ಕರಿನಾಗರ ಕಂಡಿತ್ತು. ಕಟ್ಟಡ ಕೆಸಗಾರರು ಗಮನಿಸಿ ವಿಷ್ಯವನ್ನ ಶಾಲೆ ಮುಖ್ಯಸ್ಥರಿಗೆ ತಿಳಿಸಿದ್ರು.. ಉರಗ ತಜ್ಞರೂ ಆಗಿರುವ ಶಾಲೆ ಪ್ರಾಚಾರ್ಯ ಮಂಜುನಾಥ್ ಎಸ್ ನಾಯಕ್ ಅವರು ಉರಗವನ್ನ ರಕ್ಷಿಸಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಅಪರೂಪದ ಹಾವನ್ನ ರಕ್ಷಣೆ ಮಾಡಿದ ಮಂಜುನಾಥ್ ಅವರು, ಹಾವನ್ನ ಕಂಡಾಗ ಕೊಲ್ಲಬೇಡಿ.. ಹತ್ತಿರ ಲಭ್ಯವಿರುವ ಉರಗಸಂರಕ್ಷರನ್ನ ಸಂಪರ್ಕಿಸಬೇಕು. ಉರಗಗಳನ್ನ ರಕ್ಷಿಸಿ ಅವುಗಳ ಆವಾಸಕ್ಕೆ ಬಿಡಬೇಕು,ಇದೊಂದು ನಿಶಾಚಾರಿ ಹಾವು ಆಗಿರುವುದರಿಂದ ಹಲ್ಲಿ ಮತ್ತು ಹಾವು ರಾಣಿಗಳನ್ನು ಸೇವಿಸುತ್ತದೆ. ಇದು ನಿಸರ್ಗಕ್ಕೆ ನಾವು ತೋರುವ ಗೌರವ ಅಂತಾ ಮಂಜುನಾಥ್ ಸಂದೇಶ ನೀಡಿದ್ದಾರೆ‌.

  • ಕಪ್ಪು ಬಣ್ಣದ ನಾಗರಹಾವಿನ ಮಾಹಿತಿ..

ಭಾರತದ ಭೌಗೋಳಿಕ ಪ್ರದೇಶಕ್ಕೆ ತಕ್ಕಂತೆ ಸಾಮಾನ್ಯವಾಗಿ ನಾಗರ ಹಾವುಗಳ (ಮಾರ್ಫ್) ದೆಹದ ಚರ್ಮದ ವರ್ಣವು ಗೋಧಿ ಬಣ್ಣ, ಕಂದು ಬಣ್ಣ, ಗಾಢ ಕಂದು ಬಣ್ಣದಿಂದ ಕೂಡಿರುತ್ತದೆ. ಚರ್ಮದ ಬಣ್ಣಕ್ಕೆ ಕಾರಣ ವಾದ ವರ್ಣದ್ರವ್ಯ ಮೆಲಾನಿನ್‌ನ್ನ ಸ್ರವಿಸುವಿಕೆಯ ಪ್ರಮಾಣದಲ್ಲಿ ವ್ಯತ್ಯಾಸವಾದಾಗ ನಾಗರಹಾವುಗಳ ಮೈಬಣ್ಣವು ವ್ಯತ್ಯಾಸವಾಗುತ್ತದೆ. ಮೆಲಾನಿನ್ ವರ್ಣದ್ರವ್ಯವು ಚರ್ಮ, ಕಣ್ಣು ಮತ್ತು ಕೂದಲಿಗೆ ಬಣ್ಣವನ್ನು ಒದಗಿಸುತ್ತದೆ. ಇದಲ್ಲದೆ ಮೆಲಾನಿನ್ ಸೂರ್ಯನಿಂದ ಬರುವವ ನೇರಳಾತಿತ ಕಿರಣಗಳಿಂದ ರಕ್ಷಿಸುತ್ತದೆ. ಹಾವುಗಳನ್ನೊಳಗೊಂಡತೆ ಈ ವರ್ಣ ದ್ರವ್ಯವು ಅನೇಕ ಪ್ರಾಣಿಗಳಲ್ಲಿ ಮರೆಮಾಚುವಿಕೆಗೆ (ಕ್ಯಾಮೊಫ್ಲಾಜ್), ಥರ್ಮೋರೆಗ್ಯೂಲೇಷನ್‌ನ (ಉಷ್ಣಗ್ರಾಹಿ) ಕಾರ್ಯವನ್ನು ನಿರ್ವಹಿಸುತ್ತದೆ. ಇದಲ್ಲದೆ ಮೆಲಾನಿನ್ ಸೂರ್ಯನಿಂದ ಬರುವವ ನೇರಳಾತಿತ (ಅಲ್ಟಾವೈಲೆಟ್ ರೇ) ಕಿರಣಗಳಿಂದ ರಕ್ಷಿಸುತ್ತದೆ. ಹಾವುಗಳನ್ನೊಳ ಗೊಂಡಂತೆ ಈ ವರ್ಣ ದ್ರವ್ಯವು ಅನೇಕ ಪ್ರಾಣಿಗಳಲ್ಲಿ ಮರೆಮಾಚುವಿಕೆಗೆ (ಕ್ಯಾಮೊಫ್ಲಾಜಿ), ಥರ್ಮೋರೆಗ್ಯೂಲೇಷನ್‌ನ (ಉಷ್ಣಗ್ರಾಹಿ) ಕಾರ್ಯವನ್ನು ನಿರ್ವಹಿಸುತ್ತದೆ. ಮೆಲಾನಿನ್ ವರ್ಣದ್ರವ್ಯದ ಸ್ರವಿಸುವಿಕೆಯು ಹಠಾತ್ ಅನುವಂಶಿಕ ಬದಲಾವಣೆಯಿಂದಾಗಿ ಉಂಟಾಗಿ ಹಾವುಗಳಲ್ಲಿ ಈ ವೀರಳ ವಿದ್ಯಮಾನವು ಅಲ್ಬಿನಿಸ್‌ ಮತ್ತು ಲ್ಯೂಯೋಸಿಸ್ಟಿಕ್ ಹಾವುಗಳ ಜನನಕ್ಕೆ ಕಾರಣವಾಗುತ್ತದೆ. ಈ ವಿದ್ಯಮಾನದ ಹಾವುಗಳ ಆಯುಷ್ಯ ಕಡಿಮೆಇರುವುದರಿಂದ ನಿಸರ್ಗದಲ್ಲಿ ಇವು ಬದುಕಿಉಳಿಯುವುದು ತುಂಬಾ ವೀರಳ. ಮೆಲಾನಿನ್ ವರ್ಣದ್ರವ್ಯದ ಸ್ರವಿಸುವಿಕೆ ಹೆಚ್ಚಾದಾಗ ಹಾವುಗಳು ಮೈ ಬಣ್ಣವು ಕಪ್ಪುರೂಪಕ್ಕೆ( ಬ್ಲಾಕ್ ಮಾರ್ಫ್ ಕೋಬ್ರಾ) ತಿರುಗುತ್ತದೆ. ಇಂತಹ ನಾಗರವಾವುಗಳಿಗೆ ಕರಿನಾಗರ ಎನ್ನುವರು.

ಮೆಲಾನಿನ್ ವರ್ಣದ್ರವ್ಯದ ಸ್ರವಿಸುವಿಕೆಯು ಹಠಾತ್ ಅನುವಂಶಿಕ ಬದಲಾವಣೆಯಿಂದಾಗಿ ಉಂಟಾಗಿ ಹಾವುಗಳಲ್ಲಿ ಈ ವಿರಳ ವಿದ್ಯಮಾನವು ಅಲ್ಬಿನಿಸ್‌ ಮತ್ತು ಲ್ಯೂಯೋಸಿಸ್ಟಿಕ್ ಹಾವುಗಳ ಜನನಕ್ಕೆ ಕಾರಣವಾಗುತ್ತದೆ. ಈ ವಿದ್ಯಮಾನದ ಹಾವುಗಳ ಆಯುಷ್ಯ ಕಡಿಮೆಇರುವುದರಿಂದ ನಿಸರ್ಗದಲ್ಲಿ ಇವು ಬದುಕಿಉಳಿಯುವುದು ತುಂಬಾ ವೀರಳ. ಮೆಲಾನಿನ್ ವರ್ಣದ್ರವ್ಯದ ಸ್ರವಿಸುವಿಕೆ ಹೆಚ್ಚಾದಾಗ ಹಾವುಗಳು ಮೈ ಬಣ್ಣವು ಕಪ್ಪುರೂಪಕ್ಕೆ(ಬ್ಲಾಕ್ ಮಾರ್ಫ್ ಕೋಬ್ರಾ) ತಿರುಗುತ್ತದೆ. ಇಂತಹ ನಾಗರವಾವುಗಳಿಗೆ ಕರಿನಾಗರ ಎನ್ನುವರು. ಈ ವಿದ್ಯಮಾನದ ಕಪ್ಪುವರ್ಣದ ಹಾವುಗಳು ಉತ್ತರ ಭಾರತದ ರಾಜ್ಯಗಳಲ್ಲಿ ಆಗ ಆಗ ಗೊಚರಿಸುತ್ತವೆ. ವಿಶೇಷವಾಗಿ ರಾಜಸ್ಥಾನ ಮತ್ತು ಗುಜರಾತನಲ್ಲಿ ಈ ಮಾರ್ಫನ ನಾಗರ ಹಾವುಗಳು ದಾಖಲಾಗಿವೆ. ಕರ್ನಾಟಕದಲ್ಲಿ ಈ ವಿದ್ಯಮಾನದ ಕರಿನಾಗರ ಹಾವುಗಳು ತೀರಾ ವೀರಳವಾಗಿ ಗೊಚಸಿದ್ದು ಅಧಿಕೃತವಾಗಿ ದಾಖಲಾದ ಮಾಹಿತಿ ಇಲ್ಲ.. ಇಂತಹ ಹಾವುಗಳನ್ನು ಹೈಪರ್‌ಮೆಲಾನಿಸ್ಟಿಕ್ ಕೋಬ್ರಾ ಎಂತಲೂ ಕರೆಯಬಹುದು.

ಅಬ್ಬಬ್ಬಾ ಎಂದರೆ ಗರಿಷ್ಠ 18 ಇಂಚು ಮಾತ್ರ ಇದರ ಬೆಳವಣಿಗೆ, ಕಪ್ಪು ತಲೆ, ದೇಹದ ಮೇಲಿರುವ ಕಪ್ಪು ಬಣ್ಣದ ಸಣ್ಣ ಸಣ್ಣ ಚುಕ್ಕಿಗಳಿಂದ ಇದನ್ನು ಗುರುತಿಸಬಹುದಾಗಿದೆ. ಇದು ಹಗಲಿನಲ್ಲಿ ಗೋಚರಿಸಿಕೊಳ್ಳುವುದು ಅತಿ ವೀರಳ. ರಾತ್ರಿ ವೇಳೆ ಕಾಣಿಸಿಕೊಳ್ಳುವುದರಿಂದ ರಸ್ತೆ ಅಪಘಾತಕ್ಕೆ ಸಿಲುಕಿ ಸಾವನ್ನಪ್ಪುತ್ತದೆ.

ಮಂಜುನಾಥ ನಾಯಕ್‌,ಉರಗ ತಜ್ಞ
Leave a Reply

Your email address will not be published. Required fields are marked *

You May Also Like

ರಾಜ್ಯ ಸರ್ಕಾರಿ ನೌಕರರ ಡಿಎ ಗೆ ಕತ್ತರಿ..!

ಲಾಕ್‌ಡೌನ್ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಭಾರಿ ಪೆಟ್ಟು ನೀಡಿದೆ. ಇದರಿಂದಾಗಿ ಸರ್ಕಾರ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಕಾರಣದಿಂದ ರಾಜ್ಯ ಸರ್ಕಾರ ನೌಕರರ ಡಿಎಗೆ ಕತ್ತರಿ ಹಾಕಲಿದೆ..?

ಗದಗ ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೊರೊನಾ ಪಾಸಿಟಿವ್..!

ಗದಗ: ಜಿಲ್ಲೆಯಲ್ಲಿಂದು ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ…